ನವೆಂಬರ್ 1ರಾಜ್ಯೋತ್ಸವ ಸಂಭ್ರಮ. ಅಂದು “ಈ ಬಂಧನ” ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಗೀತೆಗಳ ಅಮೃತೋತ್ಸವ ಪರಮ ಪದದಿಂದ ಆಯೋಜಿ ತಗೊಂಡಿದೆ. ಗಾಯಕ ರಾಮಚಂದ್ರ ಹಡಪದ ಹಾಗೂ ಸಂಗಡಿಗರು ವಿಷ್ಣುವರ್ಧನ್ ಅವರ ಚಲನಚಿತ್ರಗಳಿಂದ ಆಯ್ದ ಗೀತೆಗಳನ್ನು ಪ್ರಸ್ತುತಪಡಿಸುವರು ಕೋಣನಕುಂಟೆ ಯ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಭಾಂಗಣದಲ್ಲಿ ಸಂಜೆ 4:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ ಜತಕರ ಮುಂತಾದವರು ಉಪಸ್ಥಿತರಿರುವರು. ದಿ. ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ನಿಮಿತ್ತ ಈ ವಿಶೇಷ ಕಾರ್ಯಕ್ರಮ ಆಯೋಜಿತಗೊಂಡಿದೆ.