LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ನನ್ನ ಸೌಮ್ಯ ಸ್ವಭಾವ ನನ್ನ ದೌರ್ಬಲ್ಯ ಅಲ್ಲ

ಆಡಳಿತ, ಪ್ರತಿಪಕ್ಷಗಳಿಗೆ ಸಭಾಪತಿ ಎಚ್ಚರಿಕೆ



ಬೆಂಗಳೂರು : ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ಗದ್ದಲ ಶುರು ಮಾಡಿದವು. ಇಂತಹ ಭಂಡ ಸರ್ಕಾರವನ್ನು ನಾವು ನೋಡಲೇ ಇಲ್ಲ. ಒಬ್ಬ ವ್ಯಕ್ತಿಯ ರಾಜೀನಾಮೆ ಪಡೆಯದ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಮಾತನಾಡಿ, ಇವರಿಗೆ ಚರ್ಚೆ ಮಾಡಲು ಆಸಕ್ತಿ ಇಲ್ಲ. ಬರಗಾಲ ಇದೆ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಎಂದು ತಿರುಗೇಟು ನೀಡಿದರು.ಇನ್ನು ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ಮುಂದುವರೆದಿದ್ದು, ಪರಿಷತ್ತಿನಲ್ಲಿ ವಿಪಕ್ಷಗಳ ಸದಸ್ಯರಿಂದ ಪ್ರತಿಭಟನೆ ಮುಂದುವರೆದಿದೆ. ಈ ವೇಳೆ ನನ್ನ ಸೌಮ್ಯ ಸ್ವಭಾವ ನನ್ನ ದೌರ್ಬಲ್ಯ ಅಲ್ಲ. ಆರು ದಿನಗಳಿಂದ ಸದನ ಹಾಳಾಗುತ್ತಿದೆ. ಕ್ರಮಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಸಭಾಪತಿ ಸಲೀಂ ಅಹಮ್ಮದ್ ಪ್ರಶ್ನೋತ್ತರ ಕಲಾಪ ಆರಂಭಿಸಿದರು. ಇದೆ ವೇಳೆ ಸಚಿವರ ಗೈರು ಹಾಜರಿ ಬಗ್ಗೆಯೂ ಕೂಡ ಸಭಾಪತಿ ಸಲೀಂ ಅಹಮದ್ ಎಚ್ಚರಿಕೆ ಕೊಟ್ಟಿದ್ದು, ಸಚಿವರಿಗೆ ಕಾಯುವಂತಿಲ್ಲ ಸಚಿವರು ಬಂದು ಸದನಕ್ಕಾಗಿ ಕಾಯಬೇಕು. ನೀವು ಸರಿಯಾದ ಸಮಯಕ್ಕೆ ಬರಬೇಕು. ಟೈಮಿಗೂ ಅರ್ಧ ಗಂಟೆ ಮೊದಲೇ ಸಚಿವರು ಬಂದು ಕಾಯಬೇಕು ಸಚಿವರರಿಗೆ ಗದ್ದಲದ ನಡುವೆ ಸಭಾಪತಿ ಸಲೀಂ ಮಹಮ್ಮದ್ ಎಚ್ಚರಿಕೆ ನೀಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST