ಬೆಂಗಳೂರು: ಸಿಸಿಬಿ ಪೊಲೀಸರು ಮಾದಕ ವಸ್ತುದಳದ ಅಧಿಕಾರಿಗಳ ಸಹಾಯದೊಂದಿಗೆ ಜನಾರ್ದನ್ ಬಿಪಿನ್ ಸಿಂಗ್ ಮತ್ತು ಜೋನಾಥ ಎಂಬುವರು ಸೇರಿದಂತೆ 9 ಮಂದಿಯನ್ನು ಬಂಧಿಸಿರುತ್ತಾರೆ.
ಮಹದೇವಪುರ, ರಾಮ್ ಮೂರ್ತಿ ನಗರ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಲ್ಡನ್ ಮತ್ತು ಮನೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಹುಕ್ಕಾ ಸೇದಲು ಬಳಸುತ್ತಿದ್ದ ತಂಬಾಕು/ ನಿಕೋಟಿನ್ ಉತ್ಪನ್ನಗಳನ್ನು ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಇವುಗಳ ಮೌಲ್ಯ ಒಂದುವರೆ ಕೋಟಿ ರೂಪಾಯಿಗಳೆಂದು ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತರು ತಿಳಿಸಿದರು. ಹಾಗೂ ಒಂದುವರೆ ಲಕ್ಷ ನಗದು ಮತ್ತು ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿರುತ್ತಾರೆ