ಬೆಂಗಳೂರು: ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್) 2026ರ ಐದನೇ ಆವೃತ್ತಿಗೆ ಇಂದು ಇಲ್ಲಿನ ಪ್ರಸಿದ್ಧ ಎಸ್ಎಸ್ಸಿ ಮೈದಾನದಲ್ಲಿ ಅತ್ಯಂತ ಅದ್ಧೂರಿ ಚಾಲನೆ ದೊರೆಯಿತು. ಟೂರ್ನಿಯ ಹಕ್ಕುಗಳನ್ನು ಹೊಂದಿರುವ ಐಪಿಜಿ ಗ್ರೂಪ್, ಉದ್ಘಾಟನಾ ಸಮಾರಂಭವನ್ನು ಮರೆಯಲಾಗದ ನೆನಪಾಗಿಸಲು ಬರೋಬ್ಬರಿ 500 ಡ್ರೋನ್ಗಳ ಬೃಹತ್ ಪ್ರದರ್ಶನವನ್ನು ಆಯೋಜಿಸಿದೆ. ಇದು ಶ್ರೀಲಂಕಾದ ಕ್ರಿಕೆಟ್ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆಯೋಜಿಸಲಾದ ಮೊದಲ ನೇರ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಒಲಿಂಪಿಕ್ಸ್ ಹಾಗೂ ಫಿಫಾ ವಿಶ್ವಕಪ್ ನಂತಹ ಜಾಗತಿಕ ಕ್ರೀಡಾಕೂಟಗಳ ಮಾದರಿಯಲ್ಲಿ ಈ ಬಾರಿ ಎಲ್ಪಿಎಲ್ ಉದ್ಘಾಟನಾ ಸಮಾರಂಭ ಮೂಡಿಬರಲಿದ್ದು, ಶ್ರೀಲಂಕಾದ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಲೋಕವನ್ನೇ ಪರಿಚಯಿಸಲಿದೆ.ಉದ್ಘಾಟನಾ ಸಮಾರಂಭದ ಯೋಜನೆಗಳ ಕುರಿತು ಮಾತನಾಡಿದ ಐಪಿಜಿ ಸಂಸ್ಥಾಪಕ ಮತ್ತು ಅಧ್ಯಕ್ಷ ಅನಿಲ್ ಮೋಹನ್ ಅವರು, “ಲಂಕಾ ಪ್ರೀಮಿಯರ್ ಲೀಗ್ ಕೇವಲ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿಲ್ಲ. ಇದು ಅಭಿಮಾನಿಗಳು ಸದಾ ನೆನಪಿನಲ್ಲಿಟ್ಟುಕೊಳ್ಳುವಂತಹ ಅನುಭವವನ್ನು ಸೃಷ್ಟಿಸುವ ಪ್ರಯತ್ನವಾಗಿದೆ. ಈ ವರ್ಷ, ಟೂರ್ನಿಯ ಉತ್ಸಾಹ, ಮಹತ್ವಾಕಾಂಕ್ಷೆ ಮತ್ತು ಬೆಳವಣಿಗೆಯನ್ನು ಬಿಂಬಿಸುವAತಹ ಅದ್ಭುತ ಪ್ರದರ್ಶನದೊಂದಿಗೆ ನಾವು ಎಲ್ಪಿಎಲ್ 2026 ಅನ್ನು ಆರಂಭಿಸಲು ಬಯಸುತ್ತೇವೆ. ಈ 500-ಡ್ರೋನ್ ಗಳ ಪ್ರದರ್ಶನವು ಶ್ರೀಲಂಕಾಕ್ಕೆ ಜಾಗತಿಕ ಕ್ರೀಡಾಕೂಟದ ಅನುಭವವನ್ನು ತರಲಿದ್ದು, ಅಭಿಮಾನಿಗಳು ಉದ್ಘಾಟನಾ ರಾತ್ರಿಯ ಭಾಗವಾಗಲು ಬಲವಾದ ಕಾರಣವನ್ನು ನೀಡಲಿದೆ” ಎಂದಿದ್ದಾರೆ.ಲಂಕಾ ಪ್ರೀಮಿಯರ್ ಲೀಗ್ ನಿರ್ದೇಶಕ ಸಮಂತಾ ದೊಡ್ಡನ್ವೆಲ ಮಾತನಾಡಿ, “ಎಸ್ಎಸ್ಸಿ ಕೊಲಂಬೊದಲ್ಲಿ ನಡೆಯಲಿರುವ ಎಲ್ಪಿಎಲ್ನ ಮೊದಲ ಪಂದ್ಯವು ಈ ಟೂರ್ನಿಯ ಪಾಲಿಗೆ ಅತ್ಯಂತ ಮಹತ್ವದ ಕ್ಷಣವಾಗಿದೆ. ಅದರಲ್ಲೂ ಯೋಜಿತ 500-ಡ್ರೋನ್ಗಳ ಪ್ರದರ್ಶನವು ಉದ್ಘಾಟನಾ ರಾತ್ರಿಯನ್ನು ಅಭಿಮಾನಿಗಳಿಗೆ ಮತ್ತಷ್ಟು ಸ್ಮರಣೀಯವಾಗಿಸಲಿದೆ” ಎಂದರು.



