LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ನಾಟಕದ ಮೂಲಕ ರಂಜನೆ ಮತ್ತು ಕಲಿಕೆ ಸಾಧ್ಯ: ಸತೀಶ್ ಜವರೇಗೌಡ

ಮೈಸೂರು : ಶಾಲಾ ಪಠ್ಯಪುಸ್ತಕದ ಸಂಕೀರ್ಣ ವಿಷಯಗಳನ್ನೂ ರಂಗರೂಪಕ್ಕೆ ಅಳವಡಿಸಿ ಕಲಿಕೆ ಉಂಟುಮಾಇದರೆ, ಅದರಿಂದ ವಿಷಯ ಮನೋಗತವಾಗುತ್ತದೆ. ಪರಿಣಾಮಕಾರಿ ಕಲಿಕೆಯು ಚೇತೋಹಾರಿ ಮತ್ತು ಪರಿಣಾಮಕಾರಿಯಾಗುತ್ತದೆ ಎಂದು ಸಾಹಿತಿ ಹಾಗೂ ಸಂಘಟಕ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.

ನಗರದ ರಾಜೇಂದ್ರನಗರದಲ್ಲರುವ ಶ್ರೀಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ 'ಬೋಧನೆಯಲ್ಲಿ ನಾಟಕ ಮತ್ತು ಕಲೆ' ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ನಾಟಕ ಅತ್ಯಂತ ಆಕರ್ಷಕವಾದ ಜೀವಂತಿಕೆಯ ಪ್ರಬಲ ಮಾಧ್ಯಮ. ವೇಷಭೂಷಣ, ಸಂಭಾಷಣೆ, ಸಂಗೀತ, ನಟನೆ ನೋಡುಗರ ಮೇಲೆ ಅಪಾರ ಪ್ರಭಾವ ಬೀರುತ್ತವೆ.

ಇಂತಹ ನಾಟಕ ಮಾಧ್ಯಮದ ಮೂಲಕ ಮಕ್ಕಳಿಗೆ ರಂಜನೆ ಮತ್ತು ಕಲಿಕೆ ಎರಡನ್ನೂ ಕೊಡಲು ಸಾಧ್ಯವಿದೆ ಎಂದರು.ನವೀನ ಮಾದರಿಯ ಕಲಿಕೆಯ ತಂತ್ರ ಮತ್ತು ಮಾಧ್ಯಮಗಳನ್ನು ಶಿಕ್ಷಕರು ಆವಿಷ್ಕಾರ ಮಾಡಬೇಕು. ಆಗ ಮಾತ್ರ ಬೋಧನೆಯ ಏಕತಾನತೆಯಿಂದ ಹೊರಬರಲು ಸಾಧ್ಯ. ನಾಟಕ, ಸಂಗೀತ, ಕಲೆ, ಸಾಹಿತ್ಯದಂತಹ ಸಹಪಠ್ಯದ ಮೂಲಕವೂ ಪಠ್ಯದ ಕಲಿಕೆಯನ್ನೂ ಸೃಜನಾತ್ಮಕವಾಗಿ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.

ಮೈಸೂರು ನಗರ ರಂಗಚಟುವಟಿಕೆಗಳ ಕ್ರಿಯಾಶೀಲ ತವರು. ಇಲ್ಲಿ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ನಡೆದು ರಂಗಾಸಕ್ತರಿಗೆ ರಂಜನೆ ನೀಡುತ್ತಿವೆ. ಮುಂದೆ ಶಿಕ್ಷಕರಾಗಲಿರುವ ಪ್ರಶಿಕ್ಷಣಾರ್ಥಿಗಳು ರಂಗಾಯಣವೂ ಸೇರಿದಂತೆ ಇತರೆಡೆ ನಡೆಯುವ ರಂಗ ಪ್ರದರ್ಶನಗಳ ವೀಕ್ಷಿಸುವ ಸದಭಿರುಚಿ ಬೆಳೆಸಿಕೊಂಡರೆ, ಮುಂದಿನ ಕಲಿಕಾ ವೃತ್ತಿ ಬದುಕಿಗೆ ಸಹಕಾರಿಯಾಗಲಿಯೆಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಅಂತೋಣಿ ಪಾಲ್ ರಾಜ್ ವಹಿಸಿದ್ದರು.ಕನ್ನಡ ಸಹಾಯಕ ಪ್ರಾಧ್ಯಾಪಕಿ ಎಸ್. ಸುಮ, ವಿಜ್ಞಾನ ಸಹಾಯಕ ಪ್ರಾಧ್ಯಾಪಕಿ ಪಲ್ಲವಿ, ಇತಿಹಾಸ ಸಹಾಯಕ ಪ್ರಾಧ್ಯಾಪಕ ಆರ್. ಉಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಹಿತಿ ಟಿ. ಸತೀಶ್ ಜವರೇಗೌಡರನ್ನು ಸನ್ಮಾನಿಸಲಾಯಿತು. ಬಳಿಕ ಪ್ರಶಿಕ್ಷಣಾರ್ಥಿಗಳಿಂದ 'ಕುರುಷೇತ್ರ' ನಾಟಕ ಪ್ರದರ್ಶನ ನಡೆಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು