ಡಾ.ಜಿ.ವೈ. ಪದ್ಮನಾಗರಾಜು
ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳಲ್ಲಿಂದು ಆರಂಭದಲ್ಲೇ ಹನೂರು ಅರಣ್ಯಪ್ರದೇಶದಲ್ಲಿ ನಡೆದ ಶೂಟೌಟ್ ವಿಷಯ ಪ್ರಸ್ತಾಪವಾಗಿ, ವಿಧಾನಪರಿಷತ್ ಕಲಾಪ ಕೆಲ ಕಾಲ ಮುಂದೂಡಿದ ಪ್ರಸಂಗ ನಡೆಯಿತು. ಕಲಾಪ ಆರಂಭವಾಗುತ್ತಿದ್ದ ಪರಿಷತ್‌ನಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿಷಯ ಪ್ರಸ್ತಾಪ ಮಾಡಿ ಕಾಡಿನಲ್ಲಿ ಹೋಗುತ್ತಿದ್ದ ಮೂವರು ರೈತರ ಮೇಲೆ ಗುಂಡುಹಾರಿಸಿ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದವರು ಓಡಾಡುತ್ತಿದ್ದಾರೆ. ಅವರನ್ನುಇದುವರೆಗೂ ಬಂಧಿಸಿಲ್ಲ. ಈ ಬಗ್ಗೆ ಸಮಗ್ರವಾಗಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಸಭಾನಾಯಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ವಿಷಯಕ್ಕೆ ಸಂಬAಧಪಟ್ಟAತೆ ಸರ್ಕಾರ ಉತ್ತರ ನೀಡಲು ಸಿದ್ಧವಿದೆ. ಸಂಬಂಧಪಟ್ಟ ಸಚಿವರು ಬಂದು ಉತ್ತರ ನೀಡುತ್ತಾರೆ ಎಂದು ವಿವರಿಸಿದರು. ಸಚಿವ ರಾಯರೆಡ್ಡಿ ಮಾತನಾಡಿ, ಪ್ರಶ್ನೋತ್ತರ ಕಲಾಪವಾದ ಮೇಲೆ ಈ ಬಗ್ಗೆ ಚರ್ಚೆ ಮಾಡೋಣ ಎಂದರು. ಆದರೆ ಇದಕ್ಕೆ ಒಪ್ಪದ ನಾರಾಯಣಸ್ವಾಮಿ ಮೂವರು ಹತ್ಯೆ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಕಾಡಿಗೆ ಹೋದವರನೆಲ್ಲಾ ಹತ್ಯೆ ಮಾಡುತ್ತಾ ಬಂದರೆ ಹೇಗೆ ಎಂದ ಏರು ಧ್ವನಿಯಲ್ಲೇ ಪ್ರಶ್ನಿಸಿದರು. ಸಭಾಪತಿ ಸಲೀಂ ಅಹಮ್ಮದ್ ಅವರು ನಿಯಾಮವಳಿಯಂತೆ ಕಲಪಾ ನಡೆಸೋಣ ಎಂದರೂ ನಾರಾಯಣಸ್ವಾಮಿ ಪಟ್ಟು ಸಡಿಲಿಸಲಿಲ್ಲ.