ನವದೆಹಲಿ: ಶ್ರೀಲಂಕಾ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಭಾರತದ ಪ್ರಮುಖ ವೇಗಿ ಜಸ್ಟ್ರೀತ್ " ಬುಮ್ರ ಹೊರಬಿದ್ದಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಜಮ್ಮು ಮತ್ತು ಕಾಶ್ಮೀರದ 29 ವರ್ಷದ ವೇಗಿ ಆಕಿಬ್ ನಬಿ ಅವರನ್ನು ಬುಮ್ರ‍್ರ ಅವರ ಬದಲಿಯಾಗಿ ಬಿಸಿಸಿಐ ಸೋಮವಾರ ಹೆಸರಿಸಿದ್ದು, ನಬಿಗೆ ಚೊಚ್ಚಲ ಬಾರಿಗೆ ಭಾರತ ಹಿರಿಯರ ತಂಡದಿಂದ ಕರೆ ಲಭಿಸಿದೆ.ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಸಮಯದಲ್ಲಿ ಜಸ್ಟ್ರೀತ್ " ಬುಮ್ರ ಅವರ ಎಡ ಮೊಣಕಾಲಿಗೆ ಗಾಯವಾಗಿತ್ತು. ಬೆಂಗಳೂರಿನ ಬಿಸಿಸಿಐ 'ಸೆಂಟರ್ ಆಫ್ ಎಕ್ಸಲೆನ್ಸ್'ನಲ್ಲಿ ಪುನಶ್ಚೇತನ ಪ್ರಕ್ರಿಯೆಗೆ ಒಳಗಾಗಿದ್ದರೂ ಅವರು ಸಂಪೂರ್ಣ ಗುಣಮುಖರಾಗಿಲ್ಲ. ಸದ್ಯಕ್ಕೆ ಅವರನ್ನು ತಡಿಹಿಡಿಯದೆ ಮೈದಾನಕ್ಕೆ ಇಳಿಸುವುದು ಸೂಕ್ತವಲ್ಲ ಎಂದು ಬಿಸಿಸಿಐ ವೈದ್ಯಕೀಯ ತಂಡ ನಿರ್ಧರಿಸಿದ್ದರಿಂದ ಬುಮ್ರ ಟೆಸ್ಟ್ ಸರಣಿಯಿಂದ ಹೊರಗುಳಿಯಬೇಕಾಗಿದೆ.
ಟೀಮ್ ಇಂಡಿಯಾಗೆ ಬಿಗ್ ಶಾಕ್: ಶ್ರೀಲಂಕಾ ಟೆಸ್ಟ್ ಸರಣಿಯಿಂದಜಸ್ಟ್ರೀತ್ " ಬುಮ್ರ ಔಟ್!: ಕಳೆದ ಎರಡು ರಂಜಿ ಟ್ರೋಫಿ ಆವೃತ್ತಿಗಳಲ್ಲಿ ತೋರಿದ ಅಮೋಘ ಪ್ರದರ್ಶನಕ್ಕೆ ನಬಿಗೆ ಈ ಹಿರಿಯರ ತಂಡದ ಕರೆ ಪ್ರತಿಫಲವಾಗಿ ಸಿಕ್ಕಿದೆ. ಇತ್ತೀಚಿನ ಎರಡು ಆವೃತ್ತಿಗಳಲ್ಲಿ ಒಟ್ಟು 104 ವಿಕೆಟ್‌ಗಳನ್ನು ಕಬಳಿಸಿರುವ ನಬಿ, 2025-26ರ ಋತುವೊಂದರಲ್ಲೇ ಬರೋಬ್ಬರಿ 60 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ತಂಡವು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ರಂಜಿ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಲು ಪ್ರಮುಖ ಪಾತ್ರ ವಹಿಸಿದ್ದರು.ಗಾಲ್ ಅಂಗಳದ ಅನುಭವ ಟೀಮ್ ಇಂಡಿಯಾಗೆ ಆಸರೆ: ಇತ್ತೀಚೆಗೆ ನಡೆದ'ಇಂಡಿಯಾ ಎ' ತಂಡದ ಶ್ರೀಲಂಕಾ ಪ್ರವಾಸದಲ್ಲೂ ನಬಿ ತಮ್ಮ ಬೌಲಿಂಗ್ ಚಾತುರ್ಯ ಪ್ರದರ್ಶಿಸಿದ್ದರು. ಗಾಲ್ ಅಂಗಳದಲ್ಲಿ ನಡೆದ ಎರಡು ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು ಆರು ವಿಕೆಟ್‌ಗಳನ್ನು ಪಡೆದು ಗಮನ ಸೆಳೆದಿದ್ದರು. ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 15 ರಿಂದ ಇದೇ ಗಾಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಅಲ್ಲಿನ ಪಿಚ್ ಪರಿಸ್ಥಿತಿಯ ನಬಿ ಅವರ ಇತ್ತೀಚಿನ ಅನುಭವವು ಭಾರತ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ. ಬಿಸಿಸಿಐಗೆ ದೊಡ್ಡ ತಲೆನೋವು: ವೇಗದ ಬೌಲರ್ ಜಸ್ಟ್ರೀತ್ " ಬುಮ್ರ ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್‌ನ ಬೆನ್ನೆಲುಬಾಗಿದ್ದಾರೆ, ಆದರೆ ಗಾಯಗಳಿಂದಾಗಿ ಅವರು ತಮ್ಮ ಫಿಟ್‌ನೆಸ್‌ನಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಬುಮ್ರ ಅವರ ಕೆಲಸದ ಹೊರೆ ನಿರ್ವಹಣೆಯನ್ನು ಬಿಸಿಸಿಐ ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದರೂ, ಅವರು ಒಂದು ಸರಣಿ ಆಡುತ್ತಿದ್ದಂತೆ ಮತ್ತೆ ಮತ್ತೆ ಗಾಯಗೊಂಡು ಮುಂದಿನ ಸರಣಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ವಿಶಿಷ್ಟ ಆಕ್ಷನ್ ಮತ್ತು ನಿಖರವಾದ ಯಾರ್ಕರ್‌ಗಳಿಂದ, ಬುಮ್ರಾ ಅವರು ಸಾಕಷ್ಟು ಯಶಸ್ಸನ್ನು ಸಾಧಿಸಿದ್ದಾರೆ. ಆದರೆ ಅದೇ ಆಷಯಕ್ಷನ್ ಅವರ ಕರಿಯರ್‌ಗೆ ಕಂಟಕವಾಗುತ್ತಿದೆ. ಪದೇ ಪದೇ ಗಾಯಗೊಳ್ಳಲು ಅದೂ ಒಂದು ಕಾರಣವಾಗಿದೆ. 2023ರ ಏಕದಿನ ವಿಶ್ವಕಪ್ ಫೈನಲ್‌ನ ನಂತರ ಬುಮ್ರ ಈ ಸ್ವರೂಪದಲ್ಲಿ ಕೆಲವೇ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಭಾರತ ತಂಡ 2027ರ ವಿಶ್ವಕಪ್ ಗೆಲ್ಲುವ ಹಠ ಹೊಂದಿದೆ. ಆದರೆ ತಂಡದ ಬೌಲಿಂಗ್ ಆಧಾರ ಸ್ತಂಭವಾಗಿರುವ ಬುಮ್ರ
ಗಾಯ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ.