ಎನ್ ಎಂ ಕಾಂತರಾಜ್ ನಿರ್ಮಾಣ, ನಿರ್ದೇಶಕ ಭರತ್ ಎಸ್ ನಾವುಂದ್ ನಿರ್ದೇಶನದ ಹಾಗೂ ಸಮರ್ಜಿತ್ ನಾಯಕನಾಗಿ ನಟಿಸಿರುವ “ಗುಡ್ಡದ ಭೂತ” ಚಿತ್ರದ ಟೀಸರ್ ಬಿಡುಗಡೆಯಾಗಿದೆ.ಇದು ಕರಾವಳಿ ಭಾಗದ ಕಥೆ. ನೈಜಘಟನೆಯ ಕಥೆಯಲ್ಲ. ಇದೊಂದು ಮರ್ಡರ್ ಮಿಸ್ಟರಿ. ಕುಟುಂಬವೊAದರಲ್ಲಿ ನಡೆಯುವ ಕೊಲೆಯ ಸುತ್ತ ಹೆಣೆದಿರುವ ಕಥೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಶಿರಸಿ, ಮಂಚಿಕೆರೆ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ನಿರ್ಮಾಪಕ ಕಾಂತರಾಜ್ ಅವರು ಯಾವುದೇ ಕೊರತೆ ಬಾರದ ಹಾಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಹರಿ ಸಂಗೀತ ನಿರ್ದೇಶನ, ದೀಪಕ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಶಶಿಧರ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಮರ್ಜಿತ್ ನಾಯಕನಾದರೂ ನಿಜವಾದ ನಾಯಕ ಚಿತ್ರದ ಕಥೆಯೇ ಆಗಿರುತ್ತದೆ. ಈ ಚಿತ್ರದ ಮೂಲಕ ಸಾಕಷ್ಟು ರಂಗಭೂಮಿ ಕಲಾವಿದರನ್ನು ಪರಿಚಯಿಸಲಾಗುತ್ತಿದೆ ಎಂದು ನಿರ್ದೇಶಕ ಭರತ್ ಎಸ್ ನಾವುಂದ್ ಹೇಳಿದರು.ನಿರ್ದೇಶಕ ಭರತ್ ನನಗೆ ಕಥೆ ಹೇಳಿದಾಗ ರೋಮಾಂಚನವಾಯಿತು. ತಕ್ಷಣವೇ ಸಿನಿಮಾ ಮಾಡೋಣ ಅಂದೆ. ಮೂವತ್ತು ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸುವುದು ಅಂತ ತೀರ್ಮಾನವಾಗಿತ್ತು. ಆದರೆ ಅಂದುಕೊಂಡದಕ್ಕಿಂತ ಸ್ವಲ್ಪ ಹೆಚ್ಚಿನ ದಿನಗಳ ಚಿತ್ರೀಕರಣವಾಗಿದೆ. ಈಗ ವಿ ಎಫ್ ಎಕ್ಸ್ ನಡೆಯುತ್ತಿದೆ. ಸದ್ಯವೇ ಬಿಡುಗಡೆಯ ದಿನಾಂಕ ತಿಳಿಸುತ್ತೇವೆ ಎಂದರು ನಿರ್ಮಾಪಕ ಎನ್ ಎಂ ಕಾಂತರಾಜ್.ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಪ್ರಸಿದ್ದ ಗಾಯಕರು ಹಾಡಿದ್ದಾರೆ. ರೀರೆಕಾರ್ಡಿಂಗ್ ಕೂಡ ಬಹಳ ಚೆನ್ನಾಗಿದೆ ಎಂದು ಸಂಗೀತ ನಿರ್ದೇಶಕ ಶ್ರೀಹರಿ ತಿಳಿಸಿದರು.