ಬೆಂಗಳೂರು: ಇಷ್ಟು ದಿನ ಸಭಾಪತಿಗಳ ಸ್ಥಾನದಲ್ಲಿದ್ದ ಬಸವರಾಜ ಹೊರಟ್ಟಿ ಅವರು ಸರ್ಕಾರದ ಅದೇಶದ ಮೇರೆಗೆ ಸಭಾಪತಿಗಳ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಸವರಾಜ ಹೊರಟ್ಟಿ ಸತತವಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಕಳೆದ ನಾಲ್ಕುವರೆ ದಶಕಗಳಿಂದಲೂ ವಿಧಾನಪರಿಷತ್‌ನಲ್ಲಿ ಸದಸ್ಯರಾಗಿದ್ದರು.ಸದ್ಯ ಕಾಂಗ್ರೆಸ್ ಸರ್ಕಾರದ ಸಂಖ್ಯಾ ಬಲಾಬಲದ ಮೇಲೆ ಬಸವರಾಜ ಹೊರಟ್ಟಿಗೆ ಸ್ಥಾನ ತ್ಯಜಿಸುವಂತೆ ಒತ್ತಡ ಹೇರಲಾಗಿತ್ತು. ಆಗಸ್ಟ್ 7 ರಂದು ಒತ್ತಡ ತಡೆಯಲಾರದೇ ಸಭಾಪತಿಗಳ ಸ್ಥಾನಕ್ಕೆ ಹೊರಟ್ಟಿ ಅವರು ರಾಜೀನಾಮೆ ನೀಡಿದ್ದರು.ರಾಜೀನಾಮೆ ತೆಗೆದುಕೊಂಡ ಪ್ರಕ್ರಿಯೆ ಬಗ್ಗೆ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದರು. ಆ.14 ರಂದು ರಾಜೀ ನಾಮೆ ನೀಡುತ್ತೇನೆ ಎಂದಿದ್ದರು.