ಬೆಂಗಳೂರು: ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪೊಲೀಸರು ತಡೆಯೊಡ್ಡುತ್ತಿದ್ದಂತೆ ವಾಟಾಳ್ ನಾಗರಾಜ್ ಅವರು ತಮ್ಮ ನಿವಾಸದ ಗೇಟ್ ಒಳಗಡೆಯೇ ಕುಳಿತು ಪಟ್ಟು ಹಿಡಿದರು. ``ನಾನು ಮನೆಯಿಂದ ಆಚೆಯೇ ಬರುವುದಿಲ್ಲ, ವಶಕ್ಕೆ ಪಡೆಯುವ ಕಾರಣಕ್ಕಾಗಿ ಹೊರಬರಲ್ಲ'' ಎಂದು ಪಟ್ಟು ಹಿಡಿದರು.