LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಉತ್ತುಂಗ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಂರ್ತಜಾಲ ತಾಣ ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು ನಗರದ ವಿಲ್ಸನ್‍ಗಾರ್ಡನ್ ಕ್ಲಬ್‍ನಲ್ಲಿ ಜರುಗಿದ ಉತ್ತುಂಗ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಂರ್ತಜಾಲ ತಾಣ ಉದ್ಘಾಟನೆ ನೆರವೇರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿರವರು ಸಭೆಯನ್ನುದ್ದೇಶಿಸಿ ಬೆಂಗಳೂರು ದಕ್ಷಿಣ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿರವರಿಗೆ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಲು ತಮ್ಮೆಲ್ಲರ ಸಹಕಾರ ಅಗತ್ಯವೆಂದರು.

ಉತ್ತುಂಗ ಸೌಹಾರ್ದ ಪತ್ತಿನ ಸಹಕಾರ ಸಂಘ ಹಾಗೂ ಕರ್ನಾಟಕ ರಾಜ್ಯ ಬಲಿಜ ಸಂಘದ ಅಧ್ಯಕ್ಷರಾದ ಡಾ||ಟಿ.ವೇಣುಗೋಪಾಲ್‍ರವರು 8 ವಿಧಾನಸಭಾ ಕ್ಷೇತ್ರದ ಮತದಾರರು ಸಭೆಯಲ್ಲಿ ಉಪಸ್ಥಿತರಿದ್ದ ಸಂದರ್ಭದಲ್ಲಿ ಮಾಜಿ ಶಾಸಕಿ ಸೌಮ್ಯರೆಡ್ಡಿರವರನ್ನು ಹೆಚ್ಚಿನ ಮತಗಳಿಂದ ಲೋಕಸಭೆಗೆ ಆಯ್ಕೆ ಮಾಡಬೇಕೆಂದು ಬಲಿಜ ಮುಖಂಡರಲ್ಲಿ ವಿನಂತಿಸಿದರು.

ಸಮಾರಂಭದಲ್ಲಿ ಹಿರಿಯ ಸಮಾಜ ಸೇವಕಿ ಡಾ||ಮಮತಾದೇವರಾಜ್‍ರವರು ಮಹಿಳೆಯರು ಈ ಬಾರಿ ಕಾಂಗ್ರೆಸ್ಸಿಗೆ ಮತ ನೀಡುವುದರ ಮೂಲಕ ದೇಶದ ಅಭಿವೃದ್ಧಿಯಾಗುತ್ತದೆ ಎಂದರು. ಬಿಬಿಎಂಪಿ ಮಾಜಿ ಸದಸ್ಯ ಆರ್.ವಿ.ಯುವರಾಜ್ ಸಭೆಯಲ್ಲಿ ಮತಯಾಚಿಸಿದರು. ಕಾರ್ಯಕ್ರಮದಲ್ಲಿ ವೈಷ್ಣವಿ,ವೈಭವಿ ಚಿತ್ರಮಂದಿರದ ಮಾಲೀಕರಾದ ಎಂ.ನರಸಿಂಹುಲು ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಸ್.ಎಲ್.ವಿ ಮುನಿರಾಜು,ನಿರ್ದೇಶಕರುಗಳಾದ ಲಕ್ಷ್ಮಣ್, ನವೀನಾಬಸಪ್ಪ, ಡಿ.ಎಸ್.ಹೇಮಾವತಿ, ಮಾರತ್‍ಹಳ್ಳಿ ಡಾ||ಶ್ರೀನಿವಾಸ್‍ಬಾಬು, ಸಿಬ್ಬಂದಿ ವರ್ಗ: ಶಶಿಕಲಾ,ಧನಶೇಖರ್ ಸೇರಿದಂತೆ ಅನೇಕ ಬಲಿಜ ಮುಖಂಡರಿದ್ದರು.ಪತ್ತಿನ ಸಹಕಾರದ ಕಾರ್ಯನಿರ್ವಹಣಾಧಿಕಾರಿ ರಾಜಶೇಖರ್ ಕಾರ್ಯಕ್ರಮದ ನಿರೂಪಣೆ ಮಾಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST