ಮಾಗಡಿ: ಇತ್ತೀಚೆಗೆ ನಾನು ದೆಹಲಿಗೆ ಹೋಗಿದ್ದು ಸುಮ್ಮನೆ ಹೋಗಿದ್ದೇನೆಯೇ ಹೊರತು ಮಂತ್ರಿಗಿರಿಗೆ ಲಾಭಿ ನಡೆಸಲು ಅಲ್ಲ ಎಂದು ಕೆ.ಆರ್.ಡಿ.ಸಿ.ಎಲ್ ಅದ್ಯಕ್ಷರು ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಹೇಳಿದರು.ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಡೊಡ್ಡಸೋಮನಹಳ್ಳಿ ಬಳಿಯ ಚಿಕ್ಕಬಸವಯ್ಯನ ಪಾಳ್ಯದಲ್ಲಿ ಅರಳಿಕಟ್ಟೆ ದೊಡ್ಡಿಯಲ್ಲಿ ಸುಮಾರು ಮೂರು ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅರಳೀಕಟ್ಟೆಯನ್ನು ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದ ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು ನಮ್ಮ ಹೈಕಮಾಂಡ್ ಇರುವುದು ದೆಹಲಿಯಲ್ಲಿ ಆದಕಾರಣವಾಗಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಲು ಹೋಗಿದ್ದೇನೆಯೇ ಹೊರತು ಮಂತ್ರಿಗಿರಿಯ ಲಾಭಿ ನಡೆಸುವುದಕ್ಕಲ್ಲ ಎಂದ ಅವರು ಎರಡನೇ ಪಟ್ಟಿ ಮಂತ್ರಿ ಸ್ಥಾನವು ಇನ್ನು ಕೆಲವೇ ದಿನಗಳಲ್ಲಿ ಹೊರಬೀಳುವ ಸಾಧ್ಯತೆಯಿದೆ.ನಾನು ಐದು ಭಾರಿ ಶಾಸಕನಾಗಿದ್ದು ನಾನು ಕೂಡಾ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ.ನನ್ನನ್ನು ಮಂತ್ರಿ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.ರಾಜಧಾನಿ ಬೆಂಗಳೂರಿನಲ್ಲಿ ಕೋರ್ಟ್ ಆದೇಶದ ಮೇರೆಗೆ ಪಾದಚಾರಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸರಿಸುಮಾರು 2000 ಕಿಮೀ ವ್ಯಾಪ್ತಿಯಲ್ಲಿ ಫುಟ್ಪಾತ್ ಅಂಗಡಿಗಳನ್ನು ಯಾರಿಗೂ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುತ್ತಿದೆ.ಇದನ್ನೇ ನಂಬಿಕೊAಡು ಜೀವನ ಮಾಡುತ್ತಿರುವವರಿಗೆ ಪರ್ಯಾಯ ಮಾರ್ಗವನ್ನು ಶೀಘ್ರದಲ್ಲಿಯೇ ಒದಗಿಸಲಾಗುವುದು.ಗೃಹಜ್ಯೋತಿ ಯೋಜನೆಯನ್ನು ಅನರ್ಹರು ಪಡೆಯುತ್ತಿದ್ದಾರೆ.ಇದನ್ನು ತಪ್ಪಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗೃಹಜ್ಯೋತಿ ಸಂಭಂದ ಪುನರ್ ಪರಿಷ್ಕರಣೆ ಮಾಡಲು ಸಂಭAದಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ,ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಅವರಿಗೆ ಸಮರ್ಪಕವಾಗಿ ಉಚಿತ ವಿದ್ಯುತ್ ನೀಡಲಾಗುತ್ಥದೆ.ಇದರಿಂದಾಗಿ ಶ್ರೀಸಾಮಾನ್ಯರು ಗೊಂದಲಕ್ಕೀಡಾಗಬಾರದು ಎಂದು ಬಾಲಕೃಷ್ಣ ಸ್ಪಷ್ಟನೆ ನೀಡಿದರು.ಗ್ರಾಪಂ ಮಾಜಿ ಸದಸ್ಯರಾದ ದೊಡ್ಡಸೋಮನಹಳ್ಳಿ ಪಾಪಣ್ಣಗೌಡ ಮಾತನಾಡಿ ಶಾಸಕ ಹೆಚ್.ಸಿ.ಬಾಲಕೃಷ್ಣರವರು ಈ ಭಾರಿ ಶಾಸಕರಾದ ಮೇಲೆ ದೊಡ್ಡಸೋಮನಹಳ್ಳಿ ರಸ್ತೆಯಿಂದ ಗಂಗಣ್ಣ ಮನೆ,ಕ್ಯಾಸಪ್ಪ,ಮುದುಗೆರೆಯ್ಯ ಮನೆಯವರೆಗೆ 50 ಲಕ್ಷ ರೂ ವೆಚ್ಚದ ಅನುದಾನದಲ್ಲಿ ರಸ್ತೆ ಚರಂಡಿ ಕಾಮಗಾರಿಗೆ ಅನುದಾನ ನೀಡಿದ್ದು ಕಾಮಗಾರಿ ಪೂರ್ಣಗೊಂಡಿದೆ.ಇದೇ ದೊಡ್ಡಸೋಮನಹಳ್ಳಿಯಿಂದ ಮರಿಸೋಮನಹಳ್ಳಿ ಸೇರುವ ಒಂದು ಕಿಮೀ ರಸ್ತೆಗೆ ಒಂದು ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು 5 ಲಕ್ಷ ವೆಚ್ವದಲ್ಲಿ ಪಂಪು ಮೋಟಾರ್ ಬಿಡಲಾಗಿದೆ.ಮತ್ತೆ ಒಂದು ಕೋಟಿಯು ರಸ್ತೆ ಚರಂಡಿ ನಿರ್ಮಾಣ ಮಾಡಲು ಶಾಸಕರು ಹಣ ನೀಡಿದ್ದು ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.ಜನತಾ ಕಾಲೋನಿಯಿಂದ ತಿಪ್ಪಸಂದ್ರದವರೆಗೆ ರಸ್ತೆ ನಿರ್ಮಾಣ ಮಾಡಲು ಎರಡೂವರೆ ಕೋಟಿ ಅನುದಾನದ ಭರವಸೆ ನೀಡಿದ್ದು ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆಗಬೇಕಿದೆ.ಎಸ್.ಸಿ.ಕಾಲೋನಿಯಲ್ಲಿ ರಸ್ತೆ ಚರಂಡಿ ಕಾಮಗಾರಿಗೆ 50 ಲಕ್ಷ ಅನುದಾನವನ್ನು ಶಾಸಕರು ನೀಡಿದ್ದು ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಪಾಪಣ್ಣಗೌಡ ಸ್ಪಷ್ಟಪಡಿಸಿದರು.ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಜಿ.ವೆಂಕಟೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಪೊಲೀಸ್ ರಾಮಣ್ಣ, ಭೂಬ್ಯಾಂಕ್ ತಾಲ್ಲೂಕು ಅಧ್ಯಕ್ಷ ಜಾನಿಗೆರೆ ರವೀಶ್, ಟಿಎಪಿಸಿಎಂಎಸ್ ನಿರ್ದೇಶಕ ತಿಗಳರಪಾಳ್ಯ ರಮೇಶಣ್ಣ, ಚಿಕ್ಕಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗಂಗೋನಗಳ್ಳಿ ಶ್ರೀನಿವಾಸಮೂರ್ತಿ, ಮುಖಂಡರಾದ ಶೈಲಜಾವೆಂಕಟೇಶ್, ಯಲ್ಲಾಪುರ ಸಿಂಗ್ರಿಗೌಡ, ದೊಡ್ಡಕೆಂಚಯ್ಯ,ಹೊಸಪಾಳ್ಯ ಯತೀಶ್(ಅಪ್ಪಿ)ಕುಮಾರ್, ಹುಚ್ಚಹನುಮೇಗೌಡರ ಪಾಳ್ಯ ಧನಂಜಯ, ಡಿ.ಜೆ.ಬಸವರಾಜು, ಡಿ.ಸಿ.ಬಸವರಾಜು, ವೆಂಕಟೇಶಯ್ಯ, ರಾಮಚಂದ್ರಯ್ಯ, ದೇವರಾಜು, ಮಹೇಶ್ ಸೇರಿದಂತೆ ಮತ್ತಿತರಿದ್ದರು.
ನಾನು ದೆಹಲಿಗೆ ಸುಮ್ಮನೆ ಹೋಗಿದ್ದೆ, ಯಾವುದೇ ಲಾಭಿಗಲ್ಲ: ಹೆಚ್.ಸಿ.ಬಾಲಕೃಷ್ಣ



