LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ನಾಳೆ ಸ್ವಾತಂತ್ರ್ಯ ದಿನಾಚರಣೆಗೆ 4 ಲಕ್ಷ ಲಾಡು ವಿತರಣೆ


ರಾಮನಗರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಲಾಡು ವಿತರಣೆ ಮಾಡುವ ಸಂಪ್ರದಾಯ ಮುಂದುವರಿಸಿಕೊAಡು ಬಂದಿರುವ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ಅವರು ಈ ಸಲವೂ ಸಹ ಆ.15ರಂದು ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಕಚೇರಿಗಳ ಸಿಬ್ಬಂದಿಗಳಿಗೆ 4 ಲಕ್ಷ ಲಾಡುಗಳನ್ನು ವಿತರಿಸಲು ಮುಂದಾಗಿದ್ದಾರೆ.ನಗರದ ಹೊರವಲಯದ ಎಸ್.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ಗುರುವಾರ ಬಿಇಒ ಸೇರಿದಂತೆ ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಅವರಿಗೆ ಲಾಡು ತುಂಬಿದ ಬಾಕ್ಸ್ ಗಳನ್ನು ಹಸ್ತಾಂತರಿಸಿದರು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ, ಮದರಸ ಹಾಗೂ ಸರ್ಕಾರಿ ಕಚೇರಿಗಳ ಸಿಬ್ಬಂದಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಲಾಡು ವಿತರಿಸುವಂತೆ ಶಾಸಕರು ಸೂಚನೆ ನೀಡಿದರು.ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮೆಲ್ಲರ ಹೆಮ್ಮೆಯ ರಾಷ್ಟಿçÃಯ ಹಬ್ಬ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದೇವೆ. ಎಲ್ಲರೂ ಸಿಹಿ ಸವಿಯುವ ಮೂಲಕ ರಾಷ್ಟಿçÃಯ ಹಬ್ಬವನ್ನು ಸಂಭ್ರಮಿಸಬೇಕು. ಜಾತಿ, ಧರ್ಮ ಮತ್ತು ವರ್ಗಗಳ ಭೇದ ಭಾವವಿಲ್ಲದೆ ಪ್ರತಿಯೊಬ್ಬರಿಗೂ ಸಿಹಿ ಹಂಚುವ ಮೂಲಕ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ ಎಂದರು.ಮಹಾತ್ಮರು, ವೀರ ಸೇನಾನಿಗಳ ತ್ಯಾಗ ಬಲಿದಾನದ ಸಂಕೇತವಾದ ಸ್ವಾತಂತ್ರ್ಯ ದಿನಾಚರಣೆ ಪ್ರತಿಯೊಬ್ಬ ಭಾರತೀಯನು ಸಂಭ್ರಮಿಸುವ ಹಬ್ಬ. ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ಸಹೋದರತ್ವದ ಸಂದೇಶದ ಜೊತೆಗೆ ದೇಶಭಕ್ತಿಯ ಸಂದೇಶ ಸಾರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದರಲ್ಲಿ ನಾನೂ ಒಬ್ಬನಾಗಿದ್ದೇನೆ ಎಂದರು.
15 ವರ್ಷಗಳಿಂದ ಸಿಹಿ ಹಂಚಿಕೆ: ಸ್ವಾತಂತ್ರö್ಯ ದಿನಾಚರಣೆಯಂದು ಲಾಡುಗಳನ್ನು ವಿತರಿಸುತ್ತಾ ಬಂದಿದ್ದೇನೆ. 2011ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯನಾದ ಸಮಯದಲ್ಲಿ ಎಲ್‌ಕೆಜಿ ಮಕ್ಕಳಿಂದ ಹಿಡಿದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಲಾಡು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. 2014ರಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷನಾದ ಬಳಿಕ, ಸಿಹಿ ಹಂಚುವಿಕೆಯನ್ನು ಇಡೀ ಜಿಲ್ಲೆಗೆ ವಿಸ್ತರಿಸಲಾಯಿತು. ಕಳೆದ 15 ವರ್ಷಗಳಿಂದ ಈ ಸಂಪ್ರದಾಯವನ್ನು ಮುಂದುವರೆಸಿಕೊAಡು ಬರುತ್ತಿದ್ದು, ಶಾಸಕನಾದ ಬಳಿಕವೂ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಸೇರಿದಂತೆ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೂ ಸಿಹಿ ಹಂಚಿಕೆ ಮಾಡಲಾಗುತ್ತಿದೆ. ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಲಾಡು ವಿತರಣೆ ಮಾಡಲು 4 ಲಕ್ಷ ಲಾಡುಗಳನ್ನು ತಯಾರಿಸಲಾಗಿದೆ ಎಂದು ಹೇಳಿದರು.ಈ ವರ್ಷ ಜಿಲ್ಲೆಯಲ್ಲಿರುವ 1351 ಅಂಗನವಾಡಿ ಕೇಂದ್ರಗಳು, 1574 ಸರ್ಕಾರಿ-ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳು, 88 ಪದವಿ ಪೂರ್ವ ಕಾಲೇಜುಗಳು ಹಾಗೂ ಐಟಿಐ ಸೇರಿದಂತೆ ಇತರೆ 86 ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಉಪನ್ಯಾಸಕರು ಮತ್ತು 5 ತಾಲೂಕುಗಳ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಸಿಬ್ಬಂದಿ ವರ್ಗ ಸೇರಿ ಒಟ್ಟು 3,38,247 ಲಾಡು ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಭಾಗವಹಿಸುವ ಸಾರ್ವಜನಿಕರಿಗೂ ಲಾಡುಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.ದೇಶ ಪ್ರೇಮ ಜಾಗೃತಿ ಉದ್ದೇಶ: ಯುವ ಜನರಲ್ಲಿ ದೇಶ ಪ್ರೇಮ ಕುರಿತು ಜಾಗೃತಿ ಮೂಡಿಸುವುದು, ಶಾಲಾ-ಕಾಲೇಜು ಮಕ್ಕಳಲ್ಲಿ ರಾಷ್ಟ್ರೀ ಯ ಹಬ್ಬಗಳ ಬಗ್ಗೆ ಹೆಚ್ಚಿನ ಆಸಕ್ತಿ, ಗೌರವ ಹಾಗೂ ಸಂಭ್ರಮದ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಸಿಹಿ ಹಂಚಿಕೆ ಮಾಡಲಾಗುತ್ತಿದೆ. ಕಳೆದ 15 ವರ್ಷಗಳಿಂದ ಇಡೀ ಜಿಲ್ಲೆಗೆ ಸಿಹಿ ವಿತರಣೆ ಮಾಡುತ್ತಿದ್ದು, ಇದು ನನಗೆ ಸಿಕ್ಕ ಪುಣ್ಯದ ಕೆಲಸ ಎಂದು ಭಾವಿಸಿದ್ದೇನೆ ಎಂದರು.ಕ್ಷೇತ್ರದ ಅಭಿವೃದ್ದಿಗೆ ಶ್ರಮ: ರಾಮನಗರ ಕ್ಷೇತ್ರದ ಪ್ರತಿನಿಧಿಯಾಗಿ, ಜನರ ಸೇವಕನಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಇಡೀ ರಾಜ್ಯದಲ್ಲಿ ರಾಮನಗರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅನೇಕ ಶಾಶ್ವತ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಮತ್ತಷ್ಟು ಕಾರ್ಯಕ್ರಮಗಳು ಘೋಷಣೆಯಾಗುವುದಷ್ಟೇ ಬಾಕಿ ಇದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ನೂತನ ಸಚಿವರಾದ ಎಚ್.ಸಿ.ಬಾಲಕೃಷ್ಣ ಅವರೆಲ್ಲರ ಸಹಕಾರದಿಂದ ರಾಮನಗರ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯುವ ಸಂಕಲ್ಪ ಮಾಡಿದ್ದೇನೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಎಚ್.ರಾಜು, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸದಸ್ಯರಾದ ಪಾರ್ವತಮ್ಮ, ವಿಜಯಕುಮಾರಿ, ನಾಗಮ್ಮ, ಜಯಲಕ್ಷ÷್ಮಮ್ಮ, ಆಯಿಷಾ ಬಾನು, ಸೋಮಶೇಖರ್(ಮಣಿ), ಮುಖಂಡರಾದ ರಾಜಣ್ಣ, ಶಿವಮಾದಯ್ಯ, ಈಶ್ವರ್, ಜಯಣ್ಣ, ರಘು, ರೇವಣ್ಣ, ಗುಡ್ಡೆ ವೆಂಕಟೇಶ್, ಶಿವಶಂಕರ್, ಗುರುವೇಗೌಡ, ವೆಂಕಟೇಶ್, ರವಿ, ಗುರುಪ್ರಸಾದ್, ಅಶ್ವಥ್, ಗೋಪಿ, ದಾಸೇಗೌಡ, ರವಿಕುಮಾರ್, ಹೇಮಂತ್‌ಕುಮಾರ್, ಶಿವಮೂರ್ತಿ, ರಮೇಶ್, ಶಫಿ ಅಹಮದ್, ಖುರೇಷಿ ಸೇರಿದಂತೆ ಹಲವರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST