LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ವಿರಾಜಪೇಟೆಯಲ್ಲಿ ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾದಿಂದ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮ

ವಿರಾಜಪೇಟೆ, ಅಕ್ಟೋಬರ್ 6, 2026: ಶ್ರೀ ಶ್ರೀ ಪರಮಹಂಸ ಯೋಗಾನಂದರು 1917ರಲ್ಲಿ ಸ್ಥಾಪಿಸಿದ ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (YSS)  ವತಿಯಿಂದ ವಿಶೇಷ ಆಧ್ಯಾತ್ಮಿಕ ಕರ‍್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಾಚೀನ ವೈಜ್ಞಾನಿಕ ಕ್ರಿಯಾ ಯೋಗ ಧ್ಯಾನವನ್ನು ಪರಿಚಯಿಸುವುದು ಹಾಗೂ ಅಂತರಂಗದ ಶಾಂತಿ, ಭಕ್ತಿ ಮತ್ತು ಆಧ್ಯಾತ್ಮಿಕ ಚಿಂತನೆಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಕಾರ್ಯಕ್ರಮವು ಮಂಗಳವಾರ, ಅಕ್ಟೋಬರ್ 6, 2026ರಂದು ಬೆಳಗ್ಗೆ 9.30ರಿಂದ ಶ್ರೀ ಕಾವೇರಿ ಆಶ್ರಮ, ವಿರಾಜಪೇಟೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಿರಿಯ ಸನ್ಯಾಸಿಗಳ ನೇತೃತ್ವದಲ್ಲಿ ಮರ‍್ಗರ‍್ಶಿತ ಧ್ಯಾನ, ಭಜನೆಗಳು ಹಾಗೂ ಆಧ್ಯಾತ್ಮಿಕ ಪ್ರವಚನ ನಡೆಯಲಿದ್ದು, ಭಾಗವಹಿಸುವವರು ಧ್ಯಾನವನ್ನು ಕಲಿತು ಅಂತರಂಗದ ಶಾಂತಿಯನ್ನು ಪಡೆಯಬಹುದು. ಕ್ರಿಯಾ ಯೋಗವನ್ನು ಕಲಿಯಲು ಮತ್ತು ಪಾಠಗಳಿಗೆ ನೋಂದಾಯಿಸಿಕೊಳ್ಳಲು ಆಸಕ್ತರಿಗೆ ಅಗತ್ಯ ಮರ‍್ಗರ‍್ಶನವೂ ನೀಡಲಾಗುತ್ತದೆ.

ವೈಎಸ್ಎಸ್ ಪರಂಪರೆಯಲ್ಲಿ ಬೋಧಿಸಲಾಗುವ ಕ್ರಿಯಾ ಯೋಗವು ಪ್ರಾಚೀನ ಹಾಗೂ ಶಕ್ತಿಯುತ ವೈಜ್ಞಾನಿಕ ಧ್ಯಾನ ತಂತ್ರಗಳಾಗಿದ್ದು, ವಿಶ್ವಪ್ರಸಿದ್ಧ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಪರಮಹಂಸ ಯೋಗಾನಂದರು ಈ ತಂತ್ರಗಳನ್ನು ಜಗತ್ತಿಗೆ ಪರಿಚಯಿಸಿದರು. ಕ್ರಿಯಾ ಯೋಗವು ಅಂತರಂಗದ ಶಾಂತಿ, ದೈವಿಕ ಆನಂದ, ಜ್ಞಾನ ಮತ್ತು ಪ್ರತಿಯೊಬ್ಬರೊಳಗಿರುವ ದೈವಿಕ ಚೈತನ್ಯದ ಅರಿವನ್ನು ಬೆಳೆಸಲು ಸಹಕಾರಿಯಾಗಿದೆ.

ಅಮರ ಹಿಮಾಲಯದ ಮಹಾಗುರು ಶ್ರೀ ಶ್ರೀ ಮಹಾವತಾರ್ ಬಾಬಾಜಿ ಅವರು ಕ್ರಿಯಾ ಯೋಗದ ವಿಜ್ಞಾನವನ್ನು ಆಧುನಿಕ ಜಗತ್ತಿಗೆ ನೀಡಿದರು. ಮಹಾನ್ ಗುರು ಪರಮಹಂಸ ಯೋಗಾನಂದರು ಅದನ್ನು ವಿಶ್ವದಾದ್ಯಂತ ಪಸರಿಸಿದರು. ಪ್ರಸ್ತುತ ದ್ವಾಪರ ಯುಗದಲ್ಲಿ ಕ್ರಿಯಾ ಯೋಗದ ಈ ಪ್ರಾಚೀನ ಜ್ಞಾನವು ವಿಶ್ವದಾದ್ಯಂತ ಜನರನ್ನು ತಲುಪಿದೆ.

ಯೋಗಾನಂದಜಿಯವರ “ಯೋಗಿಯ ಆತ್ಮಕಥೆ” ಕೃತಿಯು ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಕ್ರಿಯಾ ಧ್ಯಾನದ ಪರಿಚಯ ಮಾಡಿಕೊಟ್ಟಿದೆ. ಪ್ರಾಚೀನ ಭಾರತದ ಅಮರ ಆಧ್ಯಾತ್ಮಿಕ ಧ್ಯಾನ ಪರಂಪರೆಯ ಪರಿಚಯವನ್ನು ಜಗತ್ತಿಗೆ ಮಾಡಿಕೊಟ್ಟ ಅತ್ಯಂತ ಜನಪ್ರಿಯ ಆಧ್ಯಾತ್ಮಿಕ ಕೃತಿಗಳಲ್ಲಿ ಇದೂ ಒಂದಾಗಿದೆ. ಈ ಧ್ಯಾನ ಪರಂಪರೆಯು ಮಾನವನ ಚೈತನ್ಯವನ್ನು ಉನ್ನತ ದೈವಿಕ ಸ್ಥಿತಿಗಳತ್ತ ವಿಕಸನಗೊಳಿಸುವುದನ್ನು ಪ್ರತಿಪಾದಿಸುತ್ತದೆ.

ಕಾರ್ಯಕ್ರಮದ ಅಂಗವಾಗಿ ಆಧ್ಯಾತ್ಮಿಕ ಸಾಹಿತ್ಯ ಹಾಗೂ ಛಾಯಾಚಿತ್ರಗಳ ಪ್ರರ‍್ಶನ ಮತ್ತು ಮಾರಾಟ ಕೂಡ ನಡೆಯಲಿದ್ದು, ಕ್ರಿಯಾ ಯೋಗದ ಬೋಧನೆಗಳು ಮತ್ತು ತತ್ತ್ವಶಾಸ್ತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಸಂರ‍್ಶಕರಿಗೆ ಅವಕಾಶ ದೊರೆಯಲಿದೆ.ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸರ‍್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸತ್ಸಂಗದಲ್ಲಿ ಭಾಗವಹಿಸಿ, ಮರ‍್ಗರ‍್ಶಿತ ಧ್ಯಾನ, ಭಕ್ತಿ ಮತ್ತು ಆಧ್ಯಾತ್ಮಿಕ ಕಲಿಕೆಯ ಅನುಭವವನ್ನು ಪಡೆಯುವಂತೆ ಆಯೋಜಕರು ಆಹ್ವಾನಿಸಿದ್ದಾರೆ.ವೈಎಸ್ಎಸ್ ಪಾಠಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ನೋಂದಣಿ ಪುಟಕ್ಕೆ ಭೇಟಿ ನೀಡಬಹುದು:

yssofindia.org/yss-lessons

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST