ಬೆಂಗಳೂರು : ಪೊಲೀಸ್ ಕಮಿಷನರ್ ರವರು 1583 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು 80ನೇ ಸ್ವಾತಂತ್ರ್ಯೋ ತ್ಸವದ ದಿನಾಚರಣೆಯ ಪ್ರಯುಕ್ತ ಬಂದೋಬಸ್ತ್ಗೆ ನಿಯೋಜಿಸಿರುತ್ತಾರೆ.ನಾಳೆ ಬೆಳಿಗ್ಗೆ ಎಮ್ ಜಿ ರಸ್ತೆಯ ಮಾಣಿಕ್ ಶಾಪ್ ಪೆರೇಡ್ ಗ್ರೌಂಡ್‌ನಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಧ್ವಜ ದಿನಾಚರಣೆಯ ಸಂಬಂಧ ಮುಂಜಾಗ್ರತ ಕ್ರಮವಾಗಿ ಇಂದು ರಾತ್ರಿಯಿಂದಲೇ ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ, ಪ್ರಮುಖ ಸ್ಥಳಗಳಲ್ಲಿ ಹಾಗೂ ಕಾರ್ಯಕ್ರಮ ನಡೆವ ನಡೆಯುವ ಸ್ಥಳದಲ್ಲಿ ನೇಮಕ ಮಾಡಿರುತ್ತಾರೆ. 1583 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾಣಿಕ್ಷಾ ಪೆರೇಡ್ ಗ್ರೌಂಡ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮಾತ್ರ ಮೀಸಲಾಗಿರುತ್ತವೆ. ಇದಲ್ಲದೆ ಹೆಚ್ಚುವರಿಯಾಗಿ ನಗರದ ಎಲ್ಲಾ ಕಡೆ ಹೊರ ರಾಜ್ಯಗಳಿಂದ ಬರುವ ವಾಹನಗಳು ಸೇರಿದಂತೆ ಇತರೆ ಅನುಮಾನಸ್ಪದ ವಾಹನಗಳ ಸವಾರರುಗಳನ್ನು ರಸ್ತೆಗಳಲ್ಲಿ ಬ್ಯಾರಿ ಗೇಟ್ ಹಾಕಿ ನಿಲ್ಲಿಸಿ ತಪಾಸಣೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿ ಇತರೆ ವಾಹನಗಳನ್ನು ಕಳುಹಿಸುತ್ತಾರೆ. ಇದಲ್ಲದೆ 15 ದಿನಗಳಿಂದ ಲಾಡ್ಜ÷್ಗಳಲ್ಲಿ ಉಳಿಯುವ ವ್ಯಕ್ತಿಗಳ ಪರಿಶೀಲನೆ, ರೈಲ್ವೆ ಸ್ಟೇಷನ್, ಬಸ್ ಸ್ಟೇಷನ್ ಹಾಗೂ ಇತರೆಡೆ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಪೊಲೀಸರು ನಿಗಾ ವಹಿಸಿರುತ್ತಾರೆ.ಹೆಚ್ಚುವರಿಯಾಗಿ ಗರುಡ ಫೋರ್ಸ್, ಕೆ ಎಸ್ ಆರ್ ಪಿ, ಸಿ ಏ ಆರ್, ಸಂಚಾರಿ ಪೊಲೀಸ್ ಸೇರಿದಂತೆ ಎಲ್ಲರನ್ನು ಒಟ್ಟು ರಸ್ತೆ ಹಾಗೂ 9 ಗೇಟ್ಗಳಲ್ಲಿ ನಿಯೋಜಿಸಿರುತ್ತಾರೆ.ಸಾರ್ವಜನಿಕರಿಗೆ 7,8, ಮತ್ತು ಒಂಬತ್ತನೇ ಗೇಟ್ಗಳನ್ನು ತೆರೆದಿರುತ್ತಾರೆ, ಮತ್ತು ಎರಡನೇ ನಂಬರ್ ಗೇಟ್ ನಲ್ಲಿ ವಿವಿಐಪಿ, ಬಿಳಿ ಬಣ್ಣದ ಪಾಸಿರುವವರು 5 ಮತ್ತು 6ನೇ ಗೇಟ್ನಲ್ಲಿ ಪ್ರವೇಶಿಸಬೇಕೆಂದು ಕೋರಿರುತ್ತಾರೆ.ಒಟ್ಟಾರೆಯಾಗಿ 12 ಡಿಸಿಪಿಗಳು, 18 ಎಸಿಪಿಗಳು, 68 ಜನ ಪೊಲೀಸ್ ಇನ್ಸೆ÷್ಪಕ್ಟರ್ಗಳು, ಸೇರಿದಂತೆ ಮಹಿಳಾ ಸಿಬ್ಬಂದಿ ಹಾಗೂ ವಿಶೇಷವಾಗಿ 153 ಪೊಲೀಸ್ ಸಿಬ್ಬಂದಿಯನ್ನು ಸಾದಾ...