LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಕರ್ಣಾಟಬಲಂ ಅಜೇಯಂ' ಚಿತ್ರಕ್ಕಾಗಿ ಬಾದಾಮಿ ಬೆಟ್ಟದಲ್ಲಿ ಮೇಳೈಸಿದ ಕಲಾಮೇಳ


ಶಾಸಕ, ನಟ, ನಿರ್ಮಾಪಕ ಸಿ.ಪಿ ಯೋಗೇಶ್ವರ್ ಅವರ ಮಗ ಧ್ಯಾನ್ ಯೋಗೇಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ‘ಕರ್ಣಾಟಬಲಂ ಅಜೇಯಂ’ ಚಿತ್ರಕ್ಕೆ  ಬಾದಾಮಿಯಲ್ಲಿ ಅದ್ದೂರಿಯಾಗಿ ಹಾಡಿನ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಚಿತ್ರತಂಡ ಚಿತ್ರೀಕರಣ ವೀಕ್ಷಣೆಗೆ ಮಾಧ್ಯಮದವರನ್ನು ಬಾದಾಮಿಗೆ ಆಹ್ವಾನಿಸಿತ್ತು.  ಬಾದಾಮಿಯ ಕೋಟೆಯಲ್ಲಿ ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣ ಭರದಿಂದ ಸಾಗಿತ್ತು. ಚಿತ್ರದ ನಾಯಕ ಧ್ಯಾನ್ ಸಹಸ್ರಾರು ಕಲಾವಿದರು ಹಾಗೂ ಸಹ ಕಲಾವಿದರೊಂದಿಗೆ ‘ಬಾದಾಮಿ ಸೀಮೆಯಿದು ಎಂತ ಸೊಬಗು ...’ ಎಂಬ ಗೀತೆಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು. ಈ ಹಾಡಿನಲ್ಲಿ ಜನಪದ ಕಲೆಗಳಾದ ಯಕ್ಷಗಾನ, ನಂದಿ ಕೋಲು ಕುಣಿತ ಸೇರಿದಂತೆ ಹಲವು ನೃತ್ಯತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು.  ತ್ರಿಲೋಕ್ ತ್ರಿವಿಕ್ರಮ್ ಅವರ ಸಾಹಿತ್ಯದ ಈ ಗೀತೆಗೆ ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದರು. ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದೆ. ವಿರಾಮದ ವೇಳೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು. ಈ ವೇಳೆ ಮಾತನಾಡಿದ ಸಿ.ಪಿ. ಯೋಗೇಶ್ವರ್, ‘ನಮ್ಮ, “ಕರ್ಣಾಟಬಲಂ ಅಜೇಯಂ’’ ಸಿನಿಮಾ ಚಿತ್ರೀಕರಣ ಪ್ರಾರಂಭಿಸಿ ತಿಂಗಳಾಗುತ್ತಾ ಬಂದಿದೆ.  ನರಗುಂದ, ಬಾದಾಮಿಯ ಸುತ್ತಮುತ್ತ  ನಿರಂತರ ಚಿತ್ರೀಕರಣ ಮಾಡುತ್ತಿದ್ದೇವೆ. ಆನಂತರ ಹೊಸಪೇಟೆ, ಬೆಂಗಳೂರಿನಲ್ಲಿ ಒಂದೆರಡು ದಿನ ಚಿತ್ರೀಕರಣ ಮಾಡಿದರೆ ಮೊದಲ ಹಂತದ ಚಿತ್ರೀಕರಣ ಮುಗಿಯುತ್ತದೆ. ನಂತರ ಎರಡನೇ ಹಂತದಲ್ಲಿ ಹಳೆ ಮೈಸೂರು ಭಾಗದಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಬಾದಾಮಿಯಿಂದ ಶುರುವಾಗುವ ಕಥೆ ಇಡೀ ಕರ್ನಾಟಕಕ್ಕೆ ಸಾಗುತ್ತದೆ. ಇದೊಂದು ಅಪ್ಪಟ ಕನ್ನಡತನದ, ನಮ್ಮ ಮಣ್ಣಿನ ಸಿನಿಮಾ. ಈ ಮೂಲಕ ಇಂದಿನ ಯುವಕರಿಗೆ ಇತಿಹಾಸ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂದಿನ ರೈತರ ಸಮಸ್ಯೆಗಳ ಜೊತೆಗೆ ಚಾಲುಕ್ಯರ ಕಾಲದ ಕಥೆಯನ್ನು  ಇದರಲ್ಲಿ ಹೇಳಲಿದ್ದೇವೆ. ನಾಗಣ್ಣ ಅವರ ನಿರ್ದೇಶನ, ಚಂದ್ರು ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಹಿರಿಯರ ತಂಡ ಇದರಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಪುತ್ರ ಧ್ಯಾನ್  ಸಂಪೂರ್ಣ ತಯಾರಿ ಮಾಡಿಕೊಂಡು ಅಭಿನಯಕ್ಕಿಳಿದಿದ್ದಾನೆ.  ನಾವು ಈ ಚಿತ್ರವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಮಾಡುತ್ತಿದ್ದೇವೆ. ಮಹಾದಾಯಿ ಹೊರಾಟದ ಕಥೆ ಕೂಡ ಇದರಲ್ಲಿದ್ದು, ಇಡೀ ಕರ್ನಾಟಕದ ರೈತರ ಸಮಸ್ಯೆ ಇಟ್ಟುಕೊಂಡು ಈ  ಕಥೆ ಮಾಡಿದ್ದೇನೆ. ಪುಲಕೇಶಿಯ ನಾಡಿನ ಜನ ಇಂದು ಏಕೆ ಗುಳೆ ಹೋಗುತ್ತಿದ್ದಾರೆ ಎಂಬ ಅಂಶದ ಮೇಲೆ ಕಥೆ ಸಾಗಲಿದ್ದು, ಸಂಪೂರ್ಣ ಕರ್ನಾಟಕ ನೀರಾವರಿ ಆಗಬೇಕು ಎಂಬುದು ನಮ್ಮ ಆಶಯ. 
“ಕರ್ಣಾಟಬಲಂ” ಚಾಲುಕ್ಯರ ಪುಲಕೇಶಿ ಸೈನ್ಯದ ಹೆಸರು. ಅದನ್ನೇ ನಾವು ಚಿತ್ರದ ಶೀರ್ಷಿಕೆಯಾಗಿ ಇಟ್ಟುಕೊಂಡಿದ್ದೇವೆ. ಬೇರೆ ಭಾಷೆಗಳಲ್ಲಿ ಬರುತ್ತಿರುವ ಐತಿಹಾಸಿಕ ಸಿನಿಮಾಗಳು ಕಾಲ್ಪನಿಕ ಕಥೆಯನ್ನು  ಒಳಗೊಂಡಿರುತ್ತವೆ. ನಮ್ಮದು ನೈಜ ಘಟನೆ ಹಾಗೂ ಇಂದಿನ ಸಮಸ್ಯೆಯ ಬಗ್ಗೆ ಇರುವ ಕಥೆ. 
ಇದೇ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ನಾಗಣ್ಣ ಮಾತನಾಡಿ, ‘ಈ ಗೀತೆಯನ್ನು ಮೋಹನ್ ಮಾಸ್ಟರ್ ಅದ್ಭುತವಾಗಿ ನೃತ್ಯ ಸಂಯೋಜನೆ ಮಾಡುತ್ಯಿದ್ದಾರೆ. ಧ್ಯಾನ್ ಕೂಡ ತುಂಬಾ ಶ್ರಮದಿಂದ ಅಭಿನಯ ಮಾಡುತ್ತಿದ್ದಾರೆ. ಈ ಹಾಡನ್ನು ತ್ರಿಲೋಕ್ ತ್ರಿವಿಕ್ರಮ್ ಬರೆದಿದ್ದಾರೆ. ನಮ್ಮದು ಅನುಭವಿಗಳಿರುವ ತಂಡ. ಇನ್ನೆರಡು ದಿನ ಇಲ್ಲಿದ್ದು ನಂತರ ಚನ್ನಪಟ್ಟಣ, ಬಾಗಲಕೋಟ, ಬೆಳಗಾವಿ, ಹುಬ್ಬಳ್ಳಿ ಮುಂತಾದ ಕಡೆ ಚಿತ್ರೀಕರಣ ಮಾಡಲಿದ್ದೇವೆ. ಚಿತ್ರದಲ್ಲಿ ನಾಯಕನ ಹೆಸರು ವಾತಾಪಿ. ಇಂದಿನ ಈ ಹಾಡಿನ  ಚಿತ್ರೀಕರಣದಲ್ಲಿ ಸುಮಾರು 1000ಕ್ಕೂ ಹೆಚ್ಚು ಜನ ತಂತ್ರಜ್ಞರು, ಕಲಾವಿದರು ಕೆಲಸ ಮಾಡತಾ ಇದ್ದಾರೆ. ನಮ್ಮ ಸೊಗಡಿನ ಕಥೆ ಹೇಳುವ ಪ್ರಯತ್ನ ಮಾಡ್ತಾ ಇದ್ದೇವೆ. ಕಥೆ ಇಂದಿನ ಯುವಪೀಳಿಗೆ ಮತ್ತು ಆರನೇ ಶತಮಾನದ ಕಾಲಘಟ್ಟದಲ್ಲಿ ಸಾಗುತ್ತದೆ. ಐತಿಹಾಸಿಕ ಹಾಗೂ ಸಾಮಾಜಿಕ ಕಥೆ ಒಳಗೊಂಡ ಸಿನಿಮಾ ಇದಾಗಿದೆ’ ಎಂದು ಹೇಳಿದರು.ನಾಯಕ ಧ್ಯಾನ್ ಯೋಗೀಶ್ವರ್ ಮಾತನಾಡಿ, ‘ಕಳೆದ 20 ದಿನಗಳಿಂದ ಬಾದಾಮಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿನ ಜನ ನೀಡುತ್ತಿರುವ ಪ್ರೀತಿಗೆ ತುಂಬಾ ಖುಷಿ ಆಗಿದೆ. ಚಿಕ್ಕ ವಯಸ್ಸಿನಿಂದ ನನಗೆ ನಟ ಆಗುವ ಆಸೆ. ಆದರೆ ತಂದೆಗೆ ಇಷ್ಟ ಇರಲಿಲ್ಲ. ನಾನು ಯಾವಾಗ ಎತ್ತರವಾಗಿ ಬೆಳೆದೆನೋ ಆಗ ತಂದೆಗೆ ನನ್ನ ಮೇಲೆ ಭರವಸೆ ಬಂತು. ಒಬ್ಬ ನಟನಾಗಿ ನಿಲ್ಲಬೇಕು ಎಂಬ ಆಸೆ ಇದೆ. ಕರ್ಣಾಟಬಲಂ  ಚಿತ್ರ ಜನವರಿ 15 ಸಂಕ್ರಾAತಿ ಹಬ್ಬಕ್ಕೆ ಬಿಡುಗಡೆ ಆಗಲಿದೆ’ ಎಂದರು.ವೇದಿಕೆಯಲ್ಲಿ ಚಿತ್ರದ ನಾಯಕಿ ಮಣಿಕಾ ವಿಶ್ವಕರ್ಮ, ನಾಯಕನ ತಾಯಿ ಪಾತ್ರ ಮಾಡುತ್ತಿರುವ ಲಯ, ಛಾಯಾಗ್ರಾಹಕ ಚಂದ್ರು, ನೃತ್ಯ ನಿರ್ದೇಶಕ ಮೋಹನ್ ಮಾಸ್ಟರ್, ಸಂಭಾಷಣೆ ಬರೆದಿರುವ ಎಂ.ಎಸ್. ರಮೇಶ್, ಕಲಾವಿದರಾದ ಸಂಪತ್, ಮಾನಸಿ ಸುಧೀರ್, ಬಲ ರಾಜ್‌ವಾಡಿ, ಕಾರ್ಯಕಾರಿ ನಿರ್ಮಾಪಕ ಕೆ. ಪಿ.ಶ್ರೀಕಾಂತ್ ಮುಂತಾದವರು ಸಿನಿಮಾ ಬಗ್ಗೆ ಮಾತನಾಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯದ ಯಶವಂತರಾಯಗೌಡರಾಜೀನಾಮೆ ನೀಡಿದರೆ  ತಕ್ಷಣ ಅಂಗೀಕಾರಸಂಪ್‌ನೊಳಗೆ ಬಿದ್ದಿದ್ದ ಗೋವು ರಕ್ಷಣೆಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆವೈಭವದಿಂದ ಜರುಗಿದ ಶ್ರೀ ಕೃಷ್ಣರಾಜಮುಡಿ ಉತ್ಸವ`ರತ್ನಗರ್ಭ’ದ ಫಸ್ಟ್ ಲುಕ್  ಮೋಷನ್ ಪೋಸ್ಟರ್ ಬಿಡುಗಡೆ`ಕರ್ಣಾಟಬಲಂ ಅಜೇಯಂ' ಚಿತ್ರಕ್ಕಾಗಿ ಬಾದಾಮಿ ಬೆಟ್ಟದಲ್ಲಿ ಮೇಳೈಸಿದ ಕಲಾಮೇಳಹಣದ ವ್ಯಾಮೋಹದಲ್ಲಿ ಕಳೆಗುಂದಿದ ಮಾನವೀಯತೆ: ಪೋಷಕರನ್ನು ನಿರ್ಲಕ್ಷಿಸುವವರ ವಿರುದ್ಧ ಕಾಯ್ದೆಯ ಅಸ್ತ್ರ-ನ್ಯಾಯಾಧೀಶೆ ಜಯಶ್ರೀತೈಪೆ ಓಪನ್ ಬ್ಯಾಡ್ಮಿಂಟನ್ ಗೆದ್ದು ಇತಿಹಾಸ ಬರೆದ 17ರ ತನ್ವಿ ಶರ್ಮಾಶ್ರೀಲಂಕಾ-ಭಾರತ ಟೆಸ್ಟ್ ಸರಣಿಯಿಂದ ಜಸ್ಟ್ರೀತ್ ಬುಮ್ರ ಔಟ್, ಆಕಿಬ್ ನಬಿ ಇನ್!