LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ವೈಭವದಿಂದ ಜರುಗಿದ ಶ್ರೀ ಕೃಷ್ಣರಾಜಮುಡಿ ಉತ್ಸವ


ಮೇಲುಕೋಟೆ: ಚೆಲುವನಾರಾಯಣಸ್ವಾಮಿ ವರ ಐತಿಹಾಸಿಕ ಶ್ರೀಕೃಷ್ಣರಾಜಮುಡಿ ಕಿರೀಟ ಧಾರಣ ಮಹೋತ್ಸವ ಸೋಮವಾರ ರಾತ್ರಿ ವೈಭವದಿಂದ ನೆರವೇರಿತು. ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆ ಯರ್ ವಜ್ರಖಚಿತ ಕಿರೀಟ ಸಮರ್ಪಿಸಿ ತಮ್ಮದೇ ಹೆಸರಲ್ಲಿ ಭಕ್ತಿಪೂರ್ವಕವಾಗಿ ಆರಂಭಿಸಿರುವ ಆಷಾಡ ಜಾತ್ರೆ ಕೃಷ್ಣರಾಜಮುಡಿ ಬ್ರಹ್ಮೋತ್ಸವದ  ನಾಲ್ಕನೇ ತಿರುನಾಳ್ ಅಂಗವಾಗಿ ಶ್ರೀದೇವಿಭೂದೇವಿ ಸಮೇತ ಗರುಡಾರೂಢನಾದ  ಶ್ರೀಚೆಲುವನಾರಾಯಣ ಸ್ವಾಮಿಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ತೊಡಿಸಿ ವೈಭವದಿಂದ  ತಿರುವೀದಿಗಳಲ್ಲಿ ಉತ್ಸವ ನೆರವೇರಿಸಲಾತು.
ಜಿಲ್ಲಾಖಜಾನೆಯಿಂದ ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ಸಂಜೆ 5ಗಂಟೆಯವೇಳೆಗೆ ಬಂದ ಶ್ರೀ ಕೃಷ್ಣರಾಜಮುಡಿ ತಿರುವಾಭರಣಪೆಟ್ಟಿಗೆಯನ್ನು ಪಲ್ಲಕ್ಕಿಯ ಮೂಲಕ ಮೆರವಣಿಗೆಯಲ್ಲಿ ದೇವಾಲಯಕ್ಕೆ ತರಲಾಯಿತು. ರಾತ್ರಿ 7ಗಂಟೆಗೆ ಕೃಷ್ಣರಾಜ ಒಡೆಯರ್ ಮಂಟಪದಲ್ಲಿ ಪಾರ್ಕಾವಣೆಮಾಡಿ  ವಜ್ರಖಚಿತ ಕೃಷ್ಣರಾಜಮುಡಿ ಮತ್ತು ಗಂಡುಬೇರುAಡ ಪದಕವನ್ನು  ಸ್ಥಾನೀಕರು, ಅರ್ಚಕ ಪರಿಚಾರಕರ ವಶಕ್ಕೆ ನೀಡಲಾಯಿತು 
ಗಂಡುಬೇರುಂಡ ಸ್ವರೂಪವಾದ ಅರ್ಧಚಂದ್ರಪ್ರಭಾವಳಿಯಲ್ಲಿ ಭವ್ಯ ಪುಪ್ಪಗಳಿಂದ ಅಲಂಕೃತನಾಗಿ ಶ್ರೀದೇವಿಭೂದೇವಿ ಅಮ್ಮ ನವರ ಸಮೇತಗರುಡರೂಢನಾದ ಶ್ರೀ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ಶ್ರೀಕೃಷ್ಣರಾಜ ಮುಡಿ ಕಿರೀಟಧಾರಣೆ ಮಾಡ ಲಾಯಿತು. ಇದೇ ವೇಳೆ  ಗಂಡುಬೇರುAಡ ಪದಕ ಹಾಗೂ ಇತರ ಅಭರಣಗಳನ್ನು ತೊಡಿಸಿ  ಮಂಡ್ಯಜಿಲ್ಲಾಧಿಕಾರಿ ಡಾ.ಕುಮಾರ್ ಮತ್ತು ಅಪರಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಮಹಾಮಂಗಳಾರತಿ ನೆರವೇರಿಸಿ ಶ್ರೀ ಕೃಷ್ಣರಾ ಜಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.ಭವ್ಯವಾದ ದಿವ್ಯಪ್ರಬಂಧ ಪಾರಾಯಣ ಹಾಗೂ ಯತಿರಾಜದಾಸರ್ ಗುರುಪೀಠದ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ನಿಯೋಜಿಸಿದ್ದ ವಿಶೇಷ ಮಂಗಳವಾದ್ಯದೊAದಿಗೆ ರಾಜಬೀದಿಯಲ್ಲಿ ಕೃಷ್ಣರಾಜಮುಡಿ ಉತ್ಸವ ವಿಜೃಭಣೆಯಿಂದನೆರವೇರಿತು. ನಂತರ ದೇವಾಲಯದಲ್ಲಿ ಪಡಿಯೇತ್ತ ಕಾರ್ಯಕ್ರಮಗಳು  ನಡೆಯಿತು. ಜಿಲ್ಲಾಧಿಕಾರಿ ಡಾ.ಕುಮಾರ್ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಉಪವಿಭಾಗಾಧಿಕಾರಿ ಶ್ರೀನಿವಾಸ್ ವ್ಯವಸ್ಥಾಪನಾಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ಮತ್ತು ಸದಸ್ಯರು  ದೇವಾಲಯದ ಕಾರ್ಯನಿರ್ವಾಕಅಧಿಕಾರಿ ಶೀಲಾ, ಸ್ಥಾನಾಚಾರ್ಯ ಮತ್ತು ಪಾರುಪತ್ತೇಗಾರ್ ಶ್ರೀನಿವಾಸನರಸಿಂಹನ್ ಗುರೂಜಿ ಪರಿಚಾರಕ ಪಾರುಪತ್ತೇಗಾರ್ ಎಂ.ಎನ್ ಪಾರ್ಥಸಾರಥಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು. ರಾತ್ರಿ 10ಗಂಟೆಯವರೆಗೆ ನಡೆದ ಉತ್ಸವ ಭಕ್ತರಮನಸೂರೆಗೊಂಡಿತು. ಕೃಷ್ಣರಾಜಮುಡಿ ಉತ್ಸವಕ್ಕೂ ಮುನ್ನ ಸಂಜೆ ನಾಗವಲ್ಲಿ ಮಹೋತ್ಸವದ ಅಂಗವಾಗಿ ಚೆಲುವನಾರಾಯಣಸ್ವಾಮಿಗೆ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಬೆಳ್ಳಿಯ ಪಲ್ಲಕ್ಕಿಯಲ್ಲಿ ಉತ್ಸವ ನೆರವೇರಿತು. ದೈವೀಕ ದರ್ಶನ ನೀಡಿದ ಆಭರಣಗಳು: ಮೈಸೂರು ಅರಸರಾದ ಮುಮ್ಮಡಿಕೃಷ್ಣರಾಜಓಡೆಯರ್ ತಮ್ಮ ಮನೆದೇವರಾದ ಶ್ರೀಚೆಲುವನಾರಾಯಣ ಸ್ವಾಮಿಗೆ ಭಕ್ತಿಯಿಂದ ಅರ್ಪಿಸಿರುವ  ಕೆಂಪು, ಬಿಳಿ ವಜ್ರದ ಪಚ್ಚೆಮಣಿಯ ಸಿಂಹಲಾAಛನವುಳ್ಳ ಕೃಷ್ಣರಾಜಮುಡಿ, ಮತ್ತುಗಂಡುಬೇರುAಡ ಪದಕ ದರ್ಶನ ಮಾಡಿದ ಭಕ್ತರ ಸಂಭ್ರಮೋಲ್ಲಾಸ ಮೇರೆ ಮೀರಿತ್ತು ಕೃಷ್ಣರಾಜಮುಡಿಕಿರೀಟ ಆಗಸ್ಟ್ 3 ರಿಂದ ಆಗಸ್ಟ್ 8ರವರೆಗೆ ಪ್ರತಿ ದಿನ ಸಂಜೆ ನಡೆಯವ ಪ್ರಮುಖ ಉತ್ಸವಗಳಲ್ಲಿ ಚೆಲುವರಾಯಸ್ವಾಮಿಯನ್ನು ಅಲಂಕರಿಸಿರುತ್ತದೆ.  ಮುಮ್ಮಡಿಕೃಷ್ಣರಾಜ ಒಡೆಯರ್ 18ನೇ ಶತಮಾನದಲ್ಲಿ ಆರಂಭಿಸಿದ ಈ ಬ್ರಹ್ಮೋತ್ಸವ ಅನುಚಾನವಾಗಿ ನಡೆಯುತ್ತಾ ಬಂದಿದ್ದು ಈ ವರ್ಷವೂ ಆಡಂಬರವಿಲ್ಲದೇ ಶಾಸ್ತೊçÃಕ್ತವಾಗಿ ನೆರವೇರಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯದ ಯಶವಂತರಾಯಗೌಡರಾಜೀನಾಮೆ ನೀಡಿದರೆ  ತಕ್ಷಣ ಅಂಗೀಕಾರಸಂಪ್‌ನೊಳಗೆ ಬಿದ್ದಿದ್ದ ಗೋವು ರಕ್ಷಣೆಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆವೈಭವದಿಂದ ಜರುಗಿದ ಶ್ರೀ ಕೃಷ್ಣರಾಜಮುಡಿ ಉತ್ಸವ`ರತ್ನಗರ್ಭ’ದ ಫಸ್ಟ್ ಲುಕ್  ಮೋಷನ್ ಪೋಸ್ಟರ್ ಬಿಡುಗಡೆ`ಕರ್ಣಾಟಬಲಂ ಅಜೇಯಂ' ಚಿತ್ರಕ್ಕಾಗಿ ಬಾದಾಮಿ ಬೆಟ್ಟದಲ್ಲಿ ಮೇಳೈಸಿದ ಕಲಾಮೇಳಹಣದ ವ್ಯಾಮೋಹದಲ್ಲಿ ಕಳೆಗುಂದಿದ ಮಾನವೀಯತೆ: ಪೋಷಕರನ್ನು ನಿರ್ಲಕ್ಷಿಸುವವರ ವಿರುದ್ಧ ಕಾಯ್ದೆಯ ಅಸ್ತ್ರ-ನ್ಯಾಯಾಧೀಶೆ ಜಯಶ್ರೀತೈಪೆ ಓಪನ್ ಬ್ಯಾಡ್ಮಿಂಟನ್ ಗೆದ್ದು ಇತಿಹಾಸ ಬರೆದ 17ರ ತನ್ವಿ ಶರ್ಮಾಶ್ರೀಲಂಕಾ-ಭಾರತ ಟೆಸ್ಟ್ ಸರಣಿಯಿಂದ ಜಸ್ಟ್ರೀತ್ ಬುಮ್ರ ಔಟ್, ಆಕಿಬ್ ನಬಿ ಇನ್!