ಟೆಹ್ರಾನ್/ವಾಷಿಂಗ್ಟನ್: ಇರಾನ್ ಜೊತೆಗಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಎಲ್ಲ ಬಂದರುಗಳಿಗೆ ಸೋಮವಾರದಿಂದ ಅಮೆರಿಕ ದಿಗ್ಬಂಧನ ವಿಧಿಸಿದೆ. ಇದು ಜಾರಿಯಾಗುತ್ತಿದ್ದಂತೆಯೇ, ಇರಾನ್ನ ಯಾವುದೇ ಹಡಗು ಹಾರ್ಮುಜ್ ಜಲಸಂಧಿ ದಾಟದಂತೆ ಎಚ್ಚರಿಕೆ ನೀಡಿದ್ದಾರೆ.
ನಾವು ವಿಧಿಸಿರುವ ದಿಗ್ಬಂಧನದ ಮುರಿಯುವ ಯಾವುದೇ ಪ್ರಯತ್ನವನ್ನು ಇರಾನ್ ಮಾಡಬಾರದು, ಒಂದು ವೇಳೆ ಇರಾನ್ ಹಾರ್ಮುಜ್ಗೆ ಬಂದ್ರೆ, ಪ್ರದೇಶ ಪ್ರವೇಶಿಸಲು ಇರಾನ್ನ ಯುದ್ಧನೌಕೆಗಳು ಯತ್ನಿಸಿದರೆ ಕತೆ ಮುಗಿಸಿಬಿಡುತ್ತೇವೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಇರಾನ್ ಕೂಡ ತಿರುಗೇಟು ನೀಡಿದೆ. ನಮ್ಮ ಬಂದರುಗಳಿಗೆ ದಿಗ್ಬಂಧನ ವಿಧಿಸುವ ಅಮೆರಿಕದ ಕ್ರಮವನ್ನ ಕಡಲ್ಗಳ್ಳತನ ಎಂದು ಭಾವಿಸಲಾಗುವುದು ಮತ್ತು ಇದಕ್ಕೆ ಪ್ರತಿಯಾಗಿ ಕೊಲ್ಲಿ ದೇಶಗಳ ಯಾವ ಬಂದರುಗಳೂ ಸುರಕ್ಷಿತವಾಗಿ ಇರಲು ಬಿಡುವುದಿಲ್ಲ ಎಂದು ಇರಾನ್ ಪ್ರತಿದಾಳಿ ಎಚ್ಚರಿಕೆ ನೀಡಿದೆ.
ಯಾವುದೇ ಹಡಗು ಹಾರ್ಮುಜ್ ಜಲಸಂಧಿ ದಾಟದಂತೆ ಟ್ರಂಪ್ ಎಚ್ಚರಿಕೆ



