LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಆಘಾತ; ಪಾಕಿಸ್ತಾನದ ಪಂದ್ಯವೇ ನಿರ್ಣಾಯಕ!


ನೆದರ್ಲಾ್ಯಂಡ್: ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2026ರ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಆಘಾತಕಾರಿ ಸೋಲನುಭವಿಸಿದೆ. ನೆದರ್ಲಾ್ಯಂಡ್ಸ್ನ ವ್ಯಾಗನರ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆAಡ್ ತಂಡವು 4-2 ಗೋಲುಗಳ ಅಂತರದಿಂದ ಟೀಮ್ ಇಂಡಿಯಾವನ್ನು ಮಣಿಸಿದೆ. ಈ ಸೋಲಿನೊಂದಿಗೆ ಹರ್ಮನ್‌ಪ್ರೀತ್ ಸಿಂಗ್ ಪಡೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿಕೊಂಡಿದೆ.ಅತ್ತ ಸತತ ಎರಡನೇ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ 6 ಅಂಕಗಳನ್ನು ಗಳಿಸಿ, ಪೂಲ್ ಡಿನಿಂದ ಮುಂದಿನ ಹಂತಕ್ಕೆ ತನ್ನ ಸ್ಥಾನವನ್ನು ಈಗಾಗಲೇ ಖಚಿತಪಡಿಸಿಕೊಂಡಿದೆ. ಇತ್ತ ಭಾರತ ತಂಡವು ಮುಂದಿನ ಹಂತಕ್ಕೇರಬೇಕಿದ್ದರೆ ತನ್ನ ಮುಂದಿನ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹಾಕಿ ವಿಶ್ವಕಪ್ ನಿಯಮಗಳ ಪ್ರಕಾರ, ಪ್ರತಿ ಪೂಲ್‌ನಿಂದ ಕೇವಲ ಅಗ್ರ ಎರಡು ತಂಡಗಳು ಮಾತ್ರ ಎರಡನೇ ಸುತ್ತಿಗೆ ಪ್ರವೇಶಿಸಲಿವೆ. ಕೊನೆಯ ಎರಡು ಸ್ಥಾನ ಪಡೆಯುವ ತಂಡಗಳು 9 ರಿಂದ 16ನೇ ಸ್ಥಾನದ ಕ್ಲಾಸಿಫಿಕೇಶನ್ ಪಂದ್ಯಗಳನ್ನು ಆಡಬೇಕಾಗುತ್ತದೆ.ಭಾರತದ ಸಮೀಕರಣ: ಭಾರತ ತಂಡ ಮುಂದಿನ ಹಂತಕ್ಕೇರಲು ಎರಡು ಆಯ್ಕೆಗಳಿವೆ. ಈ ಎರಡು ಆಯ್ಕೆಗಳಲ್ಲಿ ಅತ್ಯಂತ ಸುಲಭ ಹಾಗೂ ನೇರ ಆಯ್ಕೆ ಎಂದರೆ ಪಾಕಿಸ್ತಾನ್ ವಿರುದ್ಧದ ಗೆಲುವು. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ್ ಪಂದ್ಯ ಡ್ರಾ ಆಗಿ ಅಂತ್ಯಗೊಂಡರೆ, ಭಾರತ 4 ಅಂಕಗಳನ್ನು ಹೊಂದಲಿದೆ. ಈ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಲ್ಸ್ ತಂಡ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ಭಾರತ ಸುಲಭವಾಗಿ ಅರ್ಹತೆ ಪಡೆಯುತ್ತದೆ. ಆದರೆ, ವೇಲ್ಸ್ ತಂಡ ಇಂಗ್ಲೆಂಡ್ ವಿರುದ್ಧ ಗೆದ್ದರೆ, ಭಾರತ 
ಮತ್ತು ವೇಲ್ಸ್ ನಡುವೆ ಗೋಲು ವ್ಯತ್ಯಾಸ ಲೆಕ್ಕಕ್ಕೆ ಬರುತ್ತದೆ. ಒಂದು ವೇಳೆ ಪಾಕಿಸ್ತಾನ್ ವಿರುದ್ಧ ಭಾರತ ಸೋಲನುಭವಿಸಿದರೆ, ಭಾರತ ತಂಡ 
ವಿಶ್ವಕಪ್‌ನ ಮುಖ್ಯ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST