LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಅ.30ಕ್ಕೆ ತೆರೆ ಮೇಲೆ `ರಿಲ್ಯಾಕ್ಸ್’

ನಟ ಕೋಮಲ್ ಕುಮಾರ್ ಅಭಿನಯದ “ರಿಲ್ಯಾಕ್ಸ್”ಚಿತ್ರದ ಹಾಡುಗಳ ಬಿಡುಗಡೆ  ನೆರವೇರಿದೆ. ಜೆಸ್ಸಿ ಗಿಫ್ಟ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 


ಚಿತ್ರದ ನಿರ್ಮಾಪಕ ಅಂಬಟಿ ಮಧು ಮೋಹನ್  ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.“ರಿಲ್ಯಾಕ್ಸ್” ಹಾಡುಗಳು ಬಹಳ ಸುಮಧುರವಾಗಿ ಮೂಡಿಬಂದಿದೆ. ಜೆಸ್ಸಿ ಗಿಫ್ಟ್ ಅವರ ಸಂಗೀತ ನಿರ್ದೇಶನದ ಈ ಚಿತ್ರದ ಹಾಡುಗಳನ್ನು ಸುಪ್ರಸಿದ್ಧ ಗಾಯಕ - ಗಾಯಕಿಯರು ಹಾಡಿದ್ದಾರೆ. ಆಂದ್ರ ಪ್ರದೇಶದಲ್ಲೂ ಈ ಚಿತ್ರದ ಹಾಡುಗಳಿಗೆ ಜನರು ಮನ ಸೋತ್ತಿದ್ದಾರೆ. ಕೋಮಲ್ ಕುಮಾರ್, ಸೋನಾಲ್ ಮೊಂತೆರೊ, ವಿನೋದ್ ಪ್ರಭಾಕರ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಅದ್ಭುತವಾಗಿದೆ. ಅಕ್ಟೋಬರ್ 30ರಂದು ಚಿತ್ರ ತೆರೆಗೆ ಬರುತ್ತಿದೆ. ಎಲ್ಲರೂ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕರು.
ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿದೆ. ಹೆಸರಾಂತ ಗಾಯಕ - ಗಾಯಕಿಯರ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿದೆಎಂದರು.ನಟ ಕೋಮಲ್ ಕುಮಾರ್ ಮಾತನಾಡಿ ನಾನು ಬಹಳ ವರ್ಷಗಳ ನಂತರ ಈ ಜಾನರ್ ನ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ.  ನಿರ್ಮಾಣ, ನಿರ್ದೇಶನ, ತಂತ್ರಜ್ಞರ ಕಾರ್ಯವೈಖರಿ ಹಾಗೂ ಕಲಾವಿದರ ಅಭಿನಯ ಎಲ್ಲವೂ ಚೆನ್ನಾಗಿದೆ. ನೋಡುಗರಿಗೆ ಬೇಕಾಗಿರುವ ಎಲ್ಲಾ ಅಂಶಗಳಿರುವ ಈ ಚಿತ್ರ ಅಕ್ಟೋಬರ್ 30 ರಂದು ನಿಮ್ಮ ಮುಂದೆ ಬರಲಿದೆ ಎಂದರು. ನಟಿ ಸೋನಾಲ್ ಮೊಂತೆರೊ ಮಾತನಾಡಿ, ನಿರ್ಮಾಪಕರು ಇಡೀ ಚಿತ್ರೀಕರಣದ ಸಮಯದಲ್ಲಿ ಮಗಳ ರೀತಿ ನೋಡಿಕೊಂಡಿದ್ದಾರೆ. ಇಡೀ ತಂಡ ಕುಟುಂಬದ ರೀತಿ ಇತ್ತು. ಇದೇ ಮೊದಲ ಬಾರಿಗೆ ಕೋಮಲ್ ಕುಮಾರ್ ಅವರ ಜೊತೆ ನಟನೆ ಮಾಡಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದು ಕಲಿಕೆಗೆ ಸಹಕಾರಿಯಾಗಿದೆ. ಮತ್ತೆ ಅವರ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST