ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ಪಾಲಿಸಿ ರೆಪೋ ದರವನ್ನು ಯಾವುದೇ ಬದಲಾವಣೆಯಿಲ್ಲದೆ ಶೇಕಡಾ 5.25 ರಷ್ಟು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸತತ ನಾಲ್ಕನೇ ಬಾರಿಗೆ ರೆಪೋ ದರವನ್ನು ಸ್ಥಿರವಾಗಿಡಲಾಗಿದೆ. ಅಲ್ಲದೆ, ಬ್ಯಾಂಕ್ ತನ್ನ `ತಟಸ್ಥ ನಿಲುವು’ ಅನ್ನು ಮುಂದುವರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಜಾಗತಿಕ ಮಟ್ಟದಲ್ಲಿ ಎದುರಾಗುತ್ತಿರುವ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಸುಭದ್ರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಕಳೆದ ಕೆಲವು ತಿಂಗಳುಗಳಿAದ ಜಾಗತಿಕ ಆರ್ಥಿಕತೆಯು ತೀವ್ರ ಅನಿಶ್ಚಿತತೆ, ಪ್ರಮುಖ ವ್ಯಾಪಾರ ಮಾರ್ಗಗಳು ಮತ್ತು ಪೂರೈಕೆ ಸರಪಳಿಗಳ ಅಡ್ಡಿ, ಮಾರುಕಟ್ಟೆಯ ಏರಿಳಿತ ಹಾಗೂ ಉದ್ಯಮ ವಲಯದ ಜಾಗರೂಕ ನಡೆಗಳಿಂದ ಪ್ರಭಾವಿತವಾಗಿದೆ. ಆದರೆ, ಹಿಂದಿನ ಜಾಗತಿಕ ಬಿಕ್ಕಟ್ಟುಗಳಿಗೆ ಹೋಲಿಸಿದರೆ, ಈ ಬಾರಿಯ ಜಾಗತಿಕ ಏರಿಳಿತದ ನಡುವೆಯೂ ಭಾರತದ ಆರ್ಥಿಕತೆಯು ಅತ್ಯಂತ ಬಲವಾದ ಮತ್ತು ಉತ್ತಮವಾದ ಮೂಲಭೂತ ಅಂಶಗಳೊAದಿಗೆ ಮಾರುಕಟ್ಟೆ ಪ್ರವೇಶಿಸಿದೆ ಎಂಬುದನ್ನು ನಾನು ಒತ್ತಿಹೇಳಲು ಬಯಸುತ್ತೇನೆ,” ಎಂದು ಅವರು ತಿಳಿಸಿದರು.
ಜಾಗತಿಕ ಮಟ್ಟದ ಈ ಆಘಾತಗಳನ್ನು ಎದುರಿಸಲು ಮತ್ತು ಕನಿಷ್ಠ ಪ್ರಮಾಣದ ತೊಂದರೆಗಳೊAದಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ಆರ್ಥಿಕತೆ ಸಮರ್ಥವಾಗಿದೆ ಎಂದು ಗವರ್ನರ್ ಭರವಸೆ ನೀಡಿದ್ದಾರೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ಸದ್ಯಕ್ಕೆ ಬ್ಯಾಂಕ್ ಸಾಲಗಳ ಇಎಂಐ ದರಗಳಲ್ಲಿ ಯಾವುದೇ ಏರಿಕೆಯಾಗುವುದಿಲ್ಲ.
ರೆಪೋ ದರ ಯಥಾಸ್ಥಿತಿ ಮುಂದುವರಿಕೆ



