ಬೆಂಗಳೂರು: ನಮ್ಮ ರಾಜ್ಯದ ರಕ್ಷಣೆ ಹೇಗೆ ಮಾಡಬೇಕು ಎಂಬುದು ನಮಗೆ ಗೊತ್ತು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿ ನಮ್ಮ ರಾಜ್ಯದ ಬಗ್ಗೆ ಇನ್ನೊಬ್ಬರು ಮಾತನಾಡುವ ಅವಶ್ಯಕತೆಯಿಲ್ಲ. ನಮ್ಮ ರಾಜ್ಯದ ವಿಷಯದಲ್ಲಿ ಬೇರೆಯವರು ತಲೆ ಹಾಕುವುದು ಸರಿಯಲ್ಲ ಎಂದು ವಿಜಯ್ ಹೇಳಿಕೆಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೊಂದು ರಾಜ್ಯದ ವಿಷಯದಲ್ಲಿ ಮತ್ತೊಂದು ರಾಜ್ಯದವರು ತಲೆ ಹಾಕುವುದು ಸರಿಯಲ್ಲ. ಇದು ಸರಿಯಾದ ಕ್ರಮವೂ ಅಲ್ಲ. ಸೆಲ್ವಂ ಆಗಲಿ ಮತ್ತ್ಯಾರೇ ಆಗಲಿ, ಜ್ಞಾನವಿಟ್ಟು ಮಾತನಾಡಬೇಕು ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಕಳೆದ 15ರ ಮುಂಜಾನೆ ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯವರಿAದ ಮೂವರನ್ನು ಕಾಡುಗಳ್ಳರೆಂದು ಹೇಳಿ ಹತ್ಯೆಗೈಯ್ಯಲಾಗಿತ್ತು. ಈ ಘಟನೆಗೆ ಸಂಬAಧಪಟ್ಟಂತೆ ಪ್ರತಿಕ್ರಿಯಿಸಿದ್ದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಕರ್ನಾಟಕದಲ್ಲಿ ತಮಿಳುರ ಹತ್ಯೆಯಾಗಿದೆ ಎಂದು ಆರೋಪಿಸಿ ಪ್ರತಿಕ್ರಿಯೆ ನೀಡಿದರು. ಇದಕ್ಕೆ ನಮ್ಮ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತಿಯಾಗಿ ಇಂದು ನಮ್ಮ ರಾಜ್ಯದ ರಕ್ಷಣೆ ನಮ್ಮದು ಎಂದು ಹೇಳುವ ಮೂಲಕ ಹಸ್ತಕ್ಷೇಪ ಬೇಡ ಎಂಬುದನ್ನು ನೇರವಾಗಿ ತಿಳಿಸಿದ್ದಾರೆ. ನಾವು ಯಾವತ್ತೂ ತಮಿಳುನಾಡು ವಿಷಯದಲ್ಲಿ ತಲೆ ಹಾಕಿಲ್ಲ ಅವರ ಕೆಲಸವನ್ನು ಅವರು ಮಾಡಲಿ, ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದಿದ್ದಾರೆ.