ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರಪಟ್ಟಿ ಪರಿಷ್ಕರಣೆಯಲ್ಲಿ ನಡೆಯುತ್ತಿರುವ ಲೋಪ ಹಾಗೂ ಅಕ್ರಮಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ಜೆಡಿಎಸ್ ಬಿಜೆಪಿ ತೀವ್ರಗೊಳಿಸಲು ನಿರ್ಧರಿಸಿವೆ. ಎನ್ಡಿಎ ಪಾಲುದಾರ ಪಕ್ಷಗಳಾದರೂ ಇದುವರೆಗೂ ರಾಜ್ಯ ಸರ್ಕಾರ ಕಾಂಗ್ರೆಸ್ ವಿರುದ್ಧ ನಡೆದ ಹೋರಾಟವನ್ನು ಪ್ರತ್ಯೇಕವಾಗಿಯೇ ನಡೆಸಿಕೊಂಡು ಬಂದಿದೆ. ಆದರೆ ಇದುವರೆಗೂ ನಡೆದ ರೀತಿಯಲ್ಲಿ ಇದೀಗ ನಡೆಸುತ್ತಿರುವ ಎಸ್ಐಆರ್ ವಿರುದ್ಧದ ಪ್ರತಿಭಟನೆಯನ್ನು ಎರಡು ಪಕ್ಷಗಳು ಜಂಟಿಯಾಗಿ ನಡೆಸಿದರೆ ಅದಕ್ಕೊಂದು ರೂಪ ಪಡೆಯುತ್ತದೆ ಎಂಬುದು ಜೆಡಿಎಸ್ನ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ರಾಷ್ಟ್ರೀಯ ಬಿಜೆಪಿ ಮುಖಂಡ ಕೇಂದ್ರ ಗೃಹಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿ ಜಂಟಿ ಹೋರಾಟ ನಡೆಸುವ ಬಗ್ಗೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ
ಈಗಾಗಲೇ ಮಾತುಕತೆಯ ಸಂಬAಧ ಅಮಿತ್ ಶಾ ಅವರು ರಾಜ್ಯ ಬಿಜೆಪಿ ನಾಯಕರಿಗೆ ತಮ್ಮ ಸಂದೇಶವನ್ನು ರವಾನಿಸಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ರಾಜ್ಯದ್ಲಲಿ ಮತದಾರರ ಪರಿಷ್ಕರಣೆ ಸಂಬAಧ ನಡೆದ ಲೋಪಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗದವರು ಕೋಲಾರ ಜಿಲಲೆಯಲ್ಲಿ ನಾಲ್ಕೈದು ಮಂದಿ ವಿರುದ್ಧ ಕ್ರಮ ಜರುಗಿಸಿ ಅವರ ವಿರುದ್ಧ ಅಮಾನತು ಆದೇಶ ಹೊರಡಿಸಿದ್ದು, ಅದಕ್ಕೆ ರಾಜ್ಯ ಸರ್ಕಾರ ತಡೆ ನೀಡಿ ಅಧಿಕಾರಿಗಳನ್ನು ಕೆಲಸದಲ್ಲೇ ಮುಂದುವರಿಸಿದರು ಎಂದು ತಿಳಿದುಬಂದಿದೆ.
ತಾವು ನಡೆಸಿದ ಹೋರಾಟದ ಫಲವಾಗಿ ಕ್ರಮ ಕೈಗೊಂಡರೂ ಸರ್ಕಾರ ಅದನ್ನು ಲೆಕ್ಕಕ್ಕೆ ಇಡದೆ ತಮ್ಮ ಮನಸೋ ಇಚ್ಛೆ ವರ್ತಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾರ್ಕಿಕ ಅಂತ್ಯ ಕಾಣಿಸಿಕೊಳ್ಳಲು ಎರಡು ಪಕ್ಷಗಳು ನಿರ್ಧಾರ ಮಾಡಿವೆ ಎಂದು ತಿಳಿದುಬಂದಿದೆ.
ಒಟ್ಟಾರೆ ಎಸ್ಐಆರ್ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಒಂದು ದಡ ಮುಟ್ಟಿಸಲು ಎರಡು ಪಕ್ಷಗಳು ಜಂಟಿ ಹೋರಾಟ ನಡೆಸಲು ಸೋಮವಾರದಿಂದ ಮುಂದಾಗಲಿವೆ ಎಂದು ಮೂಲಗಳು ತಿಳಿಸಿವೆ.
ಮೈತ್ರಿ ಹೋರಾಟ ಎಸ್ಐಆರ್ ಲೋಪಗಳ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ



