ಸಂತೋಷ್ ಬಾಲರಾಜ್ ರ ಕೊನೆಯ ಸಿನಿಮಾ ರತ್ನಗರ್ಭ ಈಗ ಬಿಡುಗಡೆಗೆ ಸಿದ್ಧವಾಗುತ್ತಿದೆ. ಬಿಡುಗಡೆಯ ಪೂರ್ವಭಾವಿಯಾಗಿ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ.ಸಂತೋಷಬಾಲರಾಜ್ ನಾಯಕನಟನಾಗಿ ನಟಿಸಿರುವ ಕೊನೆ ಸಿನಿಮಾ ರತ್ನಗರ್ಭ ಚಿತ್ರತಂಡ ಸಂತೋಷ್ ಬಾಲ್ ರಾಜ್ ಅವರ ಆಕಸ್ಮಿಕ ನಿಧನದ ನಂತರ ಇದೀಗ ಸಣ್ಣಪುಟ್ಟ ಶೂಟಿಂಗ್ ಪ್ಯಾಚ್ ವರ್ಕ್ ಗಳನ್ನು ಪೂರ್ತಿ ಮಾಡಿಕೊಂಡು ಗಿಈಘಿ ಮುಖಾಂತರ ಎಲ್ಲಾ ಎಫರ್ಟ್ ಹಾಕಿ ಈಗ ಚಿತ್ರ ಚಿತ್ರವು ಕೊನೆ ಹಂತದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಬಿಡುಗಡೆಗೆ ಎಲ್ಲಾ ತಯಾರಿ ನಡೆಸಿಕೊಂಡಿದೆ.ನಟ ಸಂತೋಷರ ಮೊದಲ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರ ಸವಿ ನೆನಪಿನಲ್ಲಿ ರಾಗಿಗುಡ್ಡದ ಮೆಟ್ರೋ ಸ್ಟೇಷನ್ ಸಮೀಪದಲ್ಲಿರುವ ಮೈದಾನದಲ್ಲಿ ರತ್ನಗರ್ಭ ಚಿತ್ರದ ಮೊದಲ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.ಸಂತೋಷ್‌ಗೆ ಜೋಡಿಯಾಗಿ ರಂಜಿನಿ ರಾಘವ್ ಅಭಿನಯಿಸಿದ್ದಾರೆ. ಖ್ಯಾತ ನಟ ಸುಮನ್, ವಿನಯ ಪ್ರಸಾದ್, ಸಿಯಾಜಿತ್ ಶಿಂಧೆ, ಅವಿನಾಶ್, ಪವಿತ್ರ ಲೋಕೇಶ್, ಮುಖ್ಯಮಂತ್ರಿ ಚಂದ್ರು ಹಾಗೂ ದಿವಂಗತ ಉಮೇಶ್ ರವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.