ಬೆಂಗಳೂರು: 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿನ ಸದಾಶಿವ ನಗರದ ಸ್ಯಾಂಕಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನ ಚಿಕ್ಕಬಾಣವರ ಮೂಲದ ತೇಜು (20) ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಸದಾಶಿವನಗರ ಪೊಲೀಸರು ಮೃತದೇಹವನ್ನ ಹೊರಗೆ ತೆಗೆದಿದ್ದಾರೆ. ಮೇಲ್ನೋಟಕ್ಕೆ, ಪ್ರೀತಿ ವಿಚಾರಕ್ಕೆ ತೇಜು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೂ ಮುನ್ನ ಆಕೆ ನನಗೆ ಜೀವನ ಸಾಕಾಗಿದೆ ಅಂತ ಗೆಳೆಯನಿಗೆ ಮೆಸೇಜ್ ಮಾಡಿದ್ದಾಳೆ.



