LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಚಿತ್ರದುರ್ಗದಲ್ಲಿ ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅದ್ದೂರಿಯಾಗಿ ಆಚರಣೆ

ಚಿತ್ರದುರ್ಗ: ಶಿಕ್ಷಣದಿಂದ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯವಿದೆ. ಶಿಕ್ಷಣವನ್ನು ಪಡೆದರೆ ಮಾತ್ರ ಜೀವನದಲ್ಲಿ ಮೇಲಕ್ಕೆ ಏರಲು ಸಾಧ್ಯವಿದೆ,ಎಂದು ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ರಾಜ್ಯಾಧ್ಯಕ್ಷರಾದ ಶೇಖರಗೌಡ ಮಾಲಿ ಪಾಟೀಲ್ ತಿಳಿಸಿದರು.

ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದ ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಜಯಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾ ರಂಭವನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ನಮ್ಮ ಸಮಾಜದ ಸಂಘಟನೆಗಾಗಿ ಪ್ರವಾಸವನ್ನು ಮಾ ಡುವುದರ ಮೂಲಕಸಂಘಟಿಸಲಾಗುತ್ತಿದೆ.ಇದಕ್ಕೆ ನಮ್ಮ ಸಮಾಜದ ಭಾಂಧವರು ಸಹಾಯ ಮತ್ತು ಸಹ ಕಾರವನ್ನು ನೀಡಬೇಕಿದೆ.

ಈಗಾಗಲೇ 18 ಜಿಲ್ಲೆಗಳಲ್ಲಿ ನಮ್ಮ ಸಮಾಜದ ಸಂಘಟನೆ ಇದೆ,ಅಲ್ಲಿ ನಮ್ಮ ಸಮಾ ಜ ಬೆಳೆಯುತ್ತಿದೆ. ಚಿತ್ರದುರ್ಗದಲ್ಲಿ ಯೂ ಸಹಾ ನಮ್ಮ ಸಮಾಜ ಉತ್ತಮವಾದ ಸಂಘಟನೆಯಾಗುತ್ತಿದೆ. ನಮ್ಮ ಸಮಾಜದೊಂದಿಗೆ ಇತರೆ ಸಮಾಜದವರನ್ನು ಸಹಾ ಜೊತೆಯಲ್ಲಿ ಕರೆದ್ಯೂಯಲಾಗುತ್ತಿದೆ.ನಮ್ಮ ಸಮಾಜದಲ್ಲಿನ ಬಡವರಿಗೆ ಸಹಾಯವನ್ನು ಮಾಡುವ ಮನೋ ಭಾವವನ್ನು ಬೆಳಸಿಕೊಳ್ಳುವಂತೆ ಕರೆ ನೀಡಿದರು.ಹೇಮರೆಡ್ಡಿ ಮಲ್ಲಮ್ಮ ಮಹಾ ಸ್ವಾಧಿ ಯಾಗಿ,ಸಮಾಜವನ್ನು ಮುನ್ನಡೆಸಿದ್ದಾರೆ. ಶ್ರೀಶೈಲಾ ಮಲ್ಲಿಕಾರ್ಜನನಲ್ಲಿ ನಮ್ಮ ಸಮಾಜಕ್ಕೆ ವರವನ್ನು ಪಡೆ ಯುವುದರ ಮೂಲಕ ದಾರಿ ದೀಪವಾಗಿದ್ದಾರೆ.

ತನಗೆ ಕೇಡನ್ನು ಬಯಸುವವರಿಗೂ ಸಹಾ ಒಳ್ಳೆಯದಾಗಲಿ ಎಂದು ಭಗವಂತನ ಲ್ಲಿ ಕೇಳಿದ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಎಂದು ಪಾಟೀಲ್ ತಿಳಿಸಿದರು.
ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲ ಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಗೌರವಾಧ್ಯಕ್ಷರಾದ ನಾಗೀರೆಡ್ಡಿ ಮಾತನಾಡಿ.ಹಿಂದಿನ ದಿನಗಳಲ್ಲಿ ನಮ್ಮ ಸಮಾಜ ಸಂಘಟಿ ತರಾಗದೆ, ನಾವು ಇದುವರೆವಿಗೂ ಬೇರೆಯವರ ಆಶ್ರಯದಲ್ಲಿ ಇದ್ದೆವು.

ಆದರೆ ಈಗ ನಾವು ಸ್ವತಂತ್ರವಾಗಿ ನಮ್ಮದೇ ಸಮಾಜದ ಬಂಧುಗ ಳು ಸಂಘಟಿತರಾಗುತ್ತಿದ್ದಾರೆ ಎಂದರು. ಮಲ್ಲಮ್ಮ 600 ವರ್ಷಗಳ ಹಿಂದೆ ಯೇ ನಮ್ಮ ಸಮಾಜವನ್ನು ಸಂಘಟಿ ಸುವುದರ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡಿದ ಮಲ್ಲಕಾರ್ಜನ ಪರಮ ಭಕ್ತೆಯಾಗಿ ಅತನನ್ನು ಸಾಕ್ಷಾ ತ್ಕಾರ ಮಾಡಿ ಕೊಂಡು ನಮ್ಮ ಸಮಾಜವನ್ನು ಮುನ್ನಡೆ ಸಿದ್ದಾರೆ.

ನಮ್ಮಲ್ಲಿ ಶೈವ ಹಾಗೂ ವೈಷ್ಣವ ಪಂಥವನ್ನು ನಾವು ಅನುಸರಿಸುತ್ತೇವೆ. ತಿರುಪತಿ ತಿಮ್ಮಪ್ಪ ನಮ್ಮ ಸಮಾಜ ದ ಮನೆ ದೇವರಾಗಿದ್ದಾರೆ.ಜೊತೆಗೆ ಶ್ರೀಶೈಲಾ ಮಲ್ಲಿಕಾ ರ್ಜನನ್ನು ಸಹಾ ಆರಾಧನೆಯನ್ನ ಮಾಡುತ್ತೇವೆ,ನಮ್ಮ ಮಕ್ಕಳಿಗೆ ಸಮಾಜದ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಅಧ್ಯಕ್ಷರಾದ ಚಿದಾನಂದಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಾಲಾ ತನಿಖಾಧಿಕಾರಿಗಳಾ ದ ಶಿವಪ್ರಸಾದ್ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವ ರ ಬಗ್ಗೆ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಉತ್ತೀ ರ್ಣರಾದ ಸಮಾಜದ ಮಕ್ಕಳನ್ನು ಸನ್ಮಾನಿಸಲಾಯಿತು.ಶ್ರೀಮತಿ ಗೀತಾ,ಜಯಶೀಲ,ರಶ್ಮಿ ಅವರು ಕಾರ್ಯಕ್ರಮ ದಲ್ಲಿ ಪ್ರಾರ್ಥನೆ ಮಾಡಿದರು.ಮಲ್ಲಿಕಾರ್ಜನಯ್ಯ ಸ್ವಾಗ ತಿಸಿದರು.ಶಿವಾನಂದಪ್ಪ ಪ್ರಸ್ತಾವಿಕವಾಗಿ ಮಾತನಾಡಿದ ರು. ವಿಶ್ವನಾಥ್ ವಂದಿಸಿದರು.ನಾಗರಾ ಜ್ ಸಂಗಮ್ ಕಾರ್ಯಕ್ರಮವನ್ನು ನಿರೂಪಿಸಿದರು.

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು