LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ಇಂದು ಶಕ್ತಿದೇವತೆ ಚಾಮುಂಡೇಶ್ವರಿ ದೇವಿಯ ಐತಿಹಾಸಿಕ ಕರಗ ಮಹೋತ್ಸವ 

ಕಂಗೊಳಿಸುತ್ತಿರುವ ವರ್ಣಮಯ ವಿದ್ಯುತ್ ದೀಪಾಲಂಕಾರಗಳು | ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾಗಿ 



ಅರುಣ್. ಕೆ ರಾಮನಗರ 
ರಾಮನಗರ: ನಗರದ ಶಕ್ತಿದೇವತೆಯ ಚಾಮುಂಡೇಶ್ವರಿ ದೇವಿಯ ಐತಿಹಾಸಿಕ ಕರಗ ಮಹೋತ್ಸವ ಇಂದು  ಜರುಗಲಿದೆ. ಕರಗದ ಹಿನ್ನೆಲೆಯಲ್ಲಿ ಇಡೀ ನಗರದ ಪ್ರಮುಖ ರಸ್ತೆಗಳಿಂದಿಡಿದು ಬಹುತೇಕ ಬೀದಿಗಳು ವರ್ಣಮಯ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿವೆ. ದೇವಾಲಯವನ್ನು ಸಹ ವಿಶೇಷವಾಗಿ ಅಲಂಕರಿಸಲಾಗಿದೆ.
ಕರಗ ಪ್ರಯುಕ್ತ ಚಾಮುಂಡೇಶ್ವರಿ ದೇವಾಲಯದಲ್ಲಿ ಈಗಾಗಲೇ ವಿವಿಧ ಧಾರ್ಮಿಕ ಆಚರಣೆಗಳು ಶುರುವಾಗಿವೆ. ಇಂದು  ದೇವಿಗೆ ವಿಶೇಷ ಅಭಿಷೇಕ ಮಾಡಿ ಅಲಂಕಾರ ಮಾಡಲಾಗುತ್ತದೆ. ಮಹಾಮಂಗಳಾರತಿ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. 
ಸಂಜೆ ಕರಗಧಾರಕ ದೇವಿಪ್ರಸಾದ್ ಸಿಂಗ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ ಅಗ್ನಿಕೊಂಡಕ್ಕೆ ಜೋಡಿಸಿರುವ ಸೌದೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ರಾತ್ರಿ ದೇವಿಯ ಹೂವಿನ ಕರಗ ಹೊರಡಲಿದ್ದು, ನಗರದಾದ್ಯಂತ ಸಂಚರಿಸಲಿದೆ. ಹೋದೆಲ್ಲೆಲ್ಲಾ ಭಕ್ತರು ಕರಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ರಾತ್ರಿಯಿಡೀ ನಗರವನ್ನು ಸುತ್ತಾಡುವ ಕರಗವು ಬುಧವಾರ ಬೆಳಿಗ್ಗೆ ದೇವಾಲಯದ ಎದುರು ನಿರ್ಮಿಸಿರುವ ಅಗ್ನಿಕೊಂಡವನ್ನು ಹಾಯುವ ಮೂಲಕ ಕರಗ ಮಹೋತ್ಸವಕ್ಕೆ ತೆರೆ ಬೀಳಲಿದೆ. ಕರಗ ಪ್ರಯುಕ್ತ ನಗರದ ಜನರು ಹಬ್ಬ ಆಚರಿಸಲಿದ್ದಾರೆ. ಮಾಂಸಾಹಾರ, ಸಸ್ಯಾಹಾರ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ಮಾಡಿ ಸವಿಯಲಿದ್ದಾರೆ.
ಚಾಮುಂಡೇಶ್ವರಿ ಕರಗದ ಜೊತೆಗೆ ಶೆಟ್ಟಿಹಳ್ಳಿ ಆದಿಶಕ್ತಿ, ಮಗ್ಗದ ಕೇರಿ ಮಾರಮ್ಮ, ಬಾಲಗೇರಿಯ ಬಿಸಿಲು ಮಾರಮ್ಮ, ಭಂಡಾರಮ್ಮ, ಕೊಂಕಾಣಿದೊಡ್ಡಿ ಆದಿಶಕ್ತಿ, ಐಜೂರು ಆದಿಶಕ್ತಿ, ತೋಪಖಾನ್ ಮೊಹಲ್ಲಾ ಮುತ್ತುಮಾರಮ್ಮ, ಹುಲಿಯೂರಮ್ಮ ಅಮ್ಮನವರ ಕರಗ ಮಹೋತ್ಸವ ಜರುಗಲಿದೆ.
ಕರಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸೋಮವಾರ ರಾತ್ರಿ 12ರಿಂದ ಬುಧವಾರ ರಾತ್ರಿ 12ವರೆಗೆ ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿದೆ. ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಆಟಿಕೆಗಳು ಹಾಗೂ ಬಗೆ ಬಗೆಯ ಅಂಗಡಿಗಳು ಗಮನ ಸೆಳೆದವು. ಸಂಗೀತದ ರಸದೌತಣ ಕರಗ ಪ್ರಯುಕ್ತ ಇಂದುಸAಜೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರು ಹಾಗೂ ಸಿನಿಮಾ ಕಲಾವಿದರು ಭಾಗವಹಿಸಲಿದ್ದಾರೆ. ಸಿನಿಮಾ ನಟರಾದ ಕಿಚ್ಚ ಸುದೀಪ್  ಸೇರಿದಂತೆ ಹಲವರು ಮೆರಗು ತುಂಬಲಿದ್ದಾರೆ. ಕಾರ್ಯಕ್ರಮದಲ್ಲಿ  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಮಾಜಿ ಸಂಸದ ಡಿ.ಕೆ. ಸುರೇಶ್ ಸಚಿವರಾದ ಎಚ್.ಸಿ. ಬಾಲಕೃಷ್ಣ ಸಿ.ಪಿ. ಯೋಗೇಶ್ವರ್ ಪರಿಷತ್ ಸದಸ್ಯರದ ಎಸ್.ರವಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಾಹನ ಸಂಚಾರದಲ್ಲಿ ಮಾರ್ಪಾಡು ಚಾಮುಂಡೇಶ್ವರಿ ಕರಗ ಮಹೋತ್ಸವ ಪ್ರಯಕ್ತ ರಾಮನಗರದಲ್ಲಿ ಸಾವಿರಾರು ಜನರು ಸೇರುವು ದರಿಂದ ಸಂಚಾರ ವ್ಯವಸ್ಥೆಯಲ್ಲಿ ಮಂಗಳವಾರ ಮಾರ್ಪಾಡು ಮಾಡಲಾಗಿದೆ. ಸಂಜೆ 4 ಗಂಟೆಯಿAದ ಕರಗ ಮುಗಿಯುವವರಿಗೆ ಕೆಲ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. 
ಎಲ್ಲೆಲ್ಲಿ ಮಾರ್ಪಾಡು: ರಾಮನಗರ ಟೌನ್ ಪಿಡಬ್ಲೂ÷್ಯಡಿ ಸರ್ಕಲ್ನಿಂದ (ಪೊಲೀಸ್ ಭವನ) ವಾಟರ್ ಟ್ಯಾಂಕ್ ಸರ್ಕಲ್ ಆಲದ ಮರ ಸರ್ಕಲ್ ಚಾಮುಂಡೇಶ್ವರಿ ದೇವಸ್ಥಾನದವರೆಗೆ ಚಾಮುಂಡೇಶ್ವರಿ ದೇವಸ್ಥಾನದಿಂದ ಅಗ್ರಹಾರದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಿಂದ ಕಾಮನಗುಡಿ ಸರ್ಕಲ್ವರೆಗೆ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ. ಪಾರ್ಕಿಂಗ್ ಸ್ಥಳಗಳು: ವಿಜಯನಗರದ ಆಂಜನೇಯ ಸ್ವಾಮಿ ಆರ್ಚ್ ಬಳಿ ಇರುವ ಅರುಣೋದಯ ಲೇಔಟ್ನಲ್ಲಿ ಖಾಲಿ ಪ್ರದೇಶ ಜಿಲ್ಲಾ ಆಸ್ವತ್ರೆ ಹಾಗೂ ಜಿಲ್ಲಾ ಪಂಚಾಯಿತಿ ಭವನದಲ್ಲಿರುವ ಪಾರ್ಕಿಂಗ್ ಸ್ಥಳ ಕಂದಾಯ ಭವನದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ  ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯದ ಯಶವಂತರಾಯಗೌಡರಾಜೀನಾಮೆ ನೀಡಿದರೆ  ತಕ್ಷಣ ಅಂಗೀಕಾರಸಂಪ್‌ನೊಳಗೆ ಬಿದ್ದಿದ್ದ ಗೋವು ರಕ್ಷಣೆಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆವೈಭವದಿಂದ ಜರುಗಿದ ಶ್ರೀ ಕೃಷ್ಣರಾಜಮುಡಿ ಉತ್ಸವ`ರತ್ನಗರ್ಭ’ದ ಫಸ್ಟ್ ಲುಕ್  ಮೋಷನ್ ಪೋಸ್ಟರ್ ಬಿಡುಗಡೆ`ಕರ್ಣಾಟಬಲಂ ಅಜೇಯಂ' ಚಿತ್ರಕ್ಕಾಗಿ ಬಾದಾಮಿ ಬೆಟ್ಟದಲ್ಲಿ ಮೇಳೈಸಿದ ಕಲಾಮೇಳಹಣದ ವ್ಯಾಮೋಹದಲ್ಲಿ ಕಳೆಗುಂದಿದ ಮಾನವೀಯತೆ: ಪೋಷಕರನ್ನು ನಿರ್ಲಕ್ಷಿಸುವವರ ವಿರುದ್ಧ ಕಾಯ್ದೆಯ ಅಸ್ತ್ರ-ನ್ಯಾಯಾಧೀಶೆ ಜಯಶ್ರೀತೈಪೆ ಓಪನ್ ಬ್ಯಾಡ್ಮಿಂಟನ್ ಗೆದ್ದು ಇತಿಹಾಸ ಬರೆದ 17ರ ತನ್ವಿ ಶರ್ಮಾಶ್ರೀಲಂಕಾ-ಭಾರತ ಟೆಸ್ಟ್ ಸರಣಿಯಿಂದ ಜಸ್ಟ್ರೀತ್ ಬುಮ್ರ ಔಟ್, ಆಕಿಬ್ ನಬಿ ಇನ್!