LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ನಾಳೆ ಕುಣಿಗಲ್‍ನಲ್ಲಿ ನುಡಿ ಸಂಭ್ರಮ

ನುಡಿತೋರುಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯು ರಾಜ್ಯಮಟ್ಟದ ದ್ವಿತೀಯ ವಾರ್ಷಿಕ ಸಮಾವೇಶ ಮತ್ತು ನುಡಿ ಸಂಭ್ರಮ -2024 ಅನ್ನು ಕುಣಿಗಲ್ ನಲ್ಲಿ 19/05/2024 ರಂದು ಬ್ರಾಹ್ಮಣ ಸಮುದಾಯ ಭವನದಲ್ಲಿ ಆಯೋಜಿಸಿದೆ. ಈ ಸಮಾವೇಶವವನ್ನು ಬೆಂಗಳೂರಿನ ಸಪ್ನಾ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಆರ್ ದೊಡ್ಡೇಗೌಡರವರು ಉದ್ಘಾಟಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಅನುಸೂಯ ಸಿದ್ದರಾಮ ರವರು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆಯು ಹೊರತರಲಿರುವ ನುಡಿಹೆಜ್ಜೆ ಇ-ಹೊತ್ತಿಗೆಯನ್ನು ಶ್ರೀ ತ ನಾ ಶಿವಕುಮಾರ್ ರವರು ಬಿಡುಗಡೆ ಮಾಡಲಿದ್ದಾರೆ. ಈ ಸಮಾವೇಶದಲ್ಲಿ ಶ್ರೀಮತಿ ಕೆಕೆ ಮಾನಸಾ ರವರ ಕಥಾಸಂಕಲನ `ಚಿತ್ತದ ಸುತ್ತ' ಮತ್ತು ಶ್ರೀಮತಿ ಸಿ ಬಿ ಶೈಲಾ ಜಯಕುಮಾರ್ ರವರ `ವೃತ್ತಿ ಬದುಕಿನ ಹೋರಾಟ' ಕೃತಿಗಳು ಲೋಕಾರ್ಪಣೆಗೊಳ್ಳಲಿದೆ.

ಈ ಸಂದರ್ಭದಲ್ಲಿ ಸಾಹಿತಿಗಳಾದ ಮತ್ತು ಮಾತಿನಮನೆ ಸಂಸ್ಥಾಪಕರಾದ ಶ್ರೀ ರಾ ಸು ವೆಂಕಟೇಶ, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಶ್ರೀ ಎಂ ವೆಂಕಟೇಶಶೇಷಾದ್ರಿ ಮತ್ತುಸಾಹಿತಿ ಮತ್ತು ಆರೋಗ್ಯಾಂಕಣಕಾರರು ಆದ ಡಾ ಟಿ ಶಿವಕುಮಾರ್ ರವರಿಗೆ `ನುಡಿಭೂಷಣ' ಪ್ರಶಸ್ತಿಯನ್ನು ನೀಡಿಗೌರವಿಸಲಾಗುವುದು. ಖ್ಯಾತ ಸಾಹಿತಿಗಳಾದ ಶ್ರೀಮತಿ ಮಧು ವಸ್ತ್ರದ್ ಮತ್ತು ಸುಮಾ ಆರ್ ಸೂರ್ಯರವರನ್ನೂ ಸನ್ಮಾನಿಸಿ, ಗೌರವಿಸಲಾಗುವುದು.

ಈ ಸಮಾರಂಭದಲ್ಲಿ ರಾಜ್ಯಾದ್ಯಂತ ಸುಮಾರು 150 ಸಾಹಿತಿಗಳು ಭಾಗವಹಿಸಲಿದ್ದು, ಪುಸ್ತಕ ಬಿಡುಗಡೆ , ಕವಿಗೋಷ್ಠಿ , ವಚನ/ದಾಸ ಸಾಹಿತ್ಯ ಹಾಗು ಭಾವಗೀತೆಗಳ ವಿಶೇಷ ಗಾಯನ ಗೋಷ್ಠಿ ಯನ್ನೂ ಏರ್ಪಡಿಸಲಾಗಿದೆ ಎಂದು ಸಮಾವೇಶದ ಆಯೋಜಕರಾದ ಶ್ರೀ ಶ್ರೀಕಾಂತ್ ಪತ್ರೇಮರ ,ಕಿರಿಣ್ ಹಿರಿಸಾವೆ ಮತ್ತು ಚಿನ್ನುಪ್ರಿಯರವರು ತಿಳಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು