LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
International News

ಒರೆಗಾನ್ ಶಾಲೆಯಲ್ಲಿ ಗುಂಡಿನ ದಾಳಿ: 

ಮೂವರು ಮಕ್ಕಳು, ಶಿಕ್ಷಕ ಸೇರಿ ನಾಲ್ವರ ಸಾವು


ಅಮೆರಿಕದ ಒರೆಗಾನ್ ಪ್ರಾಂತ್ಯದ ಬೆಂಡ್ ನಗರದಲ್ಲಿರುವ ಪ್ರಾಥಮಿಕ ಶಾಲೆಯೊಂದರಲ್ಲಿ ಗುರುವಾರ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಮತ್ತು ಓರ್ವ ಶಿಕ್ಷಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂದೂಕುಧಾರಿಯಾಗಿದ್ದ 16 ವರ್ಷದ ಸ್ಥಳೀಯ ಬಾಲಕನನ್ನು ಶಾಲೆಯೊಳಗೆ ಸಾರ್ವಜನಿಕರೊಬ್ಬರು ಎದುರಿಸಿ ಗುಂಡಿಕ್ಕಿ ಕೊಂದಿದ್ದಾರೆ.ಬೆಂಡ್ ಪೊಲೀಸ್ ಇಲಾಖೆಯ ಮುಖ್ಯಸ್ಥ ಮೈಕ್ ಕ್ರಾಂಟ್ಜ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಮೃತಪಟ್ಟವರಲ್ಲಿ 5, 8 ಮತ್ತು 11 ವರ್ಷ ವಯಸ್ಸಿನ ಮೂವರು ಮಕ್ಕಳು ಹಾಗೂ ಓರ್ವ ಶಿಕ್ಷಕಿ ಸೇರಿದ್ದಾರೆ. ವಾಹನವೊಂದರ ಮೇಲೆ ಗುಂಡು ಹಾರಿಸಲಾಯಿತು ಎಂಬ ವರದಿಯ ಬೆನ್ನಲ್ಲೇ ಶಾಲೆಯೊಳಗೆ ಬಂದೂಕುಧಾರಿ ದಾಳಿ ನಡೆಸಿರುವ ಬಗ್ಗೆ ಸರಣಿ ತುರ್ತು ಕರೆಗಳು ಬಂದಿದ್ದವು. ಸ್ಥಳೀಯ ಸಮಯ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕರೆ ಬಂದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಅದಾಗಲೇ ಬಂದೂಕುಧಾರಿಯನ್ನು ಸಾರ್ವಜನಿಕರೊಬ್ಬರು ಹೊಡೆದುರುಳಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ದಾಳಿಕೋರ ಬಾಲಕ ಶಾಲೆಯನ್ನು ಪ್ರವೇಶಿಸುವುದನ್ನು ಕಂಡು ಹಿಂಬಾಲಿಸಿಕೊAಡು ಹೋದ ಸ್ಥಳೀಯ ವ್ಯಕ್ತಿಯೊಬ್ಬರು ಆತನನ್ನು ಎದುರಿಸಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.ಈ ದುರಂತದಲ್ಲಿ ಗಾಯಗೊಂಡ ಕನಿಷ್ಠ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಮತ್ತು ಗಾಯಾಳುಗಳ ಸಂಪೂರ್ಣ ವಿವರಗಳನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಬಂದೂಕು ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಅಮೆರಿಕದಲ್ಲಿ ಸಾರ್ವಜನಿಕ ಸ್ಥಳಗಳು ಹಾಗೂ ಶಾಲೆಗಳಲ್ಲಿ ನಡೆಯುವ ಗುಂಡಿನ ದಾಳಿಗಳು ಸಾರ್ವಜನಿಕ ಭದ್ರತೆ ಮತ್ತು ಶಸ್ತ್ರಾಸ್ತ್ರ ನಿಯಂತ್ರಣದ ಕುರಿತು ಮತ್ತೆ ಭಾರಿ ಆತಂಕ ಮೂಡಿಸಿವೆ. `ಗನ್ ವೈಲೆನ್ಸ್ ಆರ್ಕೆÊವ್' ಅಂಕಿಅAಶಗಳ ಪ್ರಕಾರ, 2026 ರ ಪ್ರಸಕ್ತ ವರ್ಷದಲ್ಲೇ ಅಮೆರಿಕದಲ್ಲಿ 360 ಕ್ಕೂ ಹೆಚ್ಚು ಸರಣಿ ಗುಂಡಿನ ದಾಳಿ ಘಟನೆಗಳು ವರದಿಯಾಗಿದ್ದು, ಶಾಲಾ ಅಧ್ಯಾಪಕರು ಮತ್ತು ಮಕ್ಕಳ ಭದ್ರತೆಯ ಕುರಿತು ಆತಂಕ ಹೆಚ್ಚಿಸಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST