LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಹಾರ್ದಿಕ್ ಪಾಂಡ್ಯ ಟ್ರೇಡ್ ಬಗ್ಗೆ ಮೌನ ಮುರಿದ ಸಿಎಸ್‌ಕೆ!. ಸೇರಿಸಿಕೊಳ್ಳಲು ಮುಹೂರ್ತ ಫಿಕ್ಸ್ ಆಯ್ತಾ?


ಐಪಿಎಲ್: 2026ರಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ನೀಡಿದ ನಂತರ, ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡುವ ವದಂತಿಗಳು ಹರಡಿದವು. ಈ ಟ್ರೇಡಿಂಗ್‌ನಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ಮುಂದಿರುವAತೆ ಕಾಣುತ್ತಿದೆ. ಆದರೆ ಸಿಎಸ್‌ಕೆ ಇಲ್ಲಿಯವರೆಗೆ ಇದರ ಬಗ್ಗೆ ಮೌನವಾಗಿತ್ತು. ಈಗ ಸಿಎಸ್‌ಕೆ ಪ್ರತಿಕ್ರಿಯಿಸಿ, ಟ್ರೇಡಿಂಗ್ ಮಾಡುವ ಸಮಯವನ್ನು ಬಹಿರಂಗಪಡಿಸಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಚೆನ್ನೆöÊ ಸೂಪರ್ ಕಿಂಗ್ಸ್ಗೆ ಟ್ರೇಡ್ ಆಗುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಅವರು ಪ್ರತಿಕ್ರಿಯಿಸಿದ್ದಾರೆ. ನಾವು ಇನ್ನೂ ಇದರ ಬಗ್ಗೆ ಯೋಚಿಸಲೇ ಇಲ್ಲ. ಮೊದಲು ಹೆಡ್ ಕೋಚ್ ಬಗ್ಗೆ ನಿರ್ಧರಿಸುತ್ತೇವೆ. ಹೆಡ್ ಕೋಚ್ ಅನೇಕರು ಆಸಕ್ತಿ ತೋರಿಸಿ ಕರೆ ಮಾಡಿದ್ದಾರೆ. ಅದನ್ನು ಮೊದಲು ಫೈನಲ್ ಮಾಡುತ್ತೇವೆ ಎಂದಿದ್ದಾರೆ. ಇದರಿಂದ ಸ್ಟೀಫನ್ ಫ್ಲೆಮಿಂಗ್ ಬದಲಿಗೆ ಹೊಸ ಕೋಚ್ ಹುಡುಕುತ್ತಿದ್ದಾರೆ ಎಂದು ಸ್ಪಷ್ಟವಾಗುತ್ತದೆ. ಹೊಸ ಕೋಚ್ ನಿರ್ಧಾರವಾದ ನಂತರವೇ ಪಾಂಡ್ಯ ಅವರ ಟ್ರೇಡ್ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದ ಸ್ಪಷ್ಟವಾಗಿದೆ. ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಚೆನ್ನೆöÊ ಸೂಪರ್ ಕಿಂಗ್ಸ್ ಜೊತೆಗೆ ಮೂರು ಇತರ ತಂಡಗಳು ಸ್ಪರ್ಧಿಸುತ್ತಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಅವರನ್ನು ಬಯಸುತ್ತಿದೆ. ನಾಯಕತ್ವದ ಆಫರ್ ನೀಡಿದೆ. ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಕೂಡ ಅವರನ್ನು ಟ್ರೇಡ್ ಮಾಡಲು ಪ್ರಯತ್ನಿಸುತ್ತಿವೆ. ಆದರೆ ನಿಜವಾದ ಹೋರಾಟ ಚೆನ್ನೆöÊ ಮತ್ತು ಕೆಕೆಆರ್ ನಡುವೆಯೇ ಇದೆ ಎಂದು ತೋರುತ್ತಿದೆ.  

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST