LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಡ್ಯಾಡ್’ ಚಿತ್ರದ `ಮಗಳೆ ನಿನ್ನ ಜೊತೆ’ ಹಾಡು ಬಿಡುಗಡೆ


ಶಿವರಾಜ್‌ಕುಮಾರ್ ನಾಯಕನಾಗಿ ಅಭಿನಯಿಸಿರುವ  `ಡ್ಯಾಡ್’ ಚಿತ್ರದ `ಮಗಳೆ ನಿನ್ನ ಜೊತೆ’ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಅಪ್ಪ-ಮಗಳ ನಡುವಿನ ಪ್ರೀತಿ, ಮಮತೆ ಹಾಗೂ ಭಾವನಾತ್ಮಕ ಬಾಂಧವ್ಯವನ್ನು ಸಾರುವ ಈ ಹಾಡಿಗೆ ಕೆ. ಕಲ್ಯಾಣ್ ಸಾಹಿತ್ಯ ರಚಿಸಿದ್ದು, ದರ್ಶನ್ ಮೆಳವಂಕಿ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ಚಿತ್ರ ಬಿಡುಗಡೆ ಹಂತ ತಲುಪಿದೆ. ಕನ್ನಡ ರಾಜ್ಯೋತ್ಸವದಂದು ಚಿತ್ರದ ಬಿಡುಗಡೆ ದಿನಾಂಕ ಪ್ರಕಟ ಆಗಲಿದೆ.  ಹರೀಶ್ ಪೆದ್ದಿ ಚಿತ್ರವನ್ನು ನಿರ್ಮಿಸಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಅನಿಲ್ ಕನ್ನೆಗಂಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಹರೀಶ್ ಪೆದ್ದಿ ಹಾಗೂ ನಿರ್ದೇಶಕ ಅನಿಲ್ ಕನ್ನೆಗಂಟಿ ಅವರಿಗೆ ಇದು ಮೊದಲ ಕನ್ನಡ ಚಿತ್ರ. ಬಿ.ಎಸ್. ಸುಧೀಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.ಶಿವರಾಜ್‌ಕುಮಾರ್  ವೈದ್ಯನ ಪಾತ್ರದಲ್ಲಿ ಇದ್ದಾರೆ.`ಇರುಮುಡಿ’ ಚಿತ್ರದ ಮೂಲಕ ಗಮನ ಸೆಳೆದಿರುವ ಬೇಬಿ ನಕ್ಷತ್ರ, ಶರ್ಮಿಳಾ ಮಾಂಡ್ರೆ, ಬಾಬು ಹಾಗೂ ಮಲಯಾಳಂ ನಟ ಸೂರಜ್ ವೆಂಜರಮೂಡು ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿನಿಲಯಗಳ ಊಟಕ್ಕೆ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳು ನೈಸರ್ಗಿಕ ಆಹಾರ ಪೂರೈಕೆಗೆ ಜಿಪಂ ಯೋಜನೆಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ 3 ಬಾರಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಯಾದವ್ ಆತ್ಮಹತ್ಯೆಡಬ್ಲ್ಯುಪಿಎಲ್ 2027 ಹರಾಜು ಮುಕ್ತಾಯ: 5 ತಂಡಗಳ ಪಟ್ಟಿ ಇಲ್ಲಿದೆರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾಗಿ ಹೆಚ್.ಸಿ. ಪ್ರಭಾಕರ್ ಆಯ್ಕೆಸುಬ್ಬ ನಿಮ್ಮಲ್ಲೊಬ್ಬ ‘ಪೈರ್’ ವೃದ್ದ ದಂಪತಿಗಳ ಅನ್ಯೋನ್ಯ ಪ್ರೇಮಕಥೆ ಇದೇ 30ರಂದು ತೆರೆಗೆ 80ರ ವೃದ್ಧ 70ರ ವೃದ್ಧೆಯ ಪ್ರೇಮಕಥೆ `ಪೈರ್' ಈ ಶುಕ್ರವಾರ ತೆರೆಗೆಡ್ಯಾಡ್’ ಚಿತ್ರದ `ಮಗಳೆ ನಿನ್ನ ಜೊತೆ’ ಹಾಡು ಬಿಡುಗಡೆ`ವಿದ್ಯಾರ್ಥಿಗಳು ವಿದ್ಯಾಜ್ಞಾನ ಪಡೆದುಕೊಳ್ಳುವ ಜೊತೆಗೆ ಆತ್ಮಜ್ಞಾನ ಪಡೆದುಕೊಳ್ಳಬೇಕು’`ಗಂಧದಗುಡಿ ಸಿನಿಹಬ್ಬ'ದ ಲಾಂಛನ ಬಿಡುಗಡೆ ಟೀಸರ್‌ನಲ್ಲೇ ಕುತೂಹಲ ಮೂಡಿಸಿದ `ಎನ್.ಎಚ್-66'