ಪೋಲಾ ಪ್ರವೀಣ್ ಕುಮಾರ್ ನಿರ್ಮಾಣ ಗುರುಮೂರ್ತಿ ವಿ ನಿರ್ದೇಶನದ “ಶಿಖಂಡಿ” ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.
ನಾಯಕನಾಗಿ ಯುವರಾಜ್ ಗೌಡ ಎಂಬ ನೂತನ ಪ್ರತಿಭೆ ನಾಯಕನಾಗಿ ನಟಿಸಿದ್ದಾರೆ. ಖ್ಯಾತಿ ಈ ಚಿತ್ರದ ನಾಯಕಿ. ನಿಖಿಲ್, ನಿಖಿತಸ್ವಾಮಿ, ದೀಪಕ್ ಶೆಟ್ಟಿ, ನೀತು ವನಜಾಕ್ಷಿ, ರಾಘವೇಂದ್ರ (ರಾಗು), ಚಾಂದಿನಿ, ವೇದ, ಬಲ ರಾಜ್ವಾಡಿ, ನಯನ, ವಿಜಯ್ ಚೆಂಡೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮಂಜು ಕವಿ ಸಂಗೀತ ನಿರ್ದೇಶನವಿರುವ “ಶಿಖಂಡಿ” ಚಿತ್ರಕ್ಕೆ ಪ್ರದ್ಯೋತನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸ್ವಾಮಿ ಮೈಸೂರು ಛಾಯಾಗ್ರಹಣ ಹಾಗೂ ಚಕ್ರಂ ಸಾಯಿ ಸಂಕಲನ ಈ ಚಿತ್ರಕ್ಕಿದೆ.
`ಶಿಖಂಡಿ’ ಈ ವಾರ ತೆರೆಗೆ



