ನವದೆಹಲಿ; NEET ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆಯಾಚಿಸಬೇಕು ಹಾಗೂ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸಂಪುಟದಿAದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಆಗ್ರಹಿಸಿದ್ದಾರೆ.NEET ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬAಧಿಸಿದAತೆ ನಡೆಯುತ್ತಿರುವ ಪ್ರತಿಭಟನೆಯ ನಡುವೆ, ತಮ್ಮೊಂದಿಗೆ ಇದ್ದ ಮೂವರು ವಿದ್ಯಾರ್ಥಿ ಪ್ರತಿಭಟನಾಕಾರರೊಂದಿಗೆ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಅವರ ಮೂರು ಬೇಡಿಕೆಗಳನ್ನು ಪುನರುಚ್ಚರಿಸಿದರು.ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವು ಮೆಟ್ರೋ ನಿಲ್ದಾಣಗಳು, ರಸ್ತೆಗಳು, ಅಂಗಡಿಗಳು, ಇಂಟರ್ನೆಟ್ ಸೇವೆಗಳು ಮತ್ತು ಆಹಾರ ಪೂರೈಕೆಯನ್ನೂ ಸ್ಥಗಿತಗೊಳಿಸಿದರೂ, ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಭ್ರಷ್ಟ, ಅಸಮರ್ಥ ಮತ್ತು ವಿಷಯಕ್ಕೆ ಸೂಕ್ತವಲ್ಲದ ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕು. ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಪ್ರಧಾನ್ ಅವರನ್ನು ಶಿಕ್ಷಣ ಖಾತೆಯಿಂದ ತೆಗೆದುಹಾಕಿ ಬೇರೊಂದು ಸಚಿವಾಲಯಕ್ಕೆ ವರ್ಗಾಯಿಸುವುದೇ ಇದಕ್ಕೆ ಪರಿಹಾರ ಎಂಬ ಮಾತುಕತೆ ನಡೆಯುತ್ತಿದೆ ಮತ್ತು ನಮಗೆ ಅಂತಹ ಮಾಹಿತಿ ಸಿಗುತ್ತಿದೆ. ಇದು ಯಾರಿಗೂ ಸ್ವೀಕಾರಾರ್ಹವಲ್ಲ… ಅವರನ್ನು ವಜಾಗೊಳಿಸಲೇಬೇಕು. ಅಷ್ಟೇ,” ಎಂದು ಅವರು ಹೇಳಿದರು.
ರಾಹುಲ್ಗಾಂಧಿಯವರೊಂದಿಗೆ `ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಕೂಡ ಇದ್ದರು. ಇವರು ಜುಲೈ 20 ರಂದು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದರು.
ಪ್ರಧಾನಿ ಕ್ಷಮೆಯಾಚನೆಗೆ ಒತ್ತಾಯ ಸಚಿವ ಸಂಪುಟದಿಂದ ಧರ್ಮೇಂದ್ರ ಪ್ರಧಾನ್ ವಜಾಗೆ ರಾಹುಲ್ ಆಗ್ರಹ



