LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಸೆಲೆಬ್ರಿಟಿ ಚಿತ್ರದ ಮದರ್ ಸಾಂಗ್ ರಿಲೀಸ್

ನಟ ಅಶ್ವಿನ್ ಹಾಗೂ ಸಂಗೀತಾ ಮಾಧವನ್ ಮನದಾಳದ ಮಾತು



ಅಶ್ವಿನ್ ನಾಯಕನಾಗಿ ನಟಿಸುತ್ತಿರುವ ‘ಸೆಲೆಬ್ರಿಟಿ’ ಸಿನಿಮಾದ ತಾಯಿ-ಮಗನ ಬಾಂಧವ್ಯ ಸಾರುವ ವಿಶೇಷ ಗೀತೆಯೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಕಿರಣ್ ವಿಶ್ವನಾಥ್ ನಿರ್ದೇಶನದ ಈ ಚಿತ್ರದ ಹೊಸ ಹಾಡಿನ ಅನಾವರಣ ಕಾರ್ಯಕ್ರಮದಲ್ಲಿ ನಟ ಅಶ್ವಿನ್ ಮತ್ತು ಹಿರಿಯ ನಟಿ ಸಂಗೀತಾ ಮಾಧವನ್ ಸಿನಿಮಾ ಹಾಗೂ ಹಾಡಿನ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ಹಾಡನ್ನು ನಟ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದಾರೆ.ಪ್ರತಿಯೊಬ್ಬರಿಗೂ ತಾಯಿಯ ನೆನಪು ತರುವ ಹಾಡು ಹಾಡಿನ ಬಗ್ಗೆ ಮಾತನಾಡಿದ ನಟ ಅಶ್ವಿನ್, “ಎಲ್ಲಾ ತಾಯಂದಿರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಪಡುವ ಕಷ್ಟ ಮತ್ತು ಬೆಂಬಲವೇ ಈ ಚಿತ್ರದ ಮುಖ್ಯ ಕಥಾವಸ್ತು. ಈ ಸಾಂಗ್ ಕೇಳಿದಾಗ ಪ್ರತಿಯೊಬ್ಬರಿಗೂ ತಮ್ಮ ತಾಯಿಯ ನೆನಪಾಗುತ್ತದೆ. ಟೀಸರ್ ನೋಡಿ ಮೆಚ್ಚಿಕೊಂಡಿದ್ದ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು, ನಮಗೆ ಬೆಂಬಲವಾಗಿ ನಿಂತು ಈ ಹಾಡನ್ನು ಬಿಡುಗಡೆ ಮಾಡಿಕೊಟ್ಟಿರುವುದು ತುಂಬಾ ಖುಷಿ ತಂದಿದೆ” ಎಂದರು.ಅಲ್ಲದೆ, ಮೋಹನ್‌ಲಾಲ್ ಹಾಗೂ ರಜನಿಕಾಂತ್ ಅವರಂತಹ ಹಿರಿಯ ನಟರ ಸಿನಿಮಾಗಳಲ್ಲಿ ನಟಿಸಿರುವ ಸಂಗೀತಾ ಅವರು ಈ ಚಿತ್ರವನ್ನು ಒಪ್ಪಿಕೊಂಡು ಅಭಿನಯಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಚಿತ್ರೀಕರಣದ ಬಗ್ಗೆ ಮಾಹಿತಿ ನೀಡಿದ ಅವರು, “ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಇನ್ನು ಎರಡು ಫೈಟ್ ಹಾಗೂ ಒಂದು ವಿಶೇಷ ಕ್ಯಾಮಿಯೋ ಹಾಡಿನ ಶೂಟಿಂಗ್ ಬಾಕಿ ಇದೆ. ಈ ಹಾಡಿಗಾಗಿ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರನ್ನು ಕರೆತರುವ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಫೈನಲ್ ಆಗಲಿದೆ” ಎಂದು ಹೇಳಿದರು.ಈ ಸಿನಿಮಾ ಒಪ್ಪಿಕೊಂಡದ್ದು ಉತ್ತಮ ನಿರ್ಧಾರ: ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿರುವ ಸಂಗೀತಾ ಮಾಧವನ್ ಮಾತನಾಡಿ, “ನಿರ್ದೇಶಕ ಕಿರಣ್ ಮತ್ತು ಕಥೆಗಾರ ಮನೋಜ್ ಕೃಷ್ಣ ಅವರು ಕಥೆ ವಿವರಿಸಿದ ತಕ್ಷಣವೇ ನನಗಿಷ್ಟವಾಯಿತು. ನಂತರ ಈ ತಾಯಿಯ ಹಾಡನ್ನು ಪ್ಲೇ ಮಾಡಿದಾಗ ಅದರ ಮ್ಯಾಜಿಕ್ ಹಾಗೂ ತಾಂತ್ರಿಕ ಗುಣಮಟ್ಟಕ್ಕೆ ನಾನು ಕಂಪ್ಲೀಟ್ ಫ್ಲಾ÷್ಯಟ್ ಆದೆ. ತಾಯಿಯಾಗಿ ನನಗೂ ಈ ಹಾಡು ತುಂಬಾ ಹತ್ತಿರವಾಯಿತು. ಈ ಚಿತ್ರವನ್ನು ಒಪ್ಪಿಕೊಂಡದ್ದು ನನ್ನ ವೃತ್ತಿಜೀವನದ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು,” ಎಂದು ಹರ್ಷ ವ್ಯಕ್ತಪಡಿಸಿದರು.
ಉತ್ತಮ ತಾಂತ್ರಿಕ ವರ್ಗ ಹಾಗೂ ಭಾವುಕ ಕಥಾಹಂದರ ಹೊಂದಿರುವ ‘ಸೆಲೆಬ್ರಿಟಿ’ ಚಿತ್ರದ ಈ ಮದರ್ ಸಾಂಗ್ ಸದ್ಯ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅಶ್ವಿನ್, ಪ್ರಿಯಾಂಕಾ ಆಚಾರ್ ಹಾಗೂ ಸಂಗೀತಾ ಮಾಧವನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಈ ಚಿತ್ರವನ್ನು ಸಾ ರಾ ಮಹೇಶ್ ಮತ್ತು ಸುಷ್ಮಾ ಅಶ್ವಿನ್ ಅವರು ಜಂಟಿಯಾಗಿ ನಿರ್ಮಿಸುತ್ತಿದ್ದು, ಆನಂದ್ ಮೀನಾಕ್ಷಿ ಅವರ ಛಾಯಾಗ್ರಹಣ ಹಾಗೂ ಪ್ರವೀಣ್ ಕೆ ಗೌಡ ಅವರ ಸಂಕಲನ ಕಾರ್ಯವಿದೆ. ಕಲಾ ನಿರ್ದೇಶಕರಾಗಿ ಗುಣ ಹಾಗೂ ಸಹ ನಿರ್ದೇಶಕರಾಗಿ ಮನೋಜ್ ಕೃಷ್ಣ ಕಾರ್ಯನಿರ್ವಹಿಸುತ್ತಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST