ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪದಡಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು, ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾರೆ.
ಸದ್ಯ ಪ್ರಜ್ವಲ್ ರೇವಣ್ಣ, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಕ್ವಾರೆಂಟೈನ್ ಸೆಲ್ ನಲ್ಲಿದ್ದು, ಅವರಿಗೆ ವಿಚಾರಣಾಧೀನ ಕೈದಿ ನಂಬರ್-5664 ನೀಡಲಾಗಿದೆ.
ಸೋಮವಾರ ರಾತ್ರಿ ಊಟವನ್ನು ಸಹ ಜೈಲಾಧಿಕಾರಿಗಳು ನೀಡಿದ್ದು,
ರಾತ್ರಿ ಜೈಲಿನ ಮೆನುವಿನಂತೆ ಮುದ್ದೆ, ಅನ್ನ, ಸಾಂಬರು, ಪಲ್ಯ ನೀಡಲಾಗಿದೆ. ಆದರೆ, ಪ್ರಜ್ವಲ್ ಜೈಲಿನ ಕ್ವಾರೆಂಟೈನ್ ಬ್ಯಾರಕ್ ನಲ್ಲಿ ಮೌನಕ್ಕೆ ಶರಣಾಗಿದ್ದಾರೆಂದು ತಿಳಿದುಬಂದಿದೆ.