ಬೆಂಗಳೂರು: ಮಲ್ಲೇಶ್ವರಂನ ಒರಿಯನ್ ಮಾಲ್‌ನಲ್ಲಿರುವ ಪಿವಿಆರ್ ಐನಾಕ್ಸ್ನಲ್ಲಿ ನವೆಂಬರ್ 25 ರಂದು ಆಸ್ಟಾçನಮಿ ಎಕ್ಸ್ಪೋ 1.0 ಯಶಸ್ವಿಯಾಗಿ ನಡೆಯಿತು.ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ದೀಕ್ಷಾ ನೆಲಮಂಗಲ ಗರ್ಲ್ಸ್ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಸೇರಿದಂತೆ ಸುಮಾರು 210 ಜನರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (ರಿ) ಅಧ್ಯಕ್ಷರಾದ ಡಾ. ಟಿ. ಶಿವಕುಮಾರ್ ನಾಗರ ನವಿಲೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಈ ದಿನದ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿಬಂದಿದೆ. ಖಗೋಳ ವಿಜ್ಞಾನದ ಬಗ್ಗೆ ನಿರೂಪಕರಾದ ಹರ್ಷ ಅವರು ಎಳೆಎಳೆಯಾಗಿ ಅದ್ಭುತವಾಗಿ ವಿವರಿಸಿದ್ದಾರೆ. ಇದರಿಂದ ನೀವೆಲ್ಲರೂ ಉತ್ಸಾಹಗೊಂಡಿದ್ದೀರಿ. ನಿಮಗೆಲ್ಲರಿಗೂ ಜ್ಞಾನದ ಬೆಳಕನ್ನು ಚೆಲ್ಲಿ, ನಿಮ್ಮನ್ನು ವಿಜ್ಞಾನಿಗಳನ್ನಾಗಿ ಮಾಡಿ ಈ ದೇಶಕ್ಕೆ ಕೊಡುಗೆ ನೀಡಲು ಹೊರಟಿರುವ ಏರಿಯೋನ್ ಭಾರತ್ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ್ ಅವರನ್ನು ಅಭಿನಂದಿಸುತ್ತಾ, ಈ ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿರುವ ರಾಘವೇಂದ್ರ ನಾಯಕ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.ಮಕ್ಕಳಿಗೆ ಕಿವಿಮಾತು ಹೇಳಿದ ಡಾ.ಶಿವಕುಮಾರ್ ಅವರು, ನೀವು ಸಾಧನೆ ಮಾಡಬೇಕಾದರೆ ತಂದೆ-ತಾಯಿ, ಗುರು-ಹಿರಿಯರನ್ನು ಎಷ್ಟು ಗೌರವಿಸುತ್ತೀರೋ ಅಷ್ಟೇ ಎತ್ತರಕ್ಕೆ ಬೆಳೆಯುತ್ತೀರಿ. ನೀವು ಅಂದುಕೊAಡ ಗುರಿಯನ್ನು ಸಾಧಿಸುತ್ತೀರಿ. ಇದಕ್ಕೆ ಉದಾಹರಣೆ ನಾನೇ ಇದ್ದೇನೆ. ಹಾಸನ ಜಿಲ್ಲೆಯ ಕುಗ್ರಾಮದಲ್ಲಿ ಹುಟ್ಟಿ ಕುರಿ ಕಾಯುತ್ತಿದ್ದವನು, ಈ ದಿನ ನಿಮ್ಮೆಲ್ಲರ ಮುಂದೆ ನಿಂತು ಮಾತನಾಡುವ ಸೌಭಾಗ್ಯ ಸಿಕ್ಕಿದೆ ಎಂದರೆ ಅದು ನನ್ನ ತಂದೆ-ತಾಯಿ ಹಾಗೂ ಗುರು-ಹಿರಿಯರ ಆಶೀರ್ವಾದದಿಂದ ಎಂದು ಹೆಮ್ಮೆಯಿಂದ ಹೇಳಿಕೊಂಡರು.ಈ ಮಾತನ್ನು ಕೇಳಿದ ವಿದ್ಯಾರ್ಥಿಗಳು ಚಪ್ಪಾಳೆಯ ಸುರಿಮಳೆಗೈದರು. ಬಂದಿದ್ದ ಅತಿಥಿಗಳು ಸಹ ಹಸ್ತಲಾಘವ ನೀಡಿ ಗೌರವ ವ್ಯಕ್ತಪಡಿಸಿದರು.ತದನಂತರ ಇಂದು ಸಂಜೆ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ. ಜಿ. ವೈ. ಪದ್ಮ ನಾಗರಾಜು ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಬೇಕಾಗಿವೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಅರಿವು ಮೂಡಿಸಿ ಅವರಿಗೆ ಒಳ್ಳೆಯ ಮಾರ್ಗ ತೋರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಜೊತೆ ನಾವೂ ಕೈಜೋಡಿಸುತ್ತೇವೆ ಎಂದರು.ಗೌರವ ಅತಿಥಿಗಳಾಗಿ ದಿ ಮಾಡರ್ನ್ ಕ್ಲಾಸ್‌ರೂಮ್‌ನ ಸಹ ಸಂಸ್ಥಾಪಕ ಮತ್ತು ನಿರ್ದೇಶಕರಾದ ಯಾಸಿನ್ ಷರೀಫ್, ಗ್ಲೋಬಲ್ ಗ್ರೂಪ್ ಆಫ್ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್ನ ಅಧ್ಯಕ್ಷ ಮತ್ತು ಸಂಸ್ಥಾಪಕರಾದ ಡಾ. ಅಬ್ದುಲ್ ರಹೀಮ್, ಎಸ್.ಎಸ್.ಜಿ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಆರ್ಕಿಡ್ ಅಕಾಡೆಮಿ ಟೀಚರ್ಸ್ ಟ್ರೆöÊನಿಂಗ್ ಇನ್‌ಸ್ಟಿಟ್ಯೂಟ್‌ನ ಕಾರ್ಯದರ್ಶಿಗಳಾದ ಜಿ.ಎಸ್. ಪುಷ್ಪಲತಾ, ಪ್ರೊಫೆಸರ್ ಸಮತಾ ದೇಶಮಾನೆ, ರಾಘವೇಂದ್ರ ನಾಯಕ್ ಹಾಗೂ ಸಂಸ್ಥೆಯ ನಿರ್ದೇಶಕರಾದ ನಯಮತುಲ್ಲಾ ಖಾನ್ ಅವರು ಉಪಸ್ಥಿತರಿದ್ದರು. ಇದೇ ವೇಳೆ ಏರಿಯೋನ್ ಭಾರತ್ ತಂಡ ಕೂಡ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿತು.ಖಗೋಳ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಎಕ್ಸ್ಪೋ ವಿದ್ಯಾರ್ಥಿಗಳಿಗೆ ಹೊಸ ಜ್ಞಾನ ಹಾಗೂ ಅನುಭವ ನೀಡಿತು.