ಬೆಂಗಳೂರು: ಭಾರತದ ಅತಿ ದೊಡ್ಡ ಮತ್ತು ಏಕೈಕ ಆಸ್ಕರ್-ಮಾನ್ಯತೆ ಪಡೆದ ಕಿರುಚಿತ್ರೋತ್ಸವವಾದ ‘ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ’ , ತನ್ನ 16ನೇ ಆವೃತ್ತಿಯನ್ನು 2026 ರ ಆಗಸ್ಟ್ 14 ರಿಂದ 16 ರವರೆಗೆ (ಆನ್ಲೈನ್ನಲ್ಲಿ: ಆಗಸ್ಟ್ 06 ರಿಂದ 16) ಬೆಂಗಳೂರಿನ ಆರಕ್ಕೂ ಹೆಚ್ಚು ಸ್ಥಳಗಳಲ್ಲಿ ಆಯೋಜಿಸಲಿದೆ. ಈ ಚಿತ್ರೋತ್ಸವವು 5,000 ಕ್ಕೂ ಹೆಚ್ಚು ಪ್ರತಿನಿಧಿಗಳು, 1,000 ಕ್ಕೂ ಹೆಚ್ಚು ಚಲನಚಿತ್ರ ನಿರ್ಮಾಪಕರು ಹಾಗೂ ಕಲಾವಿದರನ್ನು ಒಟ್ಟುಗೂಡಿಸಲಿದ್ದು, 100 ಕ್ಕೂ ಹೆಚ್ಚು ದೇಶಗಳಿಂದ 11 ವಿವಿಧ ಕಿರುಚಿತ್ರ ವಿಭಾಗಗಳಲ್ಲಿ ದಾಖಲೆಯ 3,340 ಪ್ರವೇಶಗಳನ್ನು ಪಡೆದುಕೊಂಡಿದೆ.ತನ್ನ ಸ್ಪರ್ಧಾತ್ಮಕ ವಿಭಾಗವನ್ನು ಹತ್ತು ಸಿನಿಮಾ ರಂಗಗಳಿಗೆ ವಿಸ್ತರಿಸಿರುವ 2026, ಆಸ್ಕರ್ ಅರ್ಹತೆ ಪಡೆಯುವ ಪ್ರಮುಖ ಮೂರು ವಿಭಾಗಗಳನ್ನು (ಅಂತರರಾಷ್ಟ್ರೀಯ, ಭಾರತೀಯ ಮತ್ತು ಅನಿಮೇಷನ್) ಒಳಗೊಂಡಿದೆ. ಇದರೊಂದಿಗೆ ಈ ವರ್ಷ ಎರಡು ಹೊಸ ವಿಭಾಗಗಳನ್ನು ಪರಿಚಯಿಸುತ್ತಿದೆ:(ಮಷೀನ್ ಮೇಡ್ ಮೂವೀಸ್): ಸಂಪೂರ್ಣವಾಗಿ ಅಥವಾ ಭಾಗಶಃ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ಚಿತ್ರಗಳಿಗಾಗಿ ಒಂದು ಅದ್ಭುತ ಸ್ಪರ್ಧಾತ್ಮಕ ವೇದಿಕೆ.ಡ್ಯಾನ್ಸಿಂಗ್ ಲೆನ್ಸ್ : ನೃತ್ಯ ಸಂಯೋಜನೆ ಮತ್ತು ಛಾಯಾಗ್ರಹಣಗಳು ಒಂದಕ್ಕೊಂದು ಬೆರೆತುಹೋಗುವ ವಿಶಿಷ್ಟ ಸಿನಿಮಾ ಕಲೆಯಾಗಿರುವ ‘ಸ್ಕ್ರೀನ್ಡ್ಯಾನ್ಸ್’ ಅನ್ನು ಇದರಲ್ಲಿ ಸಂಭ್ರಮಿಸಲಾಗುತ್ತದೆ. ಸಂಸ್ಥಾಪಕರು ಮತ್ತು ಕಲಾತ್ಮಕ ನಿರ್ದೇಶಕರಾದ ಆನಂದ್ ವರದರಾಜ್ ಅವರು, “ಹದಿನಾರು ವರ್ಷಗಳ ಹಿಂದೆ, ಯುವ ಪ್ರತಿಭೆಗಳಿಗೆ ತಮ್ಮ ಆರಂಭಿಕ ಕೆಲಸಗಳನ್ನು ಪ್ರದರ್ಶಿಸಲು ಮತ್ತು ಗಂಭೀರವಾದ ವಿಮರ್ಶೆ-ಪ್ರತಿಕ್ರಿಯೆಗಳನ್ನು ಪಡೆಯಲು ಒಂದು ನೈಜ ವೇದಿಕೆಯ ಅಗತ್ಯವಿದೆ ಎಂದು ಭಾವಿಸಿದ ಚಲನಚಿತ್ರ ನಿರ್ಮಾಪಕರು ಮತ್ತು ಕ್ಯುರೇಟರ್ಗಳ ಸಣ್ಣ ಗುಂಪಿನಿಂದ ಆರಂಭವಾಯಿತು. ನಾವು ಕೇವಲ 30 ಚಿತ್ರಗಳೊಂದಿಗೆ ಪ್ರಾರಂಭಿಸಿದ್ದೆವು. ಇಂದು ನಮಗೆ 3,000 ಕ್ಕೂ ಹೆಚ್ಚು ಪ್ರವೇಶಗಳು ಬರುತ್ತಿವೆ ಮತ್ತು ಇಲ್ಲಿ ಪಾಲ್ಗೊಂಡ ಹಳೆಯ ವಿದ್ಯಾರ್ಥಿಗಳು ಆಸ್ಕರ್ ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದಾರೆ” ಎಂದರು.



