LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಸುಬ್ಬ ನಿಮ್ಮಲ್ಲೊಬ್ಬ 

ಗಾಯಕನಿಂದ ನಾಯಕನಾಗಿ ಗುರುತಿಸಿಕೊಂಡಿರುವ ನವೀನ್ ಸಜ್ಜು ಇದೀಗ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. 


ಸಾಮಾನ್ಯ ಮಧ್ಯಮ ವರ್ಗದ ಕನ್ನಡಿಗನ ಬದುಕು, ಕನಸು, ಸಂಘರ್ಷ ಹಾಗೂ ಹೋರಾಟದ ಕಥಾಹಂದರ ಹೊಂದಿರುವ `ಸುಬ್ಬ ನಿಮ್ಮಲೊಬ್ಬ’ ಚಿತ್ರದ ಮುಹೂರ್ತ ನೆರವೇರಿದ್ದು, ಚಿತ್ರೀಕರಣಕ್ಕೂ ಚಾಲನೆ ದೊರೆತಿದೆ.ಎಸ್.ಟಿ. ಉದಯ್ ಕುಮಾರ್ ಹಾಗೂ ಅರುಣ್ ಕುಮಾರ್ ಸಿ. ನಿರ್ಮಿಸುತ್ತಿರುವ `ಸುಬ್ಬ ನಿಮ್ಮಲೊಬ್ಬ’ ಚಿತ್ರಕ್ಕೆ ವಿನಯ್ ಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನವೀನ್ ಸಜ್ಜು ನಾಯಕನಾಗಿ ಅಭಿನಯಿಸುತ್ತಿದ್ದು, ಚಿಕ್ಕಮಗಳೂರು ಮೂಲದ ನಟಿ ಶ್ರುತಿ ಗೌಡ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.ವಿನಯ್ ಗುರೂಜಿ  ಅಮೃತಹಸ್ತದಿಂದ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ.`ಸುಬ್ಬ ನಿಮ್ಮಲೊಬ್ಬ’ ಚಿತ್ರವು ಸಾಮಾನ್ಯ ಮಧ್ಯಮ ವರ್ಗದ ಕನ್ನಡಿಗ ಲಾರಿ ಚಾಲಕನ ಬದುಕಿನ ಸುತ್ತ ಹೆಣೆಯಲಾದ ಕಥೆಯಾಗಿದೆ. ದಿನನಿತ್ಯದ ಬದುಕಿನ ಸವಾಲುಗಳು, ಜೀವನದಲ್ಲಿ ಎದುರಾಗುವ ಏರಿಳಿತಗಳು, ಕನಸುಗಳನ್ನು ನನಸಾಗಿಸಿಕೊಳ್ಳುವ ಹಂಬಲ ಹಾಗೂ ಬದುಕಿಗಾಗಿ ನಡೆಸುವ ಹೋರಾಟ ಚಿತ್ರದ ಕಥೆಯ ಪ್ರಮುಖ ಅಂಶಗಳಾಗಿವೆ. ಸಾಮಾನ್ಯ ಮನುಷ್ಯನ ಬದುಕಿನ ಅಸಾಮಾನ್ಯ ಹೋರಾಟವನ್ನು ಬೆಳ್ಳಿತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿದೆ. ಲಾರಿ ಚಾಲಕನ ಜೀವನವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರದಲ್ಲಿ ನವೀನ್ ಸಜ್ಜು ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.ಚಿತ್ರದಲ್ಲಿ ನವೀನ್ ಸಜ್ಜು ಅವರಿಗೆ ನಾಯಕಿಯಾಗಿ ಚಿಕ್ಕಮಗಳೂರು ಮೂಲದ ನಟಿ ಶ್ರುತಿ ಗೌಡ ಅಭಿನಯಿಸುತ್ತಿದ್ದಾರೆ. ಈ ಹೊಸ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ  ಮೋಡಿ ಮಾಡಲಿದೆ. ಬೆಂಗಳೂರು, ಚೆನ್ನೈ ಹಾಗೂ ಮೈಸೂರುಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮಧ್ಯಮ ವರ್ಗದ ಲಾರಿ ಚಾಲಕನ ಜೀವನದ ಮೂಲಕ ಬದುಕಿನ ಹೋರಾಟವನ್ನು ತೆರೆದಿಡಲು ನಿರ್ದೇಶಕ ವಿನಯ್ ಕೃಷ್ಣ ಮುಂದಾಗಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿನಿಲಯಗಳ ಊಟಕ್ಕೆ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳು ನೈಸರ್ಗಿಕ ಆಹಾರ ಪೂರೈಕೆಗೆ ಜಿಪಂ ಯೋಜನೆಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ 3 ಬಾರಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಯಾದವ್ ಆತ್ಮಹತ್ಯೆಡಬ್ಲ್ಯುಪಿಎಲ್ 2027 ಹರಾಜು ಮುಕ್ತಾಯ: 5 ತಂಡಗಳ ಪಟ್ಟಿ ಇಲ್ಲಿದೆರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾಗಿ ಹೆಚ್.ಸಿ. ಪ್ರಭಾಕರ್ ಆಯ್ಕೆಸುಬ್ಬ ನಿಮ್ಮಲ್ಲೊಬ್ಬ ‘ಪೈರ್’ ವೃದ್ದ ದಂಪತಿಗಳ ಅನ್ಯೋನ್ಯ ಪ್ರೇಮಕಥೆ ಇದೇ 30ರಂದು ತೆರೆಗೆ 80ರ ವೃದ್ಧ 70ರ ವೃದ್ಧೆಯ ಪ್ರೇಮಕಥೆ `ಪೈರ್' ಈ ಶುಕ್ರವಾರ ತೆರೆಗೆಡ್ಯಾಡ್’ ಚಿತ್ರದ `ಮಗಳೆ ನಿನ್ನ ಜೊತೆ’ ಹಾಡು ಬಿಡುಗಡೆ`ವಿದ್ಯಾರ್ಥಿಗಳು ವಿದ್ಯಾಜ್ಞಾನ ಪಡೆದುಕೊಳ್ಳುವ ಜೊತೆಗೆ ಆತ್ಮಜ್ಞಾನ ಪಡೆದುಕೊಳ್ಳಬೇಕು’`ಗಂಧದಗುಡಿ ಸಿನಿಹಬ್ಬ'ದ ಲಾಂಛನ ಬಿಡುಗಡೆ ಟೀಸರ್‌ನಲ್ಲೇ ಕುತೂಹಲ ಮೂಡಿಸಿದ `ಎನ್.ಎಚ್-66'