ಕೆಂಗೇರಿ:” ಬಿಜೆಪಿ ಪಕ್ಷದ ಮುಖಂಡರೆನಿಸಿಕೊAಡವರು ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರ ಬಗ್ಗೆಮಾತನಾಡುವ ಯಾವ ನೈತಿಕತೆ ಇಲ್ಲ. ಬೆನ್ನಿಗೆ ಚೂರಿಯಕ್ಕಿದವರು ಅವರ ಬಗ್ಗೆಯಾವ ಮುಖ ಇಟ್ಟುಕೊಂಡುಮಾತನಾಡುತ್ತಾರೆ. ಕಾರ್ಯಕ್ರಮಗಳಲ್ಲಿ ಮಹಿಳೆಯರದ್ದೇ ಸಿಂಹಪಾಲು. ಮಹಿಳೆಯರು ಶಾಸಕರನ್ನು ಒಬ್ಬ ಒಳ್ಳೆಯ ವ್ಯಕ್ತಿ ಎಂದು ಭಾವಿಸಿಲ್ಲ, ಬದಲಾಗಿ ಶಕ್ತಿ ಎಂದು ತಿಳಿದಿದ್ದಾರೆ” ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮೈಲಾಸಂದ್ರ ನಾಗರಾಜ್ ಮತ್ತು ರೇವಣ್ಣಸಿದ್ದಯ್ಯ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹೇರೋಹಳ್ಳಿಯ ಖಾಸಗಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಇತ್ತೀಚೆಗೆ ಬಿಜೆಪಿ ಮುಖಂಡರು ಶಾಸಕ ಎಸ್.ಟಿ. ಸೋಮಶೇಖರ್ ವಿರುದ್ಧ “ಮಹಿಳಾ ಅಗೌರವ”, ಆರೋಪ ಮಾಡಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿಸಲು ಸವಾಲು ಹಾಕಿದ್ದ ಹಿನ್ನೆಲೆ ಮಾತನಾಡಿದ ಅವರು, “ಶಾಸಕರ ಕಾರ್ಯಕ್ರಮದಲ್ಲಿ ಮಹಿಳೆಯರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ ಭೇಟಿ ನೀಡಿದರೆ ಯಾರಾದರೂ ಮಹಿಳೆಯರು ಅವರೊಟ್ಟಿಗೆ ಬರುತ್ತಾರ ಎಂದು ತೋರಿಸಿ ಎಂದು ಬಿಜೆಪಿಗೆ ಸವಾಲು ಹಾಕಿದರು.
ತಾವರೆಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೇವಣಸಿದ್ದಯ್ಯ ಮಾತನಾಡಿ, “ಮತದಾರರಿಗೆ ರಾಜೀನಾಮೆ ಕೇಳುವ ಹಕ್ಕಿದೆ. ಬೆನ್ನಿಗೆ ಚೂರಿ ಹಾಕಿದ ಬಿಜೆಪಿಗರಿಗೆ ನೈತಿಕ ಹಕ್ಕಿಲ್ಲ. ಶಾಸಕರು ಪ್ರತಿ ಬಾರಿ ಗೆಲ್ಲಲು ಕಾರಣಕರ್ತರು ಕಾಂಗ್ರೆಸ್ಸಿಗರು” ಎಂದು ಹೇಳಿದರು.ಅಲ್ಲದೇ ಹೇರೋಹಳ್ಳಿಯಲ್ಲಿ ರೂ.7 ಕೋಟಿ ವೆಚ್ಚದ ಡಯಾಲಿಸಿಸ್ ಕೇಂದ್ರ, ಉಲ್ಲಾಳು ವಾರ್ಡ್ನಲ್ಲಿ ರೂ.250 ಬೆಡ್ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, 5 ಎಕರೆ ಪ್ರದೇಶದಲ್ಲಿ ಪ್ರಥಮ ದರ್ಜೆ ಕಾಲೇಜು*, ರೂ.307 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಕಾಮಗಾರಿ, ರೂ.175 ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ, ರೂ.165 ಕೋಟಿ ರೂಪಾಯಿ ಕೆರೆಗಳ ಅಭಿವೃದ್ಧಿ*, ಇಷ್ಟೆಲ್ಲ ಅಭಿವೃದ್ಧಿ ಮಾಡಿರುವ ಶಾಸಕರ ಬಗ್ಗೆ ‘ಏನೂ ಮಾಡಿಲ್ಲ’ ಎನ್ನುವ ಬಿಜೆಪಿಗರ ಟೀಕೆ ಹಾಸ್ಯಾಸ್ಪದ” ಎಂದು ಕಿಡಿಕಾರಿದರು.ಕೆಂಗೇರಿ ಬ್ಲಾಕ್ ಅಧ್ಯಕ್ಷ *ಮೈಲಸಂದ್ರ ನಾಗರಾಜ್ ಮಾತನಾಡಿ, “ಬಿಜೆಪಿ ಮುಖಂಡರು ಕೇಂದ್ರ ಸಚಿವೆಯ ಭಾವಚಿತ್ರವನ್ನು ಶಾಸಕರು ಬೆಡ್ ರೂಮ್ನಲ್ಲಿ ಇಡಬೇಕು ಎನ್ನುವ ಭಾವನೆ ಅಸಭ್ಯತನದ ಪರಮಾವಧಿ.ಇಂತಹ ಸಂಸ್ಕೃತಿ, ತುಚ್ಛ ಮಾತು ಬಿಜೆಪಿಗರಿಂದ ಮಾತ್ರ ಸಾಧ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಮುಖಂಡ ಚೇತನ್ ಗೌಡ ಮಾತನಾಡಿ, “ನಮ್ಮ ಶಾಸಕರನ್ನು ನಾವುಗಳು ಧರ್ಮಸ್ಥಳಕ್ಕೆ ಕರೆತರುತ್ತೇವೆ. ನಿಮ್ಮ ಕೇಂದ್ರ ಸಚಿವೆಯನ್ನು ಧರ್ಮಸ್ಥಳಕ್ಕೆ ಕರೆತಂದು ಆಣೆ ಪ್ರಮಾಣ ಮಾಡಿಸಿ.”ಮತದಾರರಿಗೆ ದ್ರೋಹ” ಇಲ್ಲಸಲ್ಲದ ಆರೋಪ ಮಾಡುವ ಬಿಜೆಪಿಯವರಿಗೆ ಆ ದೇವರು ತಕ್ಕ ದಂಡನೆ ನೀಡಿಲಿದ್ದಾನೆ” ಎಂದು ಹರಿಹಾಯ್ದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಮಹಿಳಾ ಅಧ್ಯಕ್ಷರಾದ ಚಿಕ್ಕರಾಜು, ಲಕ್ಷ್ಮೀ ಪ್ರಭು ರಾಜ್, ವಿನೋದ ನರಸಿಂಹಮೂರ್ತಿ, ವಾರ್ಡ್ ಅಧ್ಯಕ್ಷರಾದ ಟಿ.ಪ್ರಭಾಕರ್, ಅರುಣ್ ಕುಮಾರ್, ಕೆ.ವೈ.ಕೃಷ್ಣ, ಪುರುಷೋತ್ತಮ್, ರಮೇಶ್ ಗೌಡ, ಲೋಕೇಶ್ ಗೌಡ, ಮುಖಂಡರಾದ ಶ್ರೀಧರ್, ಮಹೇಂದ್ರ ಕಿರಣ್, ದೇವರಾಜ್, ಗೋಪಾಲಕೃಷ್ಣ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
`ಬೆನ್ನಿಗೆ ಚೂರಿ ಹಾಕಿದ ಬಿಜೆಪಿಗರಿಗೆ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’



