ಬೆಂಗಳೂರು: ಭಾರತದ ಹೆಮ್ಮೆಯ ಸ್ವದೇಶಿ ಮೈಕ್ರೋ-ಡ್ರಾಮಾ ಮನರಂಜನಾ ವೇದಿಕೆಯಾದ ಟುಕ್ ಟುಕಿ, ಇದೇ ಅಕ್ಟೋಬರ್ 16, 2026 ರಂದು ತನ್ನ ಬಹುನಿರೀಕ್ಷಿತ ನೂತನ ಸರಣಿ ದೇವಿಯನ್ನು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.
ಅತ್ಯಂತ ತೀವ್ರ ಪೈಪೋಟಿ ಹಾಗೂ ಭಾವನಾತ್ಮಕ ತಿರುವುಗಳನ್ನು ಒಳಗೊಂಡಿರುವ ಈ ವರ್ಟಿಕಲ್ ಸ್ಕಿçÃನ್ ಸರಣಿಯು ತಾಯಿಯೊಬ್ಬಳ ಅಚಲ ಸಂಕಲ್ಪ, ಗಾಢ ನಂಬಿಕೆ ಮತ್ತು ನ್ಯಾಯಕ್ಕಾಗಿ ನಡೆಸುವ ಅವಿರತ ಹೋರಾಟವನ್ನು ಸಮಕಾಲೀನ ಅತ್ಯಾಧುನಿಕ ನಾಟಕೀಯ ನಿರೂಪಣೆಯಲ್ಲಿ ಪ್ರಸ್ತುತ ಪಡಿಸಲಿದೆ.ಈ ರೋಚಕ ಸರಣಿಯು ದೇವಿ ಎಂಬ ಅತ್ಯಂತ ಸರಳ ಹಾಗೂ ತೀವ್ರ ಧಾರ್ಮಿಕ ಮನೋಭಾವದ ತಾಯಿಯ ಜೀವನದ ಸುತ್ತ ಸಾಗುತ್ತದೆ.ನಗರದ ಅತ್ಯಂತ ವೈಭವೋಪೇತ ವಾರ್ಷಿಕ ಧಾರ್ಮಿಕ ಮಹೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ, ನಗರದ ಬೃಹತ್ ಎಸ್ಟೇಟ್ ಒಂದರಿಂದ ಆಕೆಯ ಕಷ್ಟಪಟ್ಟು ದುಡಿಯುತ್ತಿದ್ದ ಮಗ ಹಠಾತ್ತಾಗಿ ನಿಗೂಢವಾಗಿ ಕಣ್ಮರೆಯಾಗುತ್ತಾನೆ. ಇದರಿಂದ ಆಕೆಯ ನೆಮ್ಮದಿಯ ಬದುಕು ಸಂಪೂರ್ಣವಾಗಿ ಛಿದ್ರವಾಗುತ್ತದೆ. ಆ ಊರಿನ ಅತ್ಯಂತ ಪ್ರಭಾವಿ, ಶ್ರೀಮಂತ ಮತ್ತು ಅಹಂಕಾರದ ಪರಮಾವಧಿಯಂತಿರುವ ಕುಟುಂಬದ ಹಿರಿಯ ಯಜಮಾನ ಹಾಗೂ ಆತನ ಮಗನ ಮಾಜಿ ಗೆಳತಿ ಇಬ್ಬರೂ ಸೇರಿ ರೂಪಿಸಿದ ದುಷ್ಟ ಸಂಚಿನಿಂದಲೇ ಈ ಕಣ್ಮರೆ ನಡೆದಿರುತ್ತದೆ. ಅವರು ತಮ್ಮ ಅಧಿಕಾರದ ಬಲದಿಂದ ಎಲ್ಲ ಸಾಕ್ಷ÷್ಯಗಳನ್ನು ಅಳಿಸಿಹಾಕಿ, ಸತ್ಯವನ್ನು ಮಣ್ಣುಪಾಲು ಮಾಡಿ, ಅಪರಾಧಿಗಳಿಗೆ ಯಾವುದೇ ಶಿಕ್ಷೆಯಾಗದಂತೆ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುತ್ತಾರೆ. ಮಗನ ವಿಯೋಗದ ಆಘಾತದಿಂದ ಸಂಪೂರ್ಣವಾಗಿ ಜರ್ಜರಿತಳಾದ ದೇವಿ, ಮಾರ್ಗದರ್ಶನ ಮತ್ತು ತನ್ನ ಪ್ರಶ್ನೆಗಳಿಗೆ ಉತ್ತರವನ್ನು ಕೋರುತ್ತಾ, ತನ್ನ ಊರಿನ ಸ್ಥಳೀಯ ಗ್ರಾಮದೇವತೆಯ ದೇವಾಲಯದಲ್ಲೇ ಕಣ್ಣೀರು ಹಾಕುತ್ತಾ ಒಂದು ಪೂರ್ಣ ವರ್ಷವನ್ನು ನಿರಂತರ ಪ್ರಾರ್ಥನೆಯಲ್ಲೇ ಕಳೆಯುತ್ತಾಳೆ.