ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್ ಪಾಟೀಲ್ ಸರ್ವಾನುಮತನದಿಂದ ಆಯ್ಕೆಯಾದರು.ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಸಿಎಂ ಡಿಕೆ ಶಿವಕುಮಾರ್ ಅವರು ಜಿ.ಎಸ್ ಪಾಟೀಲ್ ಅವರನ್ನ ಕರೆತಂದು ಸ್ಪೀಕರ್ ಪೀಠದಲ್ಲಿ ಕೂರಿಸಿದರು. ಸ್ಪೀಕರ್ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಕಲಾಪದೊಳಗೆ ವಿಪಕ್ಷ ಬಿಜೆಪಿ ಸದಸ್ಯರು ಪ್ರವೇಶಿಸಿದ್ರು.ಸ್ಪೀಕರ್ ಆಯ್ಕೆ ಬಗ್ಗೆ ಸದನದಲ್ಲಿ ಹಂಗಾಮಿ ಸ್ಪೀಕರ್ ಜಯಚಂದ್ರ ರೂಲಿಂಗ್ ಕೊಟ್ಟರು. ನಂತರ ಸಿಎಂ ಡಿಕೆ ಶಿವಕುಮಾರ್ ಸ್ಪೀಕರ್ ಸ್ಥಾನಕ್ಕೆ ಜಿ.ಎಸ್ ಪಾಟೀಲ್ ಅವರ ಹೆಸರನ್ನು ಸೂಚಿಸಿದರು. ಜಿ.ಎಸ್ ಪಾಟೀಲ್ ಹೆಸರಿಗೆ ಡಿಸಿಎಂ ಪರಮೇಶ್ವರ್ ಅನುಮೋದನೆ ನೀಡಿದರು. ಬಳಿಕ ಹಂಗಾಮಿ ಸ್ಪೀಕರ್ ಪ್ರಸ್ತಾವನೆ ಮತಕ್ಕೆ ಹಾಕಿದರು. ಪ್ರಸ್ತಾವನೆ ಅಂಗೀಕಾರದ ಬಳಿಕ ನೂತನ ಸ್ಪೀಕರ್ ಆಗಿ ಜಿ.ಎಸ್ ಪಾಟೀಲ್ ಅವಿರೋಧವಾಗಿ ಆಯ್ಕೆಯಾದರು.