ಕಾಂಗ್ರೆಸ್ ಪಕ್ಷಕ್ಕೆ ಕಳೆದ 50 ವರ್ಷಗಳಿಂದ ಕಾಶಪ್ಪನವರ ಮನೆತನವು ಶ್ರಮಿಸಿದೆ, ಲಿಂಗೈಕ್ಯ ಎಸ್. ಆರ್. ಕಾಶಪ್ಪನವರ್ ಮಾಜಿ ಸಚಿವರಾಗಿ ಅವರ ಪತ್ನಿ ಗೌರಮ್ಮ ಕಾಶಪ್ಪನವರ್ ಶಾಸಕರಾಗಿ ನಂತರ ಸಧ್ಯ ಅವರ ಪುತ್ರ ಡಾಕ್ಟರ್ ವಿಜಯಾನಂದ ಎಸ್ ಕಾಶಪ್ಪನವರ ಅವರು ಎರಡನೇ ಬಾರಿ ಶಾಸಕರಾಗಿ ಹಾಗೂ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರನ್ನು ಪ್ರಸ್ತುತ ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ಸಚಿವ ಸಂಪುಟಕ್ಕೆ ಸಚಿವರನ್ನಾಗಿಸಲು ಹಕ್ಕೋತ್ತಾಯ ಮಾಡಲು ಪಕ್ಷದ ವರಿಷ್ಠರಾದ ಸನ್ಮಾನ್ಯ ಶ್ರೀ. ರಾಹುಲ್ ಗಾಂಧಿ, ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರು ನಿಯೋಜಿತ ಮುಖ್ಯಮಂತ್ರಿಗಳು ಹಾಗೂ ಹಂಗಾಮಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ. ಸಿದ್ದರಾಮಯ್ಯ ಸಾಹೇಬರಲ್ಲಿ ಹುನಗುಂದ ಮತಕ್ಷೇತ್ರದ ಹಾಗೂ ಬಾಗಲಕೋಟೆ ಜಿಲ್ಲೆಯ ಜನರ ಪರವಾಗಿ ಈ ಮೂಲಕ ವಿನಂತಿಸುತ್ತೇವೆ.
ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ನ ರಾಜ್ಯ ಅಧ್ಯಕ್ಷರಾಗಿ ಯುವ ಕಾಂಗ್ರೇಸ್ನ ಉಪಾಧ್ಯಕ್ಷರಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿದ ಕ್ರಿಯಾಶೀಲ ಸಂಘಟನಾತ್ಮಕ ವ್ಯಕ್ತಿ ಇವರು, ಬಹು ಸಂಖ್ಯಾತ ಲಿಂಗಾಯತ ಸಮುದಾಯದ ನಾಯಕರಾಗಿ ಕರ್ನಾಟಕದಲ್ಲಿ ಆಕರ್ಷಿಕ ವ್ಯಕ್ತಿತ್ವ ಹೊಂದಿರುವ ಇವರ ಸಂಘಟನಾತ್ಮಕ ಶಕ್ತಿಯನ್ನು ಗುರುತಿಸಿ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾನ್ಯ ಸಿದ್ದರಾಮಯ್ಯ ಸಾಹೇಬರು ನೇಮಿಸಿದ್ದರು. ನಿಗಮದ ಅಧ್ಯಕ್ಷರಾಗಿ ಕಾಯಕ ಕಿರಣ, ಸಾರಥಿ, ಜೀವಜಲ, ಬಸವ ಬೆಳಗು, ವಿಭೂತಿ ನಿರ್ಮಾಣ ಘಟಕ, ಸಂಚಾರಿ ಕ್ಯಾಂಟೀನ್ ಅಂತಹ ಯೋಜನೆಗಳನ್ನು ನಾಡಿನ ಜನರಿಗೆ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯಾದ ಪರಿಕಲ್ಪನೆಯನ್ನು ಅಳವಡಿಸಿಕೊಂಡಿರುವ ಕಾಶಪ್ಪನವರ್ ಅವರು, ಹುನಗುಂದ ಮತಕ್ಷೇತ್ರದಲ್ಲಿ ರಾಜಕೀಯ ಪ್ರಾತಿನಿಧ್ಯ ದೊರೆಯದ, ಸರ್ವ ಸಮುದಾಯಗಳಿಗೆ ಹಾಗೂ ಮಹಿಳೆಯರಿಗೆ ಸರ್ಕಾರಿ ವಿವಿಧ ಇಲಾಖೆಗಳಿಗೆ ಸರ್ಕಾರಿ ನಾಮನಿರ್ದೇಶನ ಮಾಡಿ ಸಾಮಾಜಿಕ ನ್ಯಾಯ ಒದಗಿಸಿದ ಅಪರೂಪದ ಶಾಸಕರು.
ಶೈಕ್ಷಣಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ಮೊರಾರ್ಜಿ ವಸತಿ ಶಾಲೆ, ಅಲ್ಪಸಂಖ್ಯಾತರ ವಸತಿ ಶಾಲೆ, ಡಾಕ್ಟರ್ ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ, ಕಸ್ತೂರಿಬಾ ಶಾಲೆ ಹಾಗೂ ಹಿಂದುಳಿದ ಎಸ್.ಸಿ ಎಸ್.ಟಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ಸ್ಥಾಪಿಸಿ ಮೂಲಭೂತ ಸೌಕರ್ಯವನ್ನು ಒದಗಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ನೂರು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಬೋರ್ಡಗಳನ್ನು ಒದಗಿಸಿದ ಶಿಕ್ಷಣ ಪ್ರೇಮಿ.
ಆರೋಗ್ಯ ಕ್ಷೇತ್ರದಲ್ಲಿ ಹುನಗುಂದ್ ಇಳಕಲ್ ಅವಳಿ ನಗರದಲ್ಲಿ ನೂರು ಹಾಸಿಗೆ ಸಾರ್ವಜನಿಕರ ಆಸ್ಪತ್ರೆ, ಇಳಕಲ್ ನಲ್ಲಿ 30 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಹುನುಗುಂದದಲ್ಲಿ 50 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪಿಸಿ ಜನಸಾಮಾನ್ಯರ ಆರೋಗ್ಯ ಕಾಳಜಿಯುಳ್ಳ ಶಾಸಕರಾಗಿದ್ದಾರೆ.
ಹುನುಗುಂದ್ ಇಳಕಲ್ ಅವಳಿ ತಾಲ್ಲೂಕಿನಲ್ಲಿ ಮರೋಳ್ ಏತ ನೀರಾವರಿ, ನಂದವಡಗಿ ಏತ ನೀರಾವರಿ, ಹನಿ ನೀರಾವರಿ ಮೂಲಕ ರೈತರ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಹುನಗುಂದ್ ನಗರದಲ್ಲಿ ಸೂಸಜ್ಜಿತ ತಾಲೂಕ ಕ್ರೀಡಾಂಗಣ ನಿರ್ಮಿಸಿದ್ದಾರೆ ಇಳಕಲ್ ನಗರದಲ್ಲಿ ಒಳಾಂಗಣ ಕ್ರೀಡಾಂಗಣ ಹಾಗೂ ಅವಳಿ ತಾಲೂಕಿನಲ್ಲಿ ಈಜುಕೊಳಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಹುನುಗುಂದ ಇಳಕಲ್ ನಗರಗಳಲ್ಲಿ 24*7 ಕುಡಿಯುವ ನೀರಿನ ಯೋಜನೆ, ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾದ ಕುಡಿಯುವ ನೀರಿನ ಯೋಜನೆ, ಜಾರಿಗೆ ತಂದಿದ್ದಾರೆ.
ಇಳಕಲ್ ನಗರದಲ್ಲಿ 2339 ವಸತಿ ನಿವೇಶನಗಳನ್ನು ನಿವೇಶನ ರಹಿತರಿಗೆ ವಸತಿ ಹಕ್ಕುಪತ್ರ ನೀಡಿದ್ದಾರೆ. ಹುನಗುಂದ ನಗರದಲ್ಲಿ ವಸತಿ ನಿರಾಶ್ರಿತರಿಗೆ 947 ವಸತಿ ಹಕ್ಕುಪತ್ರ ನೀಡಿದ್ದಾರೆ.
ಸಾಮಾಜಿಕ ನ್ಯಾಯದ ಹರಿಕಾರರು, ಹಂಗಾಮಿ ಮುಖ್ಯಮಂತಿ ಸಿದ್ದರಾಮಯ್ಯ ಸಾಹೇಬರು ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಣೆ ಮಾಡಿ ನಂತರ ಕೂಡಲಸಂಗಮದಲ್ಲಿ ಬಸವಾದಿ ಶರಣರ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಸಂಘಟನಾತ್ಮಕ ವ್ಯಕ್ತಿತ್ವದ ಕಾಶಪ್ಪನವರ ಅವರದು.
ನಾಡು ಕಂಡ ಬಸವ ತತ್ವ ಪ್ರಚಾರಕರು ಮಾಂತಜೋಳಿಗೆ ಹರಿಕಾರರು ಆದ ಲಿಂಗೈಕ್ಯ ಡಾಕ್ಟರ್ ಮಹಾಂತಪ್ಪಗಳವರ ಜನ್ಮದಿನವನ್ನು ಸರ್ಕಾರದಿಂದ ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಘೋಷಣೆ ಮಾಡಲು ಕಾಶಪ್ಪನವರ ರವರ ಪಾತ್ರ ಪ್ರಮುಖವಾಗಿದೆ.
ಪ್ರತಿ ವರ್ಷವೂ ಕನ್ನಡ ನಾಡಿನ ಕಲೆ ಸಂಸ್ಕೃತಿ ಉಳಿಸುವಲ್ಲಿ ಮತಕ್ಷೇತ್ರದ ಐಹೊಳೆಯಲ್ಲಿ ಚಾಲುಕ್ಯ ಉತ್ಸವವನ್ನು ಆಚರಿಸಿದ್ದು ಅವರ ಕನ್ನಡ ಸಂಸ್ಕೃತಿಯ ಮೇಲಿನ ಅಪಾರವಾದ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಅವರ ಅಭಿವೃದ್ಧಿ ಸಂಘಟನಾತ್ಮಕ ಕೌಶಲ್ಯವನ್ನು ಗುರುತಿಸಿ, ಪಕ್ಷದ ಬಲವರ್ಧನೆಗಾಗಿ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ, ಶ್ರಮಿಸುವ ಹುನುಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ವಿಜಯಾನಂದ ಶಿವಶಂಕರಪ್ಪ ಕಾಶಪ್ಪನವರ್ ಅವರನ್ನು ಸಂಪುಟದಲ್ಲಿ ಸಚಿವರನ್ನಾಗಿ ಮಾಡಬೇಕೆಂದು
ಮುಖAಡರಾದ ಅಬ್ದಲ್ ರಜಾಕ್ ತಟಗಾರ್, ಮಹಾಂತೇಶ್ ನರಗುಂದ, ಮಲ್ಲಣ್ಣ ಎಲೆಗಾರ, ಶಾಂತಣ್ಣ ಸುರಪುರ, ರವಿ ಹುಚ್ಚನೂಡಿ, ಮುತ್ತಣ್ಣ ಕಲಗುಡಿ, ಅಮರೇಶ್ ನಾಗೂರ್, ರಾಘವೇಂದ್ರ ಧಾರವಾಡ, ವಿಠ್ಠಲ್ ಜಕ್ಕ, ಮೌನೇಶ್ ಬಂಡಿವಡ್ಡರ್ ಪತ್ರಿಕಾಗೋಷ್ಠಿ ಮೂಲಕ ಆಗಹಿಸಿದ್ದಾರೆ.
ವಿಜಯಾನಂದ ಕಾಶಪ್ಪನವರ್ಗೆ ಸಚಿವ ಸ್ಥಾನ ನೀಡಲು ಆಗ್ರಹ



