ಕ್ರೀಡೆ: 2027ರ ಐಪಿಎಲ್‌ಗೂ (IPಐ) ಮುನ್ನ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಬಗ್ಗೆ ಚರ್ಚೆಗಳು ಜೋರಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್ ಹಾರ್ದಿಕ್ ಬಗ್ಗೆ ಮಾತುಕತೆ ನಡೆಸುತ್ತಿವೆ ಎಂದು ವರದಿಗಳಿದ್ದವು. ಇದಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್ (ಆಅ), ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (ಖಖ) ನಂತಹ ತಂಡಗಳು ಸಹ ಭಾರತೀಯ ಆಲ್‌ರೌಂಡರ್‌ನೊAದಿಗೆ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ಹೊಂದಿವೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಊಹಾಪೋಹಗಳ ನಡುವೆ, 5 ಬಾರಿಯ ಚಾಂಪಿಯನ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಮೊದಲ ಬಾರಿಗೆ ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿದೆ. ಫ್ರಾಂಚೈಸಿ ಪ್ರಸ್ತುತ ಸಮಯದಲ್ಲಿ ಯಾವುದೇ ಟ್ರೇಡಿಂಗ್ ಮಾತುಕತೆಗಳು ನಡೆಯುತ್ತಿರುವ ಬಗ್ಗೆ ನಿರಾಕರಿಸಿದೆ, ಆದರೆ 2026ರ ಋತುವಿನ ಪರಿಶೀಲನೆಯ ನಂತರ ಎಲ್ಲಾ ಆಯ್ಕೆಗಳನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. 2027ರ ಪ್ರಿ-ಆ?ಯಕ್ಷನ್ ವಿಂಡೋ ಡಿಸೆಂಬರ್ 2ನೇ ವಾರಕ್ಕೆ ಅಂತ್ಯವಾಗಲಿದೆ. ಅಲ್ಲಿವರೆಗೆ ಹಾರ್ದಿಕ್ ಪಾಂಡ್ಯ ಟ್ರೇಡಿಂಗ್ ಸಾಧ್ಯವಾಗದಿದ್ದರೆ, ಅವರು ಮಿನಿ ಹರಾಜಿಗೆ ತೆರಳಬಹುದು. ಒಂದು ವೇಳೆ ಪಾಂಡ್ಯ ಹರಾಜಿಗೆ ಎಂಟ್ರಿಕೊಟ್ಟರೆ, ಪಾಂಡ್ಯ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಬೆಲೆಗೆ ಮಾರಾಟವಾಗಬಹುದು. ಏಕೆಂದರೆ ಅವರ ಬೌಲಿಂಗ್ ಕೌಶಲ್ಯ, ಫಿನಿಶಿಂಗ್ ಬ್ಯಾಟಿಂಗ್ ಸ್ಕಿಲ್ ಯಾವುದೇ ತಂಡಕ್ಕಾದರೂ ದೊಡ್ಡ ಆಸ್ತಿಯಾಗಲಿದ್ದಾರೆ. ಹಾಗಾಗಿ ಇನ್ನೂ ಕೆಲವು ತಿಂಗಳು ಪಾಂಡ್ಯರ ಸುತ್ತಾ ಚರ್ಚೆಗಳು ಸಾಗುತ್ತಲೇ ಇರುತ್ತವೆ.