ನವದೆಹಲಿ: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ವಾರ್ಷಿಕ ಸಬ್ಸಿಡಿ ಸಿಲಿಂಡರ್ಗಳ ಸಂಖ್ಯೆಯನ್ನು 9 ರಿಂದ 4 ಕ್ಕೆ ಕಡಿತಗೊಳಿಸಿದೆ.ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಪಿಜಿ ಕೊರತೆಯಿಂದಾಗಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
2016 ರಲ್ಲಿ ಯೋಜನೆ ಆರಂಭವಾದಾಗ ವರ್ಷಕ್ಕೆ 12 ಸಿಲಿಂಡರ್ ನೀಡಲಾಗುತ್ತಿತ್ತು. ಕಳೆದ ವರ್ಷ ಇದನ್ನು 9 ಕ್ಕೆ ಇಳಿಸಲಾಗಿತ್ತು. ಈಗ ಅದನ್ನು ಮತ್ತೆ 4 ಕ್ಕೆ ಕಡಿಮೆ ಮಾಡಲಾಗಿದೆ. 14.2 ಕೆಜಿ ಸಿಲಿಂಡರ್ಗೆ ಸಿಗುವ 300 ರೂ. ಸಬ್ಸಿಡಿ ಮುಂದುವರಿಯಲಿದೆ. ಈ ಹಣ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.
ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 942 ರೂ.ಗೆ ಏರಿಕೆಯಾಗಿದೆ. ಹೀಗಾಗಿ 300 ರೂ. ಸಬ್ಸಿಡಿ ಕಡಿತದ ನಂತರ ಉಜ್ವಲ ಗ್ರಾಹಕರು ಪ್ರತಿ ಸಿಲಿಂಡರ್ಗೆ 642 ರೂ. ಪಾವತಿಸಬೇಕಾಗುತ್ತದೆ.
ಉಜ್ವಲ ಯೋಜನೆ: ವಾರ್ಷಿಕ ಸಿಲಿಂಡರ್ ಸಂಖ್ಯೆ 9 ರಿಂದ 4ಕ್ಕೆ ಇಳಿಕೆ



