ಡಾ.ಜಿ. ವೈ. ಪದ್ಮನಾಗರಾಜು
ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸದಸ್ಯರ ಗದ್ದಲದ ನಡುವೆ ವಿಧಾನಪರಿಷತ್‌ನ ಸಭಾಪತಿಯಾಗಿ ಕಾಂಗ್ರೆಸ್‌ನ ಸಲೀಂ ಮಹಮ್ಮದ್ ಅವರು ಆಯ್ಕೆಯಾಗಿದ್ದಾರೆ. ಇಂದು ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದAತೆ ಸಭಾಪತಿ ಪೀಠದಲ್ಲಿದ್ದ ಹಂಗಾಮಿ ಸ್ಪೀಕರ್ ಪುಟ್ಟಣ್ಣ ಅವರು ಸದನಕ್ಕೆ ನೂತನ ಸದಸ್ಯರನ್ನು ಪರಿಚಯಿಸಿ ಸಭಾಪತಿ ಚುನಾವಣೆ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡರು. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲು ಕಾರಣವಾದರೂ ಏನು ಎಂದು ಸಭಾಪತಿಯವರಲ್ಲಿ ಸ್ಪಷ್ಟನೆ ಕೋರಿದರು. ಈಗ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಈಗ ಹೇಳುವುದು ಕೇಳುವುದು ಏನು ಇಲ್ಲ. ಎಂದು ಹೇಳಿ ಚುನಾವಣಾ ಪ್ರಸ್ತಾವನೆಗೆ ಮುಂದಾದರು. ಆಗ ವಿಪಕ್ಷ ನಾಯಕರು ಈ ಚುನಾವಣೆ ಎದುರಾಗಲು ಮಾಜಿ ಸಭಾಪತಿಯವರ ರಾಜೀನಾಮೆಯನ್ನು ಒತ್ತಾಯಪೂರ್ವಕವಾಗಿ ಪಡೆಯಲಾಗಿದೆ...