ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ನ್ಯೂಜಿಲೆಂಡ್ ನ ಮಾಜಿ ಆಟಗಾರ ಸ್ಟೀಫನ್ ಫ್ಲೆಮಿಂಗ್ ಕೆಲವು ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಫ್ಲೆಮಿಂಗ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇದೀಗ ಹೊಸ ಕೋಚ್ ನ ನೇಮಕವಾಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ಕೋಚ್ ನೇಮಕವಾಗಿಲ್ಲ. ಬದಲಿಗೆ ಎಸ್ ಎ20 ಲೀಗ್ನಲ್ಲಿ ಭಾಗವಹಿಸುತ್ತಿರುವ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ನೂತನ ಕೋಚ್ ನೇಮಕವಾಗಿದೆವಾಸ್ತವವಾಗಿ ಐಪಿಎಲ್ನಲ್ಲಿ ಫ್ರಾಂಚೈಸಿಯನ್ನು ಹೊಂದಿರುವಂತೆ ಚೆನ್ನೈ ಒಡೆತನದ ಬೇರೆ ಬೇರೆ ತಂಡಗಳು ವಿವಿಧ ಟಿ20 ಲೀಗ್ ಗಳಲ್ಲಿ ಆಡುತ್ತಿವೆ. ಆ ಎಲ್ಲಾ ತಂಡಗಳಿಗೂ ಸ್ಟೀಫನ್ ಫ್ಲೆಮಿಂಗ್ ಕೋಚಿಂಗ್ ಮಾಡುತ್ತಿದ್ದರು. ಆದರೆ ಅವರ ರಾಜೀನಾಮೆಯ ಬಳಿಕ ಎಲ್ಲಾ ತಂಡಗಳಿಗೆ ಹೊಸ ಕೋಚ್ ಗಳ ನೇಮಕವಾಗುತ್ತಿದೆ. ಅದರಂತೆ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಆಲ್ಬಿ ಮೊರ್ಕೆಲ್ ಅವರನ್ನು ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆಜುಲೈ 30 ರಂದು ಫ್ರಾಂಚೈಸಿ ಅಧಿಕೃತವಾಗಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, SA20 ಯ ಐದನೇ ಸೀಸನ್ನಲ್ಲಿ ಮಾರ್ಕೆಲ್ ಮೊದಲ ಬಾರಿಗೆ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ ಎಂದಿದೆ. ಆದಾಗ್ಯೂ, ತಂಡ ಮತ್ತು ಸೂಪರ್ ಕಿಂಗ್ಸ್ ಕುಟುಂಬದೊAದಿಗಿನ ಅವರ ಸಂಬAಧ ಹೊಸದಲ್ಲ. ಅವರು ಲೀಗ್ನ ಮೊದಲ ಸೀಸನ್ನಿಂದ ಜೋಬರ್ಗ್ ಸೂಪರ್ ಕಿಂಗ್ಸ್ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾರೆ ಮತ್ತು ತಂಡದ ಕಾರ್ಯತಂತ್ರ ಮತ್ತು ಆಟಗಾರರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ
ಆಲ್ಬಿ ಮಾರ್ಕೆಲ್ ಒಬ್ಬ ಆಟಗಾರನಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು ಮತ್ತು ತಂಡದ ಅನೇಕ ಸ್ಮರಣೀಯ ವಿಜಯಗಳಿಗೆ ಪ್ರಮುಖ ಕೊಡುಗೆ ನೀಡಿದ್ದರು. ಇದೀಗ ಮುಖ್ಯ ಕೋಚ್ ಆಗಿ ತಂಡಕ್ಕೆ ತರಬೇತಿ ನೀಡುವ ಜವಾಬ್ದಾರಿ ಮಾರ್ಕೆಲ್ ಹೆಗಲೇರಿದೆಆಲ್ಬಿ ಮಾರ್ಕೆಲ್ 91 ಐಪಿಎಲ್ ಪಂದ್ಯಗಳಲ್ಲಿ 24 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 974 ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ ಮಿಂಚಿರುವ ಅವರು 85 ವಿಕೆಟ್ಗಳನ್ನು ಸಹ ಪಡೆದಿದ್ದಾರೆ. ಇದಲ್ಲದೆ ಆಲ್ಬಿ ಮಾರ್ಕೆಲ್ ದಕ್ಷಿಣ ಆಫ್ರಿಕಾ ಪರ 58 ಏಕದಿನ, 50 ಟಿ20 ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ.
ಆಲ್ಬಿ ಮಾರ್ಕೆಲ್ SA20 ಲೀಗ್ನ ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕ



