LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಅಕ್ಷಯ ತೃತೀಯ ದಿನದ ಸಂಭ್ರಮದಲ್ಲಿ ಮಾತೆಯರ ದಿನಾಚರಣೆ

ಹಾಸನದ ರಂಗೋಲಿ ಹಳ್ಳದಲ್ಲಿ ದಿನಾಂಕ 8-05-2024 ರಂದು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ದಲ್ಲಿ ಅದ್ದೂರಿಯಾಗಿ ಅಕ್ಷಯ ತೃತೀಯ ದಿನದ ಸಂಭ್ರಮವನ್ನು ಹಾಗೂ ಮಾತೆಯರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ರಾಜಯೋಗಿನಿ ಬಿ. ಕೆ. ವೀಣಾ ರವರು ವಹಿಸಿಕೊಂಡಿದ್ದು . ಮಾತೆಯರಿಗೆ ಭಕ್ತಿ ಮಾರ್ಗ, ಮುಕ್ತಿ ಮಾರ್ಗ, ಹಲವು ಮಾರ್ಗಗಳ ಬಗ್ಗೆ ವಿಚಾರಗಳನ್ನು ತಿಳಿಸಿದರು. ಶ್ರೀ ದಾದಾ ಲೇಖರಾಜ್ ರವರ ಬಗ್ಗೆ ಮಾಹಿತಿಯನ್ನು ತಿಳಿಸಿ. ಪಾಪ ವಿಮೋಚನೆಯನ್ನು ಯಾವ ರೀತಿ ಧ್ಯಾನದ ಮುಖಾಂತರ, ಭಕ್ತಿಯ ಮುಖಾಂತರ ಪಡೆಯಬಹುದು ಎಂದು ತಿಳಿಸಿದರು.

ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್. ಸಾಹಿತಿ, ಶಿಕ್ಷಕಿ, ಸಾಮಾಜಿಕ ಚಿಂತಕಿ, ಸಂಸ್ಥಾಪಕ ಅಧ್ಯಕ್ಷರು " ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ". ಕಾರ್ಯಕ್ರಮದ ಉದ್ದೇಶದ ಜೊತೆಗೆ ಮಾತೆಯರು ಸರ್ವಶಕ್ತಿಯನ್ನು ಹೊಂದಿರುವವರು. ಅವರು ತಮ್ಮದೇ ಆದಂತಹ ವ್ಯಕ್ತಿತ್ವವನ್ನು ಒಳಗೊಂಡಿದ್ದು. ಮುಂದಿನ ಪೀಳಿಗೆಗೆ ಮಾರ್ಗದರ್ಶಕರು ಎಂದು ಹೇಳುತ್ತಾ ಕವನ ವಾಚನವನ್ನು ಹಾಡಿದರು.

ನಂತರ ರಾಣಿ ಚರಾ ಶ್ರೀ ರವರು ನಮ್ಮ ಪಾಪಗಳು ಕಡಿಮೆಯಾದ್ದರಿಂದ ಈ ಸ್ಥಳಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.ಶ್ರೀಮತಿ ವೀಣಾ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ನೃತ್ಯದ ಮುಖಾಂತರ ಕು. ಟೀಷ್ಮಾ ಗೌಡ ಕೆ.ಆರ್. ನಿರ್ವಹಿಸಿದ್ದು. ಬೆನಕ ಕಲಾ ಸೌರಭ ಹಾಸನದವರು ತಂಡವು ಪಂಚಾಭೂತ ಗಳ ನೃತ್ಯ ಮತ್ತು ಪಂಚ ಯುಗಗಳ ಕೋಲಾಟ ಕಾರ್ಯಕ್ರಮವನ್ನು ನೀಡಿದರು. ಕಾರ್ಯಕ್ರಮದ ನಿರ್ವಹಣೆ, ನಿರೂಪಣೆಯನ್ನು ಹೆಚ್. ಎಸ್. ಪ್ರತಿಮಾ ಹಾಸನ್ ಯಶಸ್ವಿಯಾಗಿ ಸುಂದರವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಆಯೋಜನೆಯನ್ನು ಸಮ್ಮಿಲನದ ಬಿ. ಕೆ.ಸರಳರವರು ಎಲ್ಲರಿಗೂ ಶುಭ ಕೋರುವರ ಮುಖಾಂತರ, ಸನ್ಮಾನ ಮಾಡುವುದರ ಮುಖಾಂತರ, ದೇವನ ಒಲಮೆಯಿಂದ ಕಾರ್ಯಕ್ರಮವು ಯಶಸ್ವಿಯಾಯಿತು ಎಂದು ಅಭಿನಂದನೆಯನ್ನು ತಿಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು