ದೆಹಲಿ: ಹಿಂದಿನಿಂದ ಲೋಕಸಭೆಯ 3 ದಿನಗಳ ವಿಶೇಷ ಅಧಿವೇಶನ ಆರಂಭಗೊಂಡಿದೆ. ಇಂದು ಬೆಳಿಗ್ಗೆ ನಿಗಧಿತ ಸಮಯಕ್ಕೆ ಕಲಾಪ ಆರಂಭಗೊಂಡಿದೆ. ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತಗಾಯಕಿ ಆಶಾಭೋಸ್ಲೆ ಅವರಿಗೆ ಸಂತಾಪ ವ್ಯಕ್ತಪಡಿಸಲಾಯಿತು. ನಂತರ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಕ್ಷೇತ್ರ ಮರು ವಿಂಗಡಣೆಬಿಲ್ ಮಂಡನೆ ಮಾಡಿದರು.



