ಬೆಂಗಳೂರು: ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿರುವ ಆದೇಶವನ್ನು ಹಿಂಪಡೆಯುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಆರೋಗ್ಯ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗ ಹೊರಡಿಸಿರುವ ಆದೇಶವನ್ನು ಯಾವುದೇ ಕಾರಣಕ್ಕೂ ಸದ್ದು ಮಾಡುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ತಾವು ಮಾತನಾಡುವುದಾಗಿ ತಿಳಿಸಿದ್ದಾರೆ. ಪಾನ್ ಮಸಾಲದಲ್ಲಿ ಯಾವುದೇ ಕಾರಣಕ್ಕೂ ಗುಟ್ಕಾ ಬೆರಕೆಯಾಗಿ ಬರಬಾರದು. ಬಂದಲ್ಲಿ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಮರ‍್ನಾಲ್ಕು ದಿನ ಕಾದು ನೋಡು ಎಂದು ಹೇಳಿದ್ದಾರೆ. ಗುಟ್ಕಾ ನಿಷೇಧದಿಂದಾಗಿ ಅಡಿಕೆ ಬೆಳೆಗಾರರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳಿರುವ ಅವರು, ಈ ಬಗ್ಗೆ ವಾಪಸ್ ಪಡೆಯುವ ಪ್ರಮೇಯವೇ ಇಲ್ಲ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕಲಬೆರಕೆ ಆಹಾರ ವಿರುದ್ಧ ನಡೆಸುತ್ತಿರುವ ದಾಳಿಯ ಕ್ರಮವನ್ನು ವಿವರಿಸಿದ ಅವರು, ಪಿಜಿಗಳಲ್ಲಿ ಸಹ ಗುಣಮಟ್ಟದ ಆಹಾರ ಸರಬಾರಜಿಗೂ ಸಂಬಂಧಪಟ್ಟಂತೆ ತಪಾಸಣೆ ನಡೆಸಲಾಗುವುದು. ಖಾಸಗಿ ಪಿಜಿಗಳ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು. ರೈಲ್ವೇ ಕ್ಯಾಂಟೀನ್, ಬಸ್ ನಿಲ್ದಾಣ, ಮದುವೆ ಮನೆಗಳಿಗೂ ಭೇಟಿ ನೀಡಿ ಆಹಾರ ಗುಣಮಟ್ಟಗಳ ಪರಿಶೀಲನೆ ನಡೆಯಲಿದೆ. ವಿಮಾನಗಳಲ್ಲೂ ಸಹ ಆಹಾರ ತಪಾಸಣೆ ಮಾಡಲಾಗುವುದು. ಎಲ್ಲಿ ಗುಣಮಟ್ಟ ಇರುವುದಿಲ್ಲ ಅಲ್ಲಿಯೂ ಸಹ ಕ್ರಮ ನಡೆಯಲಿದೆ ಎಂದಿದ್ದಾರೆ. ಮೆಡಿಕಲ್ ಸ್ಟೋರ್‌ಗಳಲ್ಲಿ ಕ್ಯೂರ್ ಆರ್ ಕೋಡ್ ಅಳವಡಿಸಲಾಗುವುದು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೆಡಿಕಲ್ ಸ್ಟೋರ್‌ನ ದೂರಗಳ ಬಗ್ಗೆಯೂ ಜಾರಿಗೆ ತರುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.