LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಬೇಡ, ಜನಸೇವೆಯೇ ನಿಜವಾದ ಸಂಭ್ರಮ: ನಗರ್ಲೆ ಮಹದೇವಸ್ವಾಮಿ

ಮೋದಿ ಜನ್ಮದಿನದ ಅಂಗವಾಗಿ ಹೊಸಕೋಟೆಯಲ್ಲಿ ರಕ್ತದಾನ ಶಿಬಿರ; 25 ಮಂದಿ ರಕ್ತದಾನ


ತಿ. ನರಸೀಪುರ: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನ ಹಾಗೂ 25 ವರ್ಷಗಳ ಸಾರ್ವಜನಿಕ ಸೇವೆಯ ಸ್ಮರಣಾರ್ಥ ವರುಣಾ ವಿಧಾನಸಭಾ ಕ್ಷೇತ್ರದ 16 ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ವರುಣಾ ಮಂಡಲ ಅಧ್ಯಕ್ಷ ನಗರ್ಲೆ ಮಹದೇವಸ್ವಾಮಿ ತಿಳಿಸಿದರು.ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಮತ್ತು ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು, ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ ಹಣ ವ್ಯರ್ಥ ಮಾಡುವ ಬದಲು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ರಕ್ತದಾನದ ಮೂಲಕ ಜೀವ ಉಳಿಸುವುದೇ ನಿಜವಾದ ಜನಸೇವೆ ಎಂದರು. ಮೋದಿ ಅವರ ಸೇವಾ ಸಮರ್ಪಣೆ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.ದೇಶದ ಅಭಿವೃದ್ಧಿಗೆ ಮೋದಿ ಕೊಡುಗೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಸ್ವಾಮಿ ಮಾತನಾಡಿ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ಮೋದಿ 25 ವರ್ಷಗಳ ಸಾರ್ವಜನಿಕ ಸೇವೆ ಪೂರೈಸಿರುವುದು ಸ್ಮರಣೀಯ. ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿಗೆ ಅವರ ಕೊಡುಗೆ ಗಮನಾರ್ಹವಾಗಿದ್ದು, ವರುಣಾ ಕ್ಷೇತ್ರದ 16 ಶಕ್ತಿ ಕೇಂದ್ರಗಳಲ್ಲಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.ರಕ್ತದಾನ ಮಾನವೀಯ ಸೇವೆ: ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುತ್ತೂರು ಚಿಕ್ಕಮಾದಪ್ಪ ಮಾತನಾಡಿ, ರಕ್ತದಾನ ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಸೇವೆಯಾಗಿದ್ದು, ಶಿಬಿರದಲ್ಲಿ 25 ಮಂದಿ ರಕ್ತದಾನ ಮಾಡಿರುವುದು ಶ್ಲಾಘನೀಯ ಎಂದರು.
ಭದ್ರತೆ, ತಂತ್ರಜ್ಞಾನ ಪ್ರಗತಿಗೆ ಆದ್ಯತೆ: ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಘು ಮಾತನಾಡಿ, ಮೋದಿ ಆಡಳಿತದಲ್ಲಿ ದೇಶದ ಭದ್ರತೆ, ಏಕತೆ ಮತ್ತು ತಂತ್ರಜ್ಞಾನ ಪ್ರಗತಿಗೆ ಆದ್ಯತೆ ನೀಡಲಾಗಿದೆ. ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರ ಪ್ರೋತ್ಸಾಹ ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಸದಾನಂದ, ಗೋಪಾಲಸ್ವಾಮಿ, ಮಹದೇವಸ್ವಾಮಿ, ಪೈಲ್ವಾನ್ ರಘು, ವೆಂಕಟರಮಣ ಶೆಟ್ಟಿ, ಜಯ್ ಕುಮಾರ್, ರತ್ನಮ್ಮ, ರವಿ, ಗುರುಮಲ್ಲಪ್ಪ, ಮಧು, ನವೀನ, ಬಸವಣ್ಣ, ಪುಟ್ಟಣ್ಣ, ಕಿರಗಸೂರು ಮಹದೇವಸ್ವಾಮಿ, ಕೇಬಲ್ ಶಿವಣ್ಣ, ಈಶ್ವರ ಗೌಡನಹಳ್ಳಿ, ನಂದೀಶ್, ಆಲಗೂಡು ಸತ್ಯಪ್ರಕಾಶ್, ಲಕ್ಷಿ÷್ಮ, ಪುಷ್ಪಲತಾ, ರಾಜೇಶ್ವರಿ, ಪೂರ್ಣಿಮಾ, ಸುಧಾ ಚಿಕ್ಕಮಾದಪ್ಪ, ಪದ್ಮ, ಡಾ. ಪರಿಣಿತ, ಗಿರೀಶ್, ಅಭಿಷೇಕ್, ರಶ್ಮಿತಾ, ದೀಪಾ, ಭಾರತಿ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST